‘ಲಕ್ಷ್ಮೀ ಬಾರಮ್ಮ’ ಕೊನೆ ಆಗುವುದಕ್ಕೂ ಮೊದಲು ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ

ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೊನೆಯಾಗಿದೆ. ಕೊನೆಯ ಕಂತುಗಳಲ್ಲಿ ಕಾವೇರಿಯ ಸಾವು, ಕೀರ್ತಿಯ ನಿರ್ಗಮನ ಮತ್ತು ಅನಿರೀಕ್ಷಿತ ಟ್ವಿಸ್ಟ್‌ಗಳು ಸೇರಿವೆ. ಆದರೆ, ಕೊನೆಯಲ್ಲಿ ಗುಡ್​ನ್ಯೂಸ್ ಒಂದನ್ನು ನೀಡಲಾಗಿದೆ. ವೀಕ್ಷಕರು ಇಷ್ಟಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಸಮಯದಲ್ಲಿ (ರಾತ್ರಿ 7.30) ಇನ್ನುಮುಂದೆ ‘ಮುದ್ದು ಸೊಸೆ’ ಬರಲಿದೆ.

‘ಲಕ್ಷ್ಮೀ ಬಾರಮ್ಮ’ ಕೊನೆ ಆಗುವುದಕ್ಕೂ ಮೊದಲು ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ
ಲಕ್ಷ್ಮೂ ಬಾರಮ್ಮ

Updated on: Apr 12, 2025 | 7:00 AM

ಕಲರ್ಸ್​ ಕನ್ನಡದಲ್ಲಿ (Colors Kannada) ಉತ್ತಮ ಟಿಆರ್​ಪಿಯೊಂದಿಗೆ ಮುನ್ನುಗ್ಗುತ್ತಿದ್ದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಈಗ ಕೊನೆ ಆಗಿದೆ. 600ಕ್ಕೂ ಅಧಿಕ ಎಪಿಸೋಡ್​ಗಳನ್ನು ಪ್ರಸಾರ ಕಂಡಿದ್ದ ಈ ಸೀರಿಯಲ್​ನ ಏಕಾಏಕಿ ಕೊನೆಗೊಳಿಸಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಏಪ್ರಿಲ್ 11ರಂದು ಧಾರಾವಾಹಿಯ ಕೊನೆಯ ಎಪಿಸೋಡ್ ಪ್ರಸಾರ ಕಂಡಿದ್ದು, ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ ಅನ್ನೋದು ವಿಶೇಷ. ವೀಕ್ಷಕರು ಇಷ್ಟಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಕಾವೇರಿಯ ನಿಜವಾದ ಮುಖ ಮಗ ವೈಷ್ಣವ್​ಗೆ ಗೊತ್ತಾಗಿದೆ. ತನ್ನ ಪತ್ನಿಗೆ ತಾಯಿ ಮಾಡಿರುವ ಅನ್ಯಾಯ ಗೊತ್ತಾದ ಬಳಿಕ ಆತ ಶಾಕ್ ಆಗಿದ್ದಾನೆ. ಮಗನಿಗೆ ವಿಚಾರ ತಿಳಿದು ಹೋಯಿತಲ್ಲ ಎಂದು ಕಾವೇರಿ ಬೆಟ್ಟದಿಂದ ಬಿದ್ದು ಸತ್ತು ಹೋಗಿದ್ದಾಳೆ. ಸತ್ತ 13 ದಿನಗಳ ಬಳಿಕ ಕಾವೇರಿಯ ಕಾರ್ಯವನ್ನು ಮಾಡಿದ್ದಾನೆ ವೈಷ್ಣವ್. ಇಡೀ ಕುಟುಂಬ ಆ ಸಂದರ್ಭದಲ್ಲಿ ಹಾಜರಿ ಹಾಕಿತ್ತು. ‘ಈಗಲಾದರೂ ಆತ್ಮಕ್ಕೆ ಶಾಂತಿ ಸಿಗಲಿ. ಸ್ವಾರ್ಥ, ಮೋಸ ಎಷ್ಟೇ ಇರಬಹುದು. ಆದರೆ, ನೀನು ನನ್ನ ಅಮ್ಮನೇ. ನಮ್ಮ ಬಾಂಧವ್ಯಕ್ಕೆ ಮೋಸ ಆಗಬಾರದು ಎಂದು ಈ ರೀತಿ ಮಾಡುತ್ತಿದ್ದೇವೆ’ ಎಂದು ವೈಷ್ಣವ್ ಹೇಳಿದ್ದಾನೆ.

ಇದನ್ನೂ ಓದಿ
‘ನೀವು ಬಿಡಿ ದುಬಾರಿ ನಟಿ’ ಎಂದವರಿಗೆ ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರವೇನು?
Agnyathavasi Review: ಕೊಲೆಯ ಮಧ್ಯೆ ‘ಅಜ್ಞಾತದ’ ಕಥೆ; ಬಗೆದಷ್ಟು ವಿಶೇಷತೆ
ದೇಶಭಕ್ತಿ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಿದ ಸೆನ್ಸಾರ್ ಮಂಡಳಿ; ಕಾರಣ ಏನು?
ಕಂಗನಾ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದ್ದು ನಿಜವೇ? ಕಳ್ಳಾಟ ಬಯಲು

ಇದನ್ನೂ ಓದಿ: ‘ಸತ್ತರೆ ಮಣ್ಣು ಹಾಕಲು ಯಾರೂ ಇರಲ್ಲ’; ಕಾವೇರಿ ಅಂತ್ಯ ಲಕ್ಷ್ಮೀ ಹೇಳಿದಂತೆ ಆಯ್ತು

ಇತ್ತ ಕೀರ್ತಿ ಮನೆ ಬಿಟ್ಟು ಹೋಗಿದ್ದಾಳೆ. ‘ನಾನು ಎಲ್ಲಿ ಹೋಗುತ್ತೇನೆ ಎಂಬ ವಿಚಾರ ಯಾರಿಗೂ ಗೊತ್ತಾಗಬಾರದು’ ಎಂದು ನಿರ್ಧಾರ ಮಾಡಿದ್ದಳು. ಆದರೆ ಮನಸ್ಸು ತಡೆಯದೇ ಎಲ್ಲರಿಗೂ ಹೋಗುವ ವಿಚಾರ ಹೇಳಿದ್ದಾಳೆ. ಅವಳ ಮನಸ್ಸನ್ನು ಒಲಿಸಲು ಎಲ್ಲರೂ ಪ್ರಯತ್ನಿಸಿದರು. ಆದರೆ, ಸಾಧ್ಯವಾಗಿಲ್ಲ. ವೈಷ್ಣವ್ ಹಾಗೂ ಲಕ್ಷ್ಮೀ ಜೀವನಕ್ಕೆ ತಾನು ಅಡ್ಡಿ ಆಗಬಾರದು ಎಂದು ನಿರ್ಧರಿಸಿ ಮನೆ ಬಿಟ್ಟಿದ್ದಾಳೆ.

ಗುಡ್ ನ್ಯೂಸ್

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಕೊನೆ ಆಗುವುದಕ್ಕೂ ಮೊದಲು ಲಕ್ಷ್ಮೀ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಮಹಾಲಕ್ಷ್ಮೀ ಈಗ ಪ್ರೆಗ್ನೆಂಟ್ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಐದು ತಿಂಗಳ ನಂತರ ಮಹಾಲಕ್ಷ್ಮೀಗೆ ಸೀಮಂತ ಶಾಸ್ತ್ರ ನಡೆದಿದೆ. ಈ ಮೂಲಕ ಶೀಘ್ರವೇ ಮನೆಗೆ ಹೊಸ ಸದಸ್ಯರೊಬ್ಬರ ಆಗಮನ ಆಗಮನ ಆಗಲಿದೆ ಎಂಬ ರೀತಿಯಲ್ಲಿ ತೋರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.