ಗಿಲ್ಲಿ ಏಕೆ ಅಷ್ಟು ಇಷ್ಟ? ವಿವರಿಸಿದ ಸಂಗೀತಾ ಶೃಂಗೇರಿ
ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಗಿಲ್ಲಿಗೆ ನಟಿ ಸಂಗೀತಾ ಶೃಂಗೇರಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಗಿಲ್ಲಿ ಅವರ ಪ್ರಾಮಾಣಿಕತೆ, ಹಾಸ್ಯಪ್ರಜ್ಞೆ ಮತ್ತು ನೇರ ಮಾತುಗಾರಿಕೆಯೇ ಅವರಿಗೆ ಇಷ್ಟವಾಗಲು ಮುಖ್ಯ ಕಾರಣ ಎಂದು ಸಂಗೀತಾ ಹೇಳಿದ್ದಾರೆ. ಗಿಲ್ಲಿ ಇದ್ದ ಕಾರಣಕ್ಕೇ ಬಿಗ್ ಬಾಸ್ 12 ನೋಡಿದೆ ಎಂದು ಸಂಗೀತಾ ತಿಳಿಸಿದ್ದಾರೆ. ಅವರ ಈ ಅಭಿಪ್ರಾಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಗಿಲ್ಲಿ ನಟ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಜನಸಾಮಾನ್ಯರಿಂದ ಹಿಡಿದು, ಅನೇಕ ಸೆಲೆಬ್ರಿಟಿಗಳು ಗಿಲ್ಲಿಯನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಸಂಗೀತಾ ಶೃಂಗೇರಿ ಕೂಡ ಗಿಲ್ಲಿಯನ್ನು ಬೆಂಬಲಿಸಿದ್ದಾರೆ ಎಂದರೆ ನಂಬಲೇಬೇಕು. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಗಿಲ್ಲಿ ಏಕೆ ಇಷ್ಟ ಎಂಬುದನ್ನು ಅವರು ವಿವರಿಸಿದರು.
ಇತ್ತೀಚೆಗೆ ತಮ್ಮ ಹಾಡಿನ ಬಿಡುಗಡೆ ಸಮಾರಂಭವನ್ನು ಸಂಗೀತಾ ಮಾಡಿದರು. ಈ ವೇಳೆ ಕಾರ್ತಿಕ್ ಮಹೇಶ್, ನಮ್ರತಾ ಗೌಡ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಸಂಗೀತಾ ಮಾತನಾಡಿದ್ದಾರೆ. ಗಿಲ್ಲಿ ಅವರನ್ನು ಹಾಡಿ ಹೊಗಳಿದ್ದಾರೆ. ಈ ಮೊದಲು ಗಿಲ್ಲಿಯನ್ನು ಬೆಂಬಲಿಸಿ ಅವರು ಪೋಸ್ಟ್ ಒಂದನ್ನು ಹಾಕಿದ್ದರು. ಈಗ ತಮ್ಮ ಮಾತುಗಳ ಮೂಲಕ ಗಿಲ್ಲಿ ಬಗ್ಗೆ ವಿವರಿಸಿದರು.
View this post on Instagram
ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸಂಗೀತಾ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ನಾನು ಕೆಲವು ಎಪಿಸೋಡ್ಗಳನ್ನು ನೋಡಿದ್ದೇನೆ. ಇದಕ್ಕೆ ಮೂಲ ಕಾರಣ ಗಿಲ್ಲಿ’ ಎಂದರು ಸಂಗೀತಾ.
ಇದನ್ನೂ ಓದಿ: ಎಲಿಮಿನೇಷನ್ನಿಂದ ಉ.ಕರ್ನಾಟಕ ಅಳ್ತಿದೆ ಎಂದ ಮಾಳುಗೆ ಅವರದ್ದೇ ಭಾಷೆಯಲ್ಲಿ ಬಂತು ಖಡಕ್ ಉತ್ತರ ‘ನನ್ನ ಅಣ್ಣ-ಅತ್ತಿಗೆ ಬಿಗ್ ಬಾಸ್ ನೋಡುತ್ತಾ ಇರುತ್ತಾರೆ. ಅವರು ತುಂಬಾ ನಗುತ್ತಿರುತ್ತಾರೆ. ನಾನು ಕೂಡ ನೋಡಿದೆ. ನಾನು ನಕ್ಕಿದ್ದೇನೆ. ಹೆಚ್ಚು ನಕ್ಕಿದ ದಿನ ನಾನು ರಾತ್ರಿ 12 ಗಂಟೆಗೆ ಸ್ಟೇಟಸ್ ಹಾಕಿದೆ. ಗಿಲ್ಲಿ ಕೌಂಟರ್ ನೋಡಿದಾಗ ಸಖತ್ ಆಗಿ ಹೇಳಿದ, ಸಖತ್ ಆಗಿ ಹೇಳಿದ ಅನಿಸುತ್ತದೆ. ಮನಸ್ಸಲ್ಲಿ ಇರೋದನ್ನು ಅವನು ನೇರವಾಗಿ ಹೇಳುತ್ತಾನೆ’ ಎಂದು ಸಂಗೀತಾ ವಿವರಿಸಿದರು. ಸಂಗೀತಾ ಮಾತಿಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಅವರನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ಗಿಲ್ಲಿಗೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ 9 ಮಂದಿ ಉಳಿದುಕೊಂಡಿದ್ದಾರೆ. ಜನವರಿಯಲ್ಲಿ ಫಿನಾಲೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



