ಬಿಗ್ ಬಾಸ್​ ವೇದಿಕೆಯಲ್ಲಿ ಸುದೀಪ್ ಕುಡಿಯೋದು ಏನು? ತೆಲುಗಿನಲ್ಲಿ ಉತ್ತರ ಕೊಟ್ಟ ಕಿಚ್ಚ

ನಟ ಕಿಚ್ಚ ಸುದೀಪ್​ ಅವರು ಕಳೆದ 11 ವರ್ಷಗಳಿಂದ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಶೋ ನಿರೂಪಣೆ ಮಾಡುವಾಗ ಅವರು ಆಗಾಗ ಏನೋ ಕುಡಿಯುತ್ತಾರಲ್ಲ ಅದು ಏನು ಎಂಬ ಪ್ರಶ್ನೆ ಹಲವರಿಗೆ ಇದೆ. ತೆಲುಗು ವೀಕ್ಷಕರು ಕೂಡ ಅದೇ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಸುದೀಪ್ ಉತ್ತರ ನೀಡಿದ್ದಾರೆ.

ಬಿಗ್ ಬಾಸ್​ ವೇದಿಕೆಯಲ್ಲಿ ಸುದೀಪ್ ಕುಡಿಯೋದು ಏನು? ತೆಲುಗಿನಲ್ಲಿ ಉತ್ತರ ಕೊಟ್ಟ ಕಿಚ್ಚ
ಸುದೀಪ್​

Updated on: Nov 04, 2024 | 9:14 AM

ಕಿಚ್ಚ ಸುದೀಪ್ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಫ್ಯಾನ್ಸ್ ಇದ್ದಾರೆ. ತೆಲುಗಿನ ಸಿನಿಮಾಗಳಲ್ಲೂ ನಟಿಸಿ ಸುದೀಪ್ ಸೈ ಎನಿಸಿಕೊಂಡಿದ್ದಾರೆ. ಅವರು ನಡೆಸಿಕೊಡುವ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮವನ್ನು ತೆಲುಗು ಪ್ರೇಕ್ಷಕರು ಕೂಡ ನೋಡುತ್ತಾರೆ. ಅಂಥ ಪ್ರೇಕ್ಷಕರಿಗೆ ಒಂದು ಪ್ರಶ್ನೆ ಮೂಡಿದೆ. ಶೋ ನಿರೂಪಣೆ ಮಾಡುವಾಗ ಸುದೀಪ್​ ಅವರು ಏನು ಕುಡಿಯುತ್ತಾರೆ? ಅದಕ್ಕೆ ಈಗ ಸ್ವತಃ ಸುದೀಪ್ ಅವರು ಉತ್ತರ ಕೊಟ್ಟಿದ್ದಾರೆ. ಇದು ತೆಲುಗು ಫ್ಯಾನ್ಸ್​ಗೆ ಮೂಡಿದ ಪ್ರಶ್ನೆ ಆದ್ದರಿಂದ ತೆಲುಗಿನಲ್ಲಿಯೇ ಸುದೀಪ್ ಅವರು ಉತ್ತರಿಸಿದ್ದಾರೆ.

ಭಾನುವಾರದ (ನವೆಂಬರ್​ 3) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯ ಪ್ರಸ್ತಾಪಿಸಿದರು. ‘ತೆಲುಗು ಬಿಗ್ ಬಾಸ್ ನೋಡುತ್ತಿರುವ ಎಷ್ಟೋ ಜನ ಫ್ಯಾನ್ಸ್ ಒಂದು ಪ್ರಶ್ನೆ ಹಾಕಿ ಹೇಳುತ್ತಾ ಇರುತ್ತಾರೆ. ಸುದೀಪ್ ಅವರು ವೇದಿಕೆಯಲ್ಲಿ ಕುಡಿತಾ ಇರುತ್ತಾರಲ್ಲ ಅದು ಏನು ಅಂತ. ಇದರಲ್ಲಿ ಸ್ವಲ್ಪ ರಮ್, ಸ್ವಲ್ಪ ವಿಸ್ಕಿ..’ ಎಂದು ಕನ್ನಡದಲ್ಲಿ ಮಾತಾಡುತ್ತಿದ್ದ ಸುದೀಪ್​ ಅವರು ನಂತರ ಸ್ಪರ್ಧಿಗಳ ಸಹಾಯದಿಂದ ತೆಲುಗಿನಲ್ಲಿ ಮಾತು ಮುಂದುವರಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲೂ ಸುದೀಪ್​ಗೆ ಕಾಡುತ್ತಿದೆ ತಾಯಿ ನೆನಪು; ಎಮೋಷನಲ್ ಆದ ಕಿಚ್ಚ

‘ಸ್ವಲ್ಪ ಅನ್ನೋದಕ್ಕೆ ತೆಲುಗಿನಲ್ಲಿ ಏನು ಹೇಳ್ತಾರೆ? ಕೊಂಚ ರಮ್ ಉಂದಿ, ಕೊಂಚ ವಿಸ್ಕಿ ಉಂದಿ, ಕೊಂಚ ಟಕೀಲಾ ಉಂದಿ ಅನಿ ಥಿಂಕ್ ಚೈ ವದ್ದು. ಕಾಫಿ ಉಂದಿ. ಕಾನಿ ಈ ಕಂಟೆಸ್ಟೆಂಟ್​ಕೋ ನಾಕು ಸಾರಾಯಿ ಕಾವಾಲಿ. ಇಕ್ಕಡ ಲೇದು’ ಎಂದು ಸುದೀಪ್​ ಹೇಳಿದ್ದು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು. ಭಾನುವಾರದ ಸಂಚಿಕೆಯಲ್ಲಿ ಈ ರೀತಿಯ ಮಾತುಗಳ ಮೂಲಕ ಸುದೀಪ್ ಅವರು ನಗು ತುಂಬಿಸಿದರು.

ಬಿಗ್ ಬಾಸ್​ ಎಲಿಮಿನೇಷನ್​:

5ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಮಾಸನಾ ಅವರು ಎಲಿಮಿನೇಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮಾನಸಾ ಅವರನ್ನು ಟ್ರೋಲ್ ಮಾಡುತ್ತಿದ್ದರು. ಆದರೆ ಅಂಥವರಿಗೆ ಮಾನಸಾ ಪತಿ ತುಕಾಲಿ ಸಂತೋಷ್ ಅವರು ತಿರುಗೇಟು ನೀಡಿದರು. ‘ನೀನೇ ನನಗೆ ಯಾವಾಗಲೂ ಮಿಸ್ ಇಂಡಿಯಾ ಆಗಿರುತ್ತೀಯ. ಈ ಪ್ರಪಂಚ ಏನೇ ಅಂದುಕೊಳ್ಳಬಹುದು. ನನ್ನ ಈ ಸಾಧನೆಗೆ ನೀನೇ ಕಾರಣ. ನಿನ್ನನ್ನು ನಾನು ಬಿಟ್ಟುಕೊಡಲ್ಲ’ ಎಂದು ತುಕಾಲಿ ಸಂತೋಷ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us