ಕಿರಣ್​ ರಾಜ್​​ಗೆ ಕಿಚ್ಚ ಸುದೀಪ್​ ಕಡೆಯಿಂದ ಸಿಕ್ತು ಸಲಹೆ; ‘ಕನ್ನಡತಿ’ ನಟನ ಉತ್ತರ ಏನು?

| Updated By: ಮದನ್​ ಕುಮಾರ್​

Updated on: Sep 06, 2021 | 7:24 AM

ಕಿರಣ್​ ರಾಜ್​ ಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ಅವರು ಎಲ್ಲರ ಜತೆ ಬೆರೆಯೋದು ತುಂಬಾನೇ ಕಡಿಮೆ. ಇದನ್ನು ಅವರೇ ಹೇಳಿಕೊಂಡಿದ್ದಾರೆ ಕೂಡ.

ಕಿರಣ್​ ರಾಜ್​​ಗೆ ಕಿಚ್ಚ ಸುದೀಪ್​ ಕಡೆಯಿಂದ ಸಿಕ್ತು ಸಲಹೆ; ‘ಕನ್ನಡತಿ’ ನಟನ ಉತ್ತರ ಏನು?
ಕಿಚ್ಚ ಸುದೀಪ್, ಕಿರಣ್​ ರಾಜ್​
Follow us on

‘ಕನ್ನಡತಿ’ ಧಾರಾವಾಹಿ ಮೂಲಕ ಕಿರಣ್​ ರಾಜ್​ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಹರ್ಷ ಪಾತ್ರದ ಮೂಲಕ ಜನರಿಗೆ ಇಷ್ಟವಾಗಿದ್ದಾರೆ ಕಿರಣ್​. ಈಗ, ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ವೀಕ್ಷಕರು ಕಿರಣ್​ ಅವರ ನಿಜವಾದ ವ್ಯಕ್ತಿತ್ವನ್ನು ನೋಡಿ ಮತ್ತಷ್ಟು ಖುಷಿಪಟ್ಟಿದ್ದಾರೆ. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಅವರು ಕಿರಣ್​ ರಾಜ್​ಗೆ ಕಿವಿಮಾತೊಂದನ್ನು ಹೇಳಿದ್ದಾರೆ.

ಕಿರಣ್​ ರಾಜ್​ ಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ಅವರು ಎಲ್ಲರ ಜತೆ ಬೆರೆಯೋದು ತುಂಬಾನೇ ಕಡಿಮೆ. ಇದನ್ನು ಅವರೇ ಹೇಳಿಕೊಂಡಿದ್ದಾರೆ ಕೂಡ. ಮೊದಲ ದಿನ ಬಿಗ್​ ಬಾಸ್​ ಮನೆಯಲ್ಲಿ ಮಾತನಾಡಿದ್ದ ಅವರು, ‘ನನ್ನ ತಪ್ಪಿದ್ದಾಗ ನಾನು ಎದುರಿನವರು ಹೇಳಿದ್ದನ್ನು ಕೇಳುತ್ತೇನೆ. ಆದರೆ, ಸುಖಾಸುಮ್ಮನೆ ಇನ್ಸಲ್ಟ್​ ಸ್ವೀಕರಿಸೋಕೆ ನಾನು ರೆಡಿ ಇಲ್ಲ. ಆಗ ಕೋಪ ಬರುತ್ತದೆ. ನಾನು ಎಲ್ಲರಿಗೂ ಗೌರವ ಕೊಡ್ತೀನಿ, ಎದುರಿನ ವ್ಯಕ್ತಿಗಳಿಂದಲೂ ನಾನು ಅದನ್ನೇ ನಿರೀಕ್ಷೆ ಮಾಡುತ್ತೇನೆ. ಹೀಗಾಗಿ, ಬಿಗ್​ ಬಾಸ್​ ಮನೆಗೆ ಹೋಗೋಕೆ ನನಗೆ ಭಯ’ ಎಂದಿದ್ದರು ಕಿರಣ್​ ರಾಜ್​. ಆದರೆ, ಈಗ ಆರು ದಿನ ಮನೆಯಲ್ಲಿ ಹೇಗೆ ಕಳೆಯಿತು ಎಂಬುದು ಅವರಿಗೆ ಗೊತ್ತಾಗಲಿಲ್ಲ.

‘ಬಿಗ್​ ಬಾಸ್​ ಮನೆ ಒಳಗೆ ಹೋಗುವುದಕ್ಕೂ ಮೊದಲು ತಲೇಲಿ ಒಂದಿಟ್ಟುಕೊಂಡು, ಮನೆ ಒಳಗೆ ಹೋದಾಗ ಮತ್ತೇನಾದರೂ ಆಯಿತಾ?’ ಎಂದು ಕಿರಣ್​ ರಾಜ್​ಗೆ ಪ್ರಶ್ನೆ ಮಾಡಿದರು ಸುದೀಪ್​. ‘ನಾನು ನನ್ನ ಕೆಲಸ ಅಂತ ನನ್ನದೇ ಜೋನ್​ನಲ್ಲೇ ಇರ್ತಿದ್ದೆ. ಎಲ್ಲರ ಜತೆ ಬೆರೆತರೆ ನನ್ನ ಗುರಿಗೆ ತೊಂದರೆ ಆಗಬಹುದು ಎನ್ನುವುದು ನನ್ನ ಆಲೋಚನೆ. ಹೊರಗೆ ಒಬ್ನೇ ಇರುತ್ತಿದ್ದೆ. ಹೀಗಿರುವಾಗ ಬಿಗ್​ ಬಾಸ್​ ಮನೆಗೆ ಹೋಗಿ ಏನು ಮಾಡೋದು ಎಂದುಕೊಂಡಿದ್ದೆ. ಬಿಗ್​ ಬಾಸ್​ ಮನೆಗೆ ಬಂದವರಲ್ಲಿ ಒಂದಷ್ಟು ಜನ ಗೊತ್ತಿದ್ರು. ಆದ್ರೂ, ಒಂದು ಕಡೆ, ನಾನು ಈ ಜಾಗಕ್ಕೆ ಸೇರಿದವನಲ್ಲ ಎನಿಸುತ್ತಿತ್ತು. ಆದರೂ, ಆರು ದಿನ ಕಳೆದಿದ್ದು ಗೊತ್ತಾಗಿಲ್ಲ’ ಎಂದರು ಕಿರಣ್​​.

‘ಕಿರಣ್​ ಅವರೇ ನಿಮಗೊಂದು ಸಜೇಶನ್. ನೀವು ಜನಗಳ ಭೇಟಿ ಆಗ್ಬೇಕು. ಇಲ್ಲ ಅಂದ್ರೆ ಪಾತ್ರಗಳು ಅರ್ಥ ಆಗಲ್ಲ. ಅವರಿಂದಲೇ ಪಾತ್ರಕ್ಕೆ ಪ್ರೇರಣೆ ಸಿಗುತ್ತದೆ. ಅನುಭವ ಇಲ್ಲ ಅಂದ್ರೆ ಪಾತ್ರಗಳನ್ನು ಮಾಡೋಕೆ ಸಾಧ್ಯವಿಲ್ಲ’ ಎಂದು ಕಿವಿ ಮಾತು ಹೇಳಿದರು ಕಿಚ್ಚ.

‘ನಾನು ಎಲ್ಲರ ಜತೆಯೂ ಮಾತಾಡ್ತೀನಿ. ಆದರೆ, ಎಷ್ಟು ಕನೆಕ್ಟ್​ ಆಗಬೇಕೋ ಅಷ್ಟೇ ಆಗ್ತೀನಿ. ಭಾವನೆಗಳನ್ನು ನಾನು ಕ್ಯಾರಿ ಮಾಡಲ್ಲ. ಅವರು ಇದಾರೆ ಅಂದ್ರೆ ಖುಷಿ. ಇಲ್ಲ ಎಂದರೆ ಬೇಸರ ಮಾಡಿಕೊಳ್ಳುವುದಿಲ್ಲ. ಅದು ನನ್ನ ಆ್ಯಟಿಟೂಡ್​’ ಎಂದರು ಕಿರಣ್​ ರಾಜ್​.

ಇದನ್ನೂ ಓದಿ:

ನಟ ಕಿರಣ್​ ರಾಜ್​ ಪರಿಚಯಿಸಿದ್ರು ಹೊಸ ಬಟ್ಟೆ ಬ್ರ್ಯಾಂಡ್​; ಇದರ ಹಿಂದಿದೆ ಒಂದೊಳ್ಳೆಯ ಉದ್ದೇಶ

 ‘ನಾನು ಎಷ್ಟು ಟೇಕ್​ ತೆಗೆದುಕೊಳ್ತೀನಿ ಅಂತ ಬೆಟ್​ ಕಟ್ಟುತ್ತಿದ್ದರು’; ಅವಮಾನದ ಹಾದಿ ನೆನೆದ ಕಿರಣ್​ ರಾಜ್