
ಸುದೀಪ್ ಅಭಿನಯದ ‘ಮಾರ್ಕ್’ (Mark Movie) ಹಾಗೂ ಮಲ್ಟಿ ಸ್ಟಾರರ್ ಸಿನಿಮಾ ‘45’ ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 25ರಂದು ರಿಲೀಸ್ ಆದವು. ಎರಡೂ ಸಿನಿಮಾಗಳು ಪಾಸಿಟಿವ್ ವಿಮರ್ಶೆ ಪಡೆದಿವೆ. ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಎರಡೂ ಚಿತ್ರಗಳು ಸೋಮವಾರವೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಎರಡೂ ಚಿತ್ರಗಳ ಅಬ್ಬರದ ಮಧ್ಯೆ ‘ಡೆವಿಲ್’ ಚಿತ್ರದ ಕಥೆ ಏನಾಗಿದೆ? ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.
‘ಮಾರ್ಕ್’ ಸಿನಿಮಾ ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತಂಡದವರೇ ಹೇಳಿಕೊಂಡಿದ್ದಾರೆ. ಈ ಚಿತ್ರ ಮೊದಲ ದಿನ 15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಎನ್ನಲಾಗಿದೆ. ಈ ಚಿತ್ರ ಸೋಮವಾರವೂ ಕೋಟಿಗಳಲ್ಲಿ ಗಳಿಕೆ ಮಾಡಿದೆ. ಸೋಮವರಾದ ಕಲೆಕ್ಷನ್ ಸುಮಾರು ಒಂದೂವರೆ ಕೋಟಿ ರೂಪಾಯಿ ಗಳಿಸಿದೆ ಎಂದು sacnilk ವರದಿ ಮಾಡಿದೆ. ಚಿತ್ರತಂಡ ನೀಡಿದ ನಾಲ್ಕು ದಿನಗಳ ಕಲೆಕ್ಷನ್ ಹಾಗೂ ಸೋಮವಾರದ sacnilk ವರದಿ ಸೇರಿದರೆ ಸಿನಿಮಾದ ಗಳಿಕೆ ಸುಮಾರು 37 ಕೋಟಿ ರೂಪಾಯಿ ಆಗಲಿದೆ. ಇದು ನಿಜಕ್ಕೂ ದೊಡ್ಡ ಗಳಿಕೆಯೇ ಸರಿ.
ಇನ್ನು, 45 ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಚಿತ್ರತಂಡದವರು ಸಿನಿಮಾದ ಗಳಿಕೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, sacnilk ವರದಿ ಪ್ರಕಾರ ಈ ಚಿತ್ರ ಈವರೆಗೆ ಸುಮಾರು 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಸೋಮವಾರ ಈ ಚಿತ್ರ ಕೋಟಿಗಳಲ್ಲಿ ವ್ಯವಹಾರ ಮಾಡಿದೆ.
ಇದನ್ನೂ ಓದಿ: ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಮಾರ್ಕ್’; ದಾಖಲೆ ನಿರ್ಮಾಣ
ಇನ್ನು, ಈ ಎರಡೂ ಚಿತ್ರಗಳ ಅಬ್ಬರದ ಮಧ್ಯೆ ‘ಡೆವಿಲ್’ ಕಲೆಕ್ಷನ್ ಡಲ್ ಆಗಿದೆ. ಭಾನುವಾರ ಈ ಚಿತ್ರ 21 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಈಗ ಸೋಮವಾರ ಸಿನಿಮಾದ ಕಲೆಕ್ಷನ್ 7 ಲಕ್ಷ ರೂಪಾಯಿಗೆ ಕುಸಿದಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಕುಗ್ಗುವ ಸಾಧ್ಯತೆ ಇದೆ. ಈ ಚಿತ್ರದ ಒಟ್ಟಾರೆ ಗಳಿಕೆ 34 ಕೋಟಿ ರೂಪಾಯಿ ಆಗಿದೆ (sacnilk ವರದಿ ಪ್ರಕಾರ) ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.