Lakshana Serial: ಶ್ವೇತಾಳ ಕುತಂತ್ರಕ್ಕೆ ಸೋತ ನಕ್ಷತ್ರ, ದುರಕಂಕಾರಿ ಶ್ವೇತಾಳ ಅಟ್ಟಹಾಸಕ್ಕೆ ಬ್ರೇಕ್ ಯಾವಾಗ?

ನಿನ್ನನ್ನು ಮನೆಯವರ ದೃಷ್ಟಿಯಲ್ಲಿ ಕೆಟ್ಟವಳನ್ನಾಗಿ ಮಾಡುತ್ತೇನೆ, ಇನ್ನು ಕೂಡಾ ಆಟ ಬಾಕಿ ಇದೆ ಎಂದು ಶ್ವೇತಾ ಹೇಳುತ್ತಾಳೆ. ಈಕೆಯ ಮಾತನ್ನು ಕೇಳಿ ನಕ್ಷತ್ರಳಿಗೆ ಒಮ್ಮೆ ಶಾಕ್ ಆಗುತ್ತದೆ. ದುರಕಂಕಾರಿ ಶ್ವೇತಾಳ ಅಟ್ಟಹಾಸಕ್ಕೆ ನಕ್ಷತ್ರ ಬ್ರೇಕ್ ಹಾಕುತ್ತಾಳಾ.

Lakshana Serial: ಶ್ವೇತಾಳ ಕುತಂತ್ರಕ್ಕೆ ಸೋತ ನಕ್ಷತ್ರ, ದುರಕಂಕಾರಿ ಶ್ವೇತಾಳ ಅಟ್ಟಹಾಸಕ್ಕೆ ಬ್ರೇಕ್ ಯಾವಾಗ?
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 08, 2022 | 12:11 PM

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ನಕ್ಷತ್ರಳಿಗೆ ಕೊಟ್ಟ ಮಾತಿನಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಎಂದು ಭೂಪತಿ ಪ್ಲನ್ ಮಾಡಿ ಅದರಲ್ಲಿ ವಿಫಲನಾಗಿದ್ದಾನೆ. ನಕ್ಷತ್ರ- ಭೂಪತಿ ಪ್ರೀತಿ ಪಯಣ ಶುರುವಾಗಿದೆ.

ನಕ್ಷತ್ರ ಶಕುಂತಳಾದೇವಿಯ ಕೆಂಗಣ್ಣಿಗೆ ಗುರಿ

ಶಕುಂತಳಾದೇವಿಯ ಕೆಂಗಣ್ಣಿಗೆ ಗುರಿ ಮಾಡುವಂತೆ ಪ್ಲಾನ್ ಮಾಡುತ್ತಿದ್ದಾಳೆ ಶ್ವೇತಾ. ನಕ್ಷತ್ರ ಮನೆಯವರನ್ನೆಲ್ಲಾ ಒಂದುಗೂಡಿಸಲು ಪ್ರಯತ್ನಿಸುತ್ತಿದ್ದರೆ, ಅದೇ ಮನೆಯಲ್ಲಿದ್ದುಕೊಂಡು ಮನೆಹಾಳು ಕೆಲಸ ಮಾಡಲು ಹೊರಟಿದ್ದಾಳೆ ಶ್ವೇತಾ. ಮನೆಕೆಲಸದಾಕೆಗೆ ಮೈ ಹುಷಾರು ಇಲ್ಲ ಎಂದು ಆಕೆಯನ್ನು ಮನೆಗೆ ಕಳುಹಿಸಿ, ಕೆಲಸವನ್ನೆಲ್ಲಾ ನಕ್ಷತ್ರ ಮಾಡುತ್ತಿದ್ದಾಗ ತನ್ನ ಬೇಳೆ ಬೇಯಿಸಿಕೊಳ್ಳಲು ಶ್ವೇತಾ ಅಲ್ಲಿಗೆ ಬಂದು ನಾನು ಏನಾದರೂ ಸಹಾಯ ಮಾಡುತ್ತೇನೆ ಎಂದು ಹೇಳಿ ಪಾತ್ರೆ ತೊಳೆಯುತ್ತಿರುತ್ತಾಳೆ. ಅಲ್ಲೇ ಹೊರಗಡೆ ಫೋನ್ ಕಾಲ್‌ನಲ್ಲಿ ಮಾತನಾಡುತ್ತಿದ್ದ ಶಕುಂತಳಾದೇವಿಯನ್ನು ನೋಡಿದ ಶ್ವೇತಾ ಏನಾದರೂ ಕಿತಾಪತಿ ಮಾಡಿ ನಕ್ಷತ್ರಳಿಗೆ ಅತ್ತೆಯ ಕೈಯಿಂದ ಬೈಯಿಸಿಕೊಳ್ಳಬೇಕೆಂದು, ಅಲ್ಲೇ ಇದ್ದ ಪಾತ್ರೆಯನ್ನು ನೆಲಕ್ಕೆ ಎಸೆದು ತಪ್ಪಾಯ್ತು ನಕ್ಷತ್ರ ಏನೋ ಗೊತ್ತಿಲ್ಲದೆ ಮಾಡಿದ್ದು, ಅದಕ್ಕೆ ಬೈಬೇಡ ಎಂದು ಮೃದುವಾಗಿ ಮಾತನಾಡುತ್ತಾಳೆ.

ಇದನ್ನು ಗಮನಿಸಿದ ಶಕುಂತಳಾದೇವಿ ಅವರ ಬಳಿಗೆ ಬಂದು ನೀನೇಕೆ ಮನೆ ಕೆಲಸ ಮಾಡುತ್ತೀಯಾ ಎಂದು ಶ್ವೇತಾಳಿಗೆ ಹೇಳುತ್ತಾರೆ. ನಮ್ಮದೇ ಮನೆ ಅಲ್ವ, ಕೆಲಸ ಮಾಡಿದರೆ ಅದರಲ್ಲೇನಿದೆ ಅಂತ ಹೇಳುತ್ತಾಳೆ ಶ್ವೇತಾ. ಈಕೆಯ ಈ ಮಾತನ್ನು ಕೇಳಿ ನಿನ್ನಷ್ಟು ಒಳ್ಳೆಯ ಮನಸ್ಸು ಎಲ್ಲರಿಗು ಇರಲ್ಲ ಎಂದು ನಕ್ಷತ್ರಳ ಎದುರೇ ಶ್ವೇತಾಳನ್ನು ಹೊಗಳುತ್ತಾರೆ. ಒಂದು ಪ್ಲಾನ್ ವರ್ಕೌಟ್ ಆಯಿತೆಂದು ಖುಷಿ ಪಡುತ್ತಾಳೆ ಶ್ವೇತಾ.

ನಂತರ ನಕ್ಷತ್ರಳನ್ನು ಮನೆಯವರ ಮುಂದೆ ಕೆಟ್ಟವಳನ್ನಾಗಿಸಬೇಕೆಂದು ಕುತಂತ್ರವೊಂದನ್ನು ಮಾಡುತ್ತಾಳೆ ಶ್ವೇತಾ. ಆಕೆ ಮಾಡಿದ ಪ್ಲಾನ್ ಪ್ರಕಾರ ಅಡುಗೆ ಕೋಣೆಯಿಂದ ಉಪ್ಪನ್ನು ತೆಗೆದು ಒಂದು ಸಣ್ಣ ಡಬ್ಬಿಗೆ ಹಾಕುತ್ತಿರುತ್ತಾಳೆ. ಇದನ್ನು ನೋಡಿದ ನಿಧಿ ಪುಟ್ಟ, ಉಪ್ಪು ಯಾಕೆ ಎಂದು ಪ್ರಶ್ನಿಸುತ್ತಾಳೆ. ನನಗೆ ಉಪ್ಪು ಇಷ್ಟ ನಾನು ಅದನ್ನೇ ತಿನ್ನೋದು ಅಂತ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಆಕೆಯ ಕೋಣೆಗೆ ಹೋಗುವಾಗ ಎದುರಿಗೆ ನಕ್ಷತ್ರ ಸಿಗುತ್ತಾಳೆ. ನನಗೆ ತುಂಬಾ ತಲೆ ನೋವಾಗುತ್ತಿದೆ. ಒಂದು ಗ್ಲಾಸ್ ಸ್ಟಾಂಗ್ ಕಾಫಿ ಮಾಡಿಕೊಡುವಂತೆ ನಕ್ಷತ್ರಳಿಗೆ ಹೇಳಿ ರೂಮ್ ಕಡೆ ಹೋಗುತ್ತಾಳೆ.

ಶ್ವೇತಾಳ ಕುತಂತ್ರದ ಅರಿವೇ ಇರದ ನಕ್ಷತ್ರ ಒಳ್ಳೆತನದಿಂದಲೇ ಕಾಫಿ ಕೊಟ್ಟು ಹೋಗುತ್ತಾಳೆ. ಆಕೆ ಕೊಟ್ಟ ಕಾಫಿಗೆ ತಾನು ತಂದಿದ್ದ ಉಪ್ಪನ್ನು ಸೇರಿಸಿ ಇದೇನು ಕಾಫಿ ಇಷ್ಟು ಉಪ್ಪಾಗಿದೆ ಎಂದು ಜೋರಾಗಿ ಕೂಗುತ್ತಾಳೆ ಶ್ವೇತಾ. ಈಕೆಯ ಕೂಗಾಟ ಕೇಳಿ ಭೂಪತಿ ಸಮೇತ ಮನೆಯವರೆಲ್ಲರೂ ಕೋಣೆಗೆ ಬರುತ್ತಾರೆ. ನಕ್ಷತ್ರ ಕಾಫಿಗೆ ಉಪ್ಪು ಹಾಕಿದ್ದಾಳೆ ಎಂದು ದೂರುತ್ತಾಳೆ ಶ್ವೇತಾ. ಅದೇ ಕಾಫಿಯನ್ನು ಸ್ವಲ್ಪ ಶಕುಂತಳಾದೇವಿ ಕುಡಿದು ಏನಿದು ಇಷ್ಟು ಉಪ್ಪು ಹಾಕಿದ್ದೀಯಾ.

ನೀನು ಆಹಾರವನ್ನು ವೇಸ್ಟ್ ಮಾಡ್ತಿದ್ದೀಯಾ, ಕೊನೆಗೂ ನಿನ್ನ ಬುದ್ಧಿ ತೋರಿಸಿಬಿಟ್ಟೆಯಲ್ಲ ಎಂದು ಶಕುಂತಳಾದೇವಿ ನಕ್ಷತ್ರಳಿಗೆ ಬೈಯುತ್ತಾರೆ. ನಾನು ಉಪ್ಪು ಹಾಕುಲ್ಲ, ಸಕ್ಕರೆನೇ ಹಾಕಿದ್ದು ಎಂದು ನಕ್ಷತ್ರ ಎಷ್ಟು ಹೇಳಿದರೂ ಯಾರು ನಂಬಲಿಲ್ಲ. ಭೂಪತಿ ಕೂಡಾ ಇದನ್ನು ನಂಬದೆ, ಶ್ವೇತಾ ನಮ್ಮ ಮನೆಗೆ ಬಂದಿರೋ ಗೆಸ್ಟ್. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಲ್ವಾ ಎಂದು ನಕ್ಷತ್ರಳಿಗೆ ಬುದ್ಧಿಮಾತು ಹೇಳುತ್ತಾನೆ.

ಮಾಡಿದ ಪ್ಲಾನ್ ಸರಿಯಾಗಿ ಯಶಸ್ಸಾಗಿದೆ ಎಂದು ಶ್ವೇತಾ ಬಹಳ ಖುಷಿ ಪಡುತ್ತಾಳೆ. ಇತ್ತ ಅಡುಗೆ ಮನೆಯಲ್ಲಿ ನಾನು ಕಾಫಿಗೆ ಸಕ್ಕರೆ ಹಾಕಿದ್ದು, ಉಪ್ಪು ಹಾಕಿರೋದಕ್ಕೆ ಸಾಧ್ಯನೇ ಇಲ್ಲ ಎಂದು ನಕ್ಷತ್ರ ಯೋಚನೆ ಮಾಡುತ್ತ ನಿಂತಿದ್ದಾಗ, ನಿಧಿ ಪುಟ್ಟಳಿಂದ ಶ್ವೇತಾ ಅಡುಗೆ ಕೋಣೆಯಿಂದ ಉಪ್ಪು ತೆಗೆದುಕೊಂಡು ಹೋದ ವಿಷಯ ಗೊತ್ತಾಗುತ್ತದೆ. ಕೊನೆಗೆ ಇದೆಲ್ಲಾ ನಾನೇ ಮಾಡಿದ್ದು ಎಂದು ನಕ್ಷತ್ರಳಿಗೆ ಶ್ವೇತಾ ಹೇಳುತ್ತಾಳೆ.

ನಿನ್ನನ್ನು ಮನೆಯವರ ದೃಷ್ಟಿಯಲ್ಲಿ ಕೆಟ್ಟವಳನ್ನಾಗಿ ಮಾಡುತ್ತೇನೆ, ಇನ್ನು ಕೂಡಾ ಆಟ ಬಾಕಿ ಇದೆ ಎಂದು ಶ್ವೇತಾ ಹೇಳುತ್ತಾಳೆ. ಈಕೆಯ ಮಾತನ್ನು ಕೇಳಿ ನಕ್ಷತ್ರಳಿಗೆ ಒಮ್ಮೆ ಶಾಕ್ ಆಗುತ್ತದೆ. ದುರಕಂಕಾರಿ ಶ್ವೇತಾಳ ಅಟ್ಟಹಾಸಕ್ಕೆ ನಕ್ಷತ್ರ ಬ್ರೇಕ್ ಹಾಕುತ್ತಾಳಾ ಎಂದು ಮುಂದಿನ ಸಂಚಿಕೆಗಳಲಗಲಿ ನೋಡಬೇಕಿದೆ.

ಮಧುಶ್ರೀ