ಶಿಕ್ಷೆ ಇಲ್ಲ, ಪಶ್ಚಾತ್ತಾಪವೇ ಎಲ್ಲ: ಎಲ್ಲೆ ಮೀರಿದ ಮಂಜನಿಗೆ ಮತ್ತೊಂದು ಅವಕಾಶ?

ಈ ಸೀಸನ್ನಿನಲ್ಲಿ ಸ್ಪರ್ಧಿಗಳು ಜಗಳವನ್ನೇ ‘ಬಿಗ್​​ಬಾಸ್’ ಎಂದುಕೊಂಡಂತೆ ವರ್ತಿಸುತ್ತಿದ್ದಾರೆ. ಅದರಲ್ಲೂ ಮಂಜ ಅಂತೂ ಬಿಗ್​​ಬಾಸ್ ಮನೆ ರೌಡಿಸಂ ಪ್ರದರ್ಶಿಸುವ ಅಡ್ಡ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕಳೆದ ವಾರ ರಾಕ್ಷಸ-ಗಂಧರ್ವ ಟಾಸ್ಕ್​​​ನಲ್ಲಿ ಮಂಜ ತೋರಿದ ಕ್ರೂರತೆ, ರೌಡಿತನ ಬಹುಷಃ ಬಿಗ್​​ಬಾಸ್​ ಇತಿಹಾಸದಲ್ಲೇ ಇನ್ಯಾವ ಸ್ಪರ್ಧಿಯೂ ತೋರಿದಂತಿರಲಿಲ್ಲ.

ಶಿಕ್ಷೆ ಇಲ್ಲ, ಪಶ್ಚಾತ್ತಾಪವೇ ಎಲ್ಲ: ಎಲ್ಲೆ ಮೀರಿದ ಮಂಜನಿಗೆ ಮತ್ತೊಂದು ಅವಕಾಶ?
Manja Bigg Boss1

Updated on: Oct 10, 2026 | 11:40 PM

ಬಿಗ್​​ಬಾಸ್​​​ ಕನ್ನಡ ಇತಿಹಾಸದಲ್ಲಿ ಅರುಣ್ ಸಾಗರ್ ಇಂದ ಹಿಡಿದು ಕುರಿ ಪ್ರತಾಪ್, ಒಳ್ಳೆ ಹುಡ್ಗ ಪ್ರಥಮ್, ಹನುಮ, ವಾಸುಕಿ ವೈಭವ್ ಇತ್ತೀಚೆಗಿನ ಗಿಲ್ಲಿ ವರೆಗೂ ಅದ್ಭುತ ಎಂಟರ್ಟೈನರ್​​ಗಳು ಬಂದಿದ್ದಾರೆ, ಜನರನ್ನು ಮನರಂಜಿಸಿದ್ದಾರೆ. ಆದರೆ ಈ ಸೀಸನ್ನಿನಲ್ಲಿ ಸ್ಪರ್ಧಿಗಳು ಜಗಳವನ್ನೇ ‘ಬಿಗ್​​ಬಾಸ್’ ಎಂದುಕೊಂಡಂತೆ ವರ್ತಿಸುತ್ತಿದ್ದಾರೆ. ಅದರಲ್ಲೂ ಮಂಜ ಅಂತೂ ಬಿಗ್​​ಬಾಸ್ ಮನೆ ರೌಡಿಸಂ ಪ್ರದರ್ಶಿಸುವ ಅಡ್ಡ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕಳೆದ ವಾರ ರಾಕ್ಷಸ-ಗಂಧರ್ವ ಟಾಸ್ಕ್​​​ನಲ್ಲಿ ಮಂಜ ತೋರಿದ ಕ್ರೂರತೆ, ರೌಡಿತನ ಬಹುಷಃ ಬಿಗ್​​ಬಾಸ್​ ಇತಿಹಾಸದಲ್ಲೇ ಇನ್ಯಾವ ಸ್ಪರ್ಧಿಯೂ ತೋರಿದಂತಿರಲಿಲ್ಲ.

ಮಂಜ, ಕಿರಣ್ ಶಾಸ್ತ್ರಿ ವಿರುದ್ಧ, ಯಶಸ್ ವಿರುದ್ಧ ಹಾಗೆ ಮನೆಯ ಹಲವಾರು ಸದಸ್ಯರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದ. ಕಿರಣ್​ ಶಾಸ್ತ್ರಿ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದ, ಬಿಗ್​​ಬಾಸ್ ಪ್ರಾಪರ್ಟಿಗಳನ್ನು ಮುರಿದಿದ್ದ, ಹಲವರ ಚಾರಿತ್ರ್ಯ ಹರಣ ಮಾಡಿದ್ದ. ಇದೇ ಕಾರಣಕ್ಕೆ ಈ ಬಾರಿ ವೀಕೆಂಡ್ ಎಪಿಸೋಡ್ ಬರುವ ಮುಂಚೆಯೇ ಸಾಮಾಜಿಕ ಜಾಲತಾಣದಲ್ಲಿ, ಸಾಮಾನ್ಯ ವೀಕ್ಷಕರ ನಡುವೆ ಚರ್ಚೆ ಶುರುವಾಗಿತ್ತು, ‘ಮಂಜನಿಗೆ ಶಿಕ್ಷೆ ಗ್ಯಾರೆಂಟಿ’, ಮಂಜನನ್ನು ಹೊರಗೆ ಕಳಿಸಲಾಗುತ್ತದೆ, ನೇರ ಎವಿಕ್ಷನ್ ಆಗಲಿದೆ ಎಂದೆಲ್ಲ ಸುದ್ದಿ ಹರಡಿತ್ತು.

ಶನಿವಾರ, ಮೊದಲಿಗೆ ಸುದೀಪ್ ಅವರು ಗಗನ್ ಮತ್ತು ತಾಂಡವ್ ಬಿಗ್​​ಬಾಸ್​​ ಬಗ್ಗೆ ಆಡಿದ್ದ ಮಾತೊಂದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅವರಿಬ್ಬರಿಗೂ ಬೈದರು. ‘ಆಸಿಯಾಗೆ ಸುದೀಪ್ ಮತ್ತು ಬಿಗ್​​ಬಾಸ್​ ಫೇವರ್ ಮಾಡುತ್ತಿದ್ದಾರೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಅದು ಸುಳ್ಳೆಂದು ಸುದೀಪ್ ಒತ್ತಿ ಹೇಳಿದರು. ಅಲ್ಲದೆ, ಆಸಿಯಾರ ಉಸ್ತುವಾರಿಯನ್ನು ಟೀಕೆ ಮಾಡುವ ಮೂಲಕ ಅದನ್ನು ಸಾಬೀತು ಸಹ ಮಾಡಿದರು. ಬಳಿಕ ಮತ್ತೆ ಗಗನ್ ಮತ್ತು ತಾಂಡವ್ ಅವರನ್ನು ಟಾಸ್ಕ್ ಒಂದರ ಕಾರಣಕ್ಕೆ ಬೈದರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ

ಬಳಿಕ ಗಾನವಿ, ಗಗನ್ ತಾಯಿಯ ಬಗ್ಗೆ ಆಡಿದ ಕೆಟ್ಟ ಮಾತಿನ ಬಗ್ಗೆ ತೀವ್ರ ಟೀಕೆ ಮಾಡಿದ್ದು ಮಾತ್ರವೇ ಅಲ್ಲದೆ ಖುದ್ದು ಸುದೀಪ್ ಅವರು ಒಂದು ಕ್ಷಣ ಭಾವುಕರಾಗಿಬಿಟ್ಟರು. ಇದೆಲ್ಲದರ ಬಳಿಕ ಮಂಜನ ವಿಷಯ ಎತ್ತಿಕೊಂಡರು ಸುದೀಪ್. ಆದರೆ ಮಂಜನ ಕುಕೃತ್ಯಗಳ ಬಗ್ಗೆ ಸುದೀಪ್ ಅವರು ತೀವ್ರವಾಗಿ ಪ್ರತಿಕ್ರಿಯಿಸಲಿಲ್ಲ ಬದಲಿಗೆ ಅವರನ್ನು ಕನ್​​ಫೆಷನ್ ರೂಮಿಗೆ ಕಳಿಸಿದರು. ಅಲ್ಲಿ ಅವನೇ ಆಡಿದ್ದ ಕೆಟ್ಟ ಮಾತುಗಳನ್ನು ಮತ್ತೆ ಅವನಿಗೆ ಕೇಳಿಸಲಾಯ್ತು. ಬಳಿಕ ಅವರ ತಾಯಿ ಮಂಜನಿಗೆ ಬುದ್ಧಿವಾದ ಹೇಳಿದರು. ತಾಯಿಯ ಮಾತು ಕಿವಿಗೆ ಬೀಳುತ್ತಿದ್ದಂತೆ ಮಂಜ ಅತ್ತುಬಿಟ್ಟರು.

ಬಳಿಕ ಮಾತನಾಡಿದ ಸುದೀಪ್, ‘ನೀವು ಸಮಾಧಾನ ಆಗುವ ವರೆಗೆ ಅಲ್ಲೇ ಇದ್ದು ಆ ನಂತರ ಹಾಲ್​​ಗೆ ಬನ್ನಿ’ ಎಂದು ಹೇಳಿ ಶೋ ಮುಗಿಸಿದರು. ಮಂಜನಿಗೆ ಪಶ್ಚಾತ್ತಾಪವೇ ಶಿಕ್ಷೆಯೇ? ಅಥವಾ ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಅಥವಾ ಬಿಗ್​​ಬಾಸ್ ಏನಾದರೂ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us