ಬಿಗ್​ ಬಾಸ್​​ನಲ್ಲಿ ನಾಮಿನೇಟ್​ ಆದ ಘಟಾನುಘಟಿಗಳು ; ಆದರೆ, ಈ ವಾರ ನಡೆಯಲ್ಲ ಎಲಿಮಿನೇಷನ್

ಬಿಗ್ ಬಾಸ್​ನಲ್ಲಿ ಈ ವಾರ ಎಲಿಮಿನೇಷನ್​ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಪ್ರಶಾಂತ್ ಸಂಬರ್ಗಿ ಅವರು ಕ್ಯಾಪ್ಟನ್ ಆಗಿದ್ದರಿಂದ ಇಮ್ಯುನಿಟಿ ಪಡೆದಿದ್ದರು. ಹೀಗಾಗಿ, ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

ಬಿಗ್​ ಬಾಸ್​​ನಲ್ಲಿ ನಾಮಿನೇಟ್​ ಆದ  ಘಟಾನುಘಟಿಗಳು ; ಆದರೆ, ಈ ವಾರ ನಡೆಯಲ್ಲ ಎಲಿಮಿನೇಷನ್
ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 08, 2022 | 2:38 PM

ಬಿಗ್ ಬಾಸ್​ನಲ್ಲಿ (Bigg Boss) ಪ್ರತಿ ವಾರದ ನಾಮಿನೇಷನ್ ಹಾಗೂ ಎಲಿಮಿನೇಷನ್ ಪ್ರಕ್ರಿಯೆ (Elimination Process) ತಪ್ಪುವುದಿಲ್ಲ. ಇಡೀ ಸೀಸನ್​ನಲ್ಲಿ ಎಲ್ಲಾದರೂ ಒಮ್ಮೆ ಎಲಿಮಿನೇಷನ್​ ಇಲ್ಲದೆ ವಾರ ಪೂರ್ಣಗೊಳ್ಳುತ್ತದೆ. ಈ ಬಾರಿಯೂ ಬಿಗ್ ಬಾಸ್​​ನಲ್ಲಿ ಹಾಗೆಯೇ ಆಗುವ ಸೂಚನೆ ಸಿಕ್ಕಿದೆ. ಘಟಾನುಘಟಿಗಳ ಮೇಲೆ ಎಲಿಮಿನೇಷನ್​ ತೂಗುಗತ್ತಿ ಇದೆ. ಹೀಗಿರುವಾಗಲೇ ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ನಡೆಯೋದು ಅನುಮಾನ ಎನ್ನಲಾಗುತ್ತಿದೆ. ಬಿಗ್ ಬಾಸ್ ನೀಡಿದ ವಿಶೇಷ ಸೂಚನೆ ಹೀಗೊಂದು ಕುತೂಹಲವನ್ನು ಹುಟ್ಟು ಹಾಕಿದೆ.

ಬಿಗ್ ಬಾಸ್​ನಲ್ಲಿ ಈ ವಾರ ಎಲಿಮಿನೇಷನ್​ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಪ್ರಶಾಂತ್ ಸಂಬರ್ಗಿ ಅವರು ಕ್ಯಾಪ್ಟನ್ ಆಗಿದ್ದರಿಂದ ಇಮ್ಯುನಿಟಿ ಪಡೆದಿದ್ದರು. ಹೀಗಾಗಿ, ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಇನ್ನು, ಕಳೆದ ವಾರದ ಟಾಸ್ಕ್​ನಲ್ಲಿ ಸಿಕ್ಕ ಆಯ್ಕೆಯ ಪ್ರಕಾರ ವಿನೋದ್ ಗೊಬ್ಬರಗಾಲ ಅವರು ಕಾವ್ಯಾ ಅವರನ್ನು ನಾಮಿನೇಷನ್​ನಿಂದ ತಪ್ಪಿಸಿದ್ದಾರೆ. ಉಳಿದ ಸದಸ್ಯರ ಹೆಸರನ್ನು ನಾಮಿನೇಷನ್​ಗೆ ಸೂಚಿಸುವ ಅವಕಾಶ ಇತ್ತು.

ರೂಪೇಶ್ ರಾಜಣ್ಣ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ವೋಟ್​ಗಳು ಬಿದ್ದವು. ಅರುಣ್ ಸಾಗರ್ ಅವರನ್ನು ಮನೆಯಲ್ಲಿ ಅನೇಕರು ನಾಮಿನೇಟ್ ಮಾಡಿದರು. ಅನುಪಮಾ ಗೌಡ, ದೀಪಿಕಾ ದಾಸ್​, ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ ಅವರನ್ನು ಮನೆ ಮಂದಿ ನಾಮಿನೇಟ್ ಮಾಡಿದರು. ಕ್ಯಾಪ್ಟನ್ ಪ್ರಶಾಂತ್ ಅವರು ಮನೆಯಲ್ಲಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಈ ಆಯ್ಕೆಯಲ್ಲಿ ಅವರು ಅಮೂಲ್ಯ ಗೌಡ ಅವರ ಹೆಸರನ್ನು ತೆಗೆದುಕೊಂಡರು. ಹೀಗಾಗಿ, ಅಮೂಲ್ಯ ಕೂಡ ನಾಮಿನೇಟ್ ಆದರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ವೀಕೆಂಡ್ ಎಪಿಸೋಡ್​ನ ಒಂದು ವಾರ ಮಿಸ್ ಮಾಡಿದ್ರೇನಂತೆ? ಬಡ್ಡಿ ಸಮೇತ ವಾಪಸ್ ಕೊಟ್ಟ ಕಿಚ್ಚ ಸುದೀಪ್

ಈ ವಾರ ಬಿಗ್ ಬಾಸ್​ ಮನೆಯಲ್ಲಿ ಎಲಿಮಿನೇಷನ್ ನಡೆಯೋದು ಅನುಮಾನ ಎನ್ನಲಾಗುತ್ತಿದೆ. ಪ್ರತಿ ವಾರ ಎಲಿಮಿನೇಷನ್​​ಗೆ ನಾಮಿನೇಷನ್ ನಡೆದ ಬಳಿಕ ವೂಟ್ ಆ್ಯಪ್​ನಲ್ಲಿ ವೋಟಿಂಗ್ ಮಾಡಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಅದಕ್ಕೆ ಅವಕಾಶ ಇಲ್ಲ. ‘ವೀಕ್ಷಕರ ಗಮನಕ್ಕೆ, ವೋಟಿಂಗ್ ಲೈನ್ಸ್ ತೆರೆದಿರುವುದಿಲ್ಲ’ ಎಂಬ ಲೈನ್ ತೋರಿಸಲಾಗಿದೆ. ಇದು ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಎಲಿಮಿನೇಷನ್ ಇಲ್ಲದ ಸಂದರ್ಭದಲ್ಲಿ ಮಾತ್ರ ಬಿಗ್ ಬಾಸ್ ಈ ರೀತಿ ಮಾಡುತ್ತಾರೆ. ಗುರುವಾರದ ಒಳಗೆ ವೋಟಿಂಗ್ ಆಯ್ಕೆ ತೆರೆಯಲಿದೆಯೇ ಎಂಬುದನ್ನು ಕಾದು ನೋಡಬೇಕು. ಒಂದೊಮ್ಮೆ ವೋಟಿಂಗ್ ಲೈನ್ಸ್ ತೆರೆಯದೇ ಇದ್ದರೆ ಈ ವಾರ ಎಲಿಮಿನೇಷನ್ ಇರುವುದಿಲ್ಲ ಅನ್ನೋದು ಖಚಿತವಾಗಲಿದೆ.

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ