‘ಸತ್ತರೆ ಮಣ್ಣು ಹಾಕಲು ಯಾರೂ ಇರಲ್ಲ’; ಕಾವೇರಿ ಅಂತ್ಯ ಲಕ್ಷ್ಮೀ ಹೇಳಿದಂತೆ ಆಯ್ತು
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿಯ ಪಾತ್ರದ ಅಂತ್ಯವು ಅವಳ ಅಹಂಕಾರ ಮತ್ತು ಕೆಟ್ಟ ಕಾರ್ಯಗಳಿಗೆ ಶಿಕ್ಷೆಯಾಗಿದೆ. ಮಗ ವೈಷ್ಣವನಿಗೆ ತನ್ನ ತಾಯಿಯ ನಿಜ ಸ್ವರೂಪ ತಿಳಿದ ನಂತರ, ಅವಳು ಗುಡ್ಡದಿಂದ ಬಿದ್ದು ಸಾಯುತ್ತಾಳೆ. ಇದು ಲಕ್ಷ್ಮೀ ಹೇಳಿದ ರೀತಿಯೇ ನಡೆದಿದೆ .

‘ಲಕ್ಷ್ಮೀ ಬಾರಮ್ಮ’ (Lakshmi Baramma Serial) ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿರೋ ಕಾವೇರಿಗೆ ಎಲ್ಲಿಲ್ಲದ ಅಹಂ. ಈಕೆ ಕೇವಲ ಮೋಸವನ್ನೇ ಮಾಡೋದು ಎಂಬುದು ಮಗ ವೈಷ್ಣವ್ಗೆ ಖಾತ್ರಿ ಆಗಿದೆ. ಬೆಟ್ಟದ ಮೇಲೆ ನಿಂತು ಈ ಬಗ್ಗೆ ಚರ್ಚೆ ನಡೆದಿದೆ. ಮಹಾಲಕ್ಷ್ಮೀ ಮುಗ್ಧೆ ಎಂಬುದು ವೈಷ್ಣವ್ಗೆ ಗೊತ್ತಾಗಿದೆ. ತಾಯಿಯ ಕೆಟ್ಟ ಕೆಲಸಗಳೆಲ್ಲವೂ ಗೊತ್ತಾದ ಬಳಿಕ ಅದನ್ನು ನೇರವಾಗಿ ತಾಯಿ ಬಳಿಯೇ ಹೇಳಿದ್ದಾನೆ ವೈಷ್ಣವ್. ಇದನ್ನು ಕೇಳಿ ಕಾವೇರಿಗೆ ತಡೆದುಕೊಳ್ಳಲಾಗದೆ ಗುಡ್ಡದಿಂದ ಬಿದ್ದು ಸತ್ತೇ ಹೋಗಿದ್ದಾಳೆ. ಈ ಮೂಲಕ ಕಾವೇರಿ ಭವಿಷ್ಯ ಲಕ್ಷ್ಮೀ ಹೇಳಿದಂತೆ ಆಗಿದೆ. ವೈಷ್ಣವ್ಗೆ ಎರಡನೇ ಮದುವೆ ಮಾಡಬೇಕು ಎಂದು ಕಾವೇರಿ ಪ್ಲ್ಯಾನ್ ಮಾಡಿದ್ದಳು. ಆದರೆ, ಈ ಪ್ಲ್ಯಾನ್ ವರ್ಕೌಟ್ ಆಗಿಲ್ಲ. ಮೊದಲು ವೈಷ್ಣವ್ಗೆ ಕೀರ್ತಿ ಜೊತೆ ಮದುವೆ ಫಿಕ್ಸ್ ಮಾಡಿದ್ದಳು ಕಾವೇರಿ. ಆದರೆ, ದಿನ ಕಳೆದಂತೆ ಕೀರ್ತಿ ಬದಲಾದಳು. ತನಗೆ ಅಪಾಯ ಇದೆ ಎಂದು ಅರಿತ ಕಾವೇರಿಯು, ಕೀರ್ತಿಯನ್ನು ಬೆಟ್ಟದಿಂದ ತಳ್ಳಿ ಆಕೆಗೆ ನೆನಪು ಹೋಗುವಂತೆ ಮಾಡಿದಳು. ಲಕ್ಷ್ಮೀನ ಸಾಯಿಸುವ ಪ್ರಯತ್ನ ನಡೆಯಿತು. ಇದೆಲ್ಲ ವಿಚಾರ ಗೊತ್ತಾದ ಬಳಿಕ ‘ಮುಖವಾಡ ಹಾಕಿಕೊಂಡು ಬದುಕಿದ್ದು ಸಾಕು’ ಎಂದು ತಾಯಿಗೆ ನೇರವಾಗಿ ಹೇಳಿದ್ದಾನೆ ವೈಷ್ಣವ್. ಇದನ್ನೂ ಓದಿ ‘ಅಪ್ಪು’ ನಿರ್ದೇಶಕನ ಹೊಸ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನಟಿ ತಬು ...
Published On - 11:44 am, Fri, 11 April 25