ಮಿಡ್ ವೀಕ್ ಎಲಿಮಿನೇಷನ್ ರದ್ದು ಮಾಡಿದ ಬಿಗ್ ಬಾಸ್; ಆದರೂ ತಪ್ಪಿಲ್ಲ ಆಪತ್ತು

ರಜತ್, ಗೌತಮಿ ಜಾದವ್, ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್ ಅವರು ಈ ವಾರ ನಾಮಿನೇಟ್ ಆಗಿದ್ದರು. ಒಬ್ಬರು ಮಿಡ್ ವೀಕ್​ನಲ್ಲಿ ನಾಮಿನೇಟ್ ಆಗಲಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ ಆಟದಲ್ಲಿ ಟ್ವಿಸ್ಟ್ ಸಿಕ್ಕಿದೆ. ಮಿಡ್ ವೀಕ್ ಎಲಿಮಿನೇಷನ್​ ಅನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ. ಆದರೆ ಸ್ಪರ್ಧಿಗಳಿಗೆ ಆತಂಕ ಮಾತ್ರ ತಪ್ಪಿಲ್ಲ.

ಮಿಡ್ ವೀಕ್ ಎಲಿಮಿನೇಷನ್ ರದ್ದು ಮಾಡಿದ ಬಿಗ್ ಬಾಸ್; ಆದರೂ ತಪ್ಪಿಲ್ಲ ಆಪತ್ತು
Dhanraj Achar

Updated on: Jan 16, 2025 | 10:10 PM

ಈ ಬಾರಿ ಯಾರು ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ದಿನ ದೂರವಿಲ್ಲ. ಸದ್ಯ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ಇದ್ದಾರೆ. ಅವರಲ್ಲಿ 6 ಮಂದಿ ಮಿಡ್ ವೀಕ್​ ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದರು. ಸಂಕ್ರಾಂತಿ ಹಬ್ಬ ಎಂಬ ಕಾರಣಕ್ಕೆ ಮಿಡ್ ವೀಕ್ ಎಲಿಮಿನೇಷನ್​ ಅನ್ನು ಒಂದು ದಿನಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಏಕಾಏಕಿ ಎಲಿಮಿನೇಷನ್ ಕ್ಯಾನ್ಸಲ್ ಮಾಡಲಾಗಿದೆ. ಅದಕ್ಕೆ ಕಾರಣ ಆಗಿರುವುದು ಧನರಾಜ್ ಮಾಡಿದ ಒಂದು ತಪ್ಪು. ಟಾಸ್ಕ್ ವೇಳೆ ಧನರಾಜ್ ಅವರು ಮೋಸ ಮಾಡಿದ್ದಾರೆ ಎಂಬ ಕಾರಣದಿಂದ ಎಲಿಮಿನೇಷನ್​ ರದ್ದಾಗಿದೆ.

ಈ ವಾರ ಇಮ್ಯುನಿಟಿ ಪಡೆಯುವ ಟಾಸ್ಕ್​ನಲ್ಲಿ ಧನರಾಜ್ ಅವರಿಗೆ ಹೆಚ್ಚು ಅಂಕ ಸಿಕ್ಕಿತ್ತು. ಆದರೆ ಅವರು ಟಾಸ್ಕ್​ ವೇಳೆ ಕನ್ನಡಿ ನೋಡಿಕೊಂಡು ಮೋಸ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಟಾಸ್ಕ್ ನಡೆಯುವಾಗ ಸುಮ್ಮನಿದ್ದ ಬಿಗ್ ಬಾಸ್ ಈಗ ತಕರಾರು ತೆಗೆದಿದ್ದಾರೆ. ಒಟ್ಟಾರೆ ಪ್ರೇಕ್ಷಕರಿಗೆ ಇದು ಒಂದು ಗಿಮಿಕ್ ರೀತಿ ಕಾಣಿಸಿದೆ. ಒಟ್ಟಿನಲ್ಲಿ ಆ ಕಾರಣವನ್ನು ನೀಡಿ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಮಾಡಲಾಗಿದೆ.

ಟಾಸ್ಕ್ ವೇಳೆ ತಪ್ಪಾಗಿದೆ ಎಂಬ ಕಾರಣವನ್ನು ಧನರಾಜ್ ಅವರು ಇಮ್ಯುನಿಟಿಯನ್ನು ಹಿಂಪಡೆಯಲಾಗಿದೆ. ಆದ್ದರಿಂದ ಅವರು ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ. ಒಟ್ಟು 7 ಮಂದಿ ಮೇಲೆ ಎಲಿಮಿನೇಷನ್​ ಕತ್ತಿ ತೂಗುತ್ತಿದೆ. ಅವರಲ್ಲಿ ಇಬ್ಬರು ಈ ವಾರ ನಾಮಿನೇಟ್ ಆಗುವುದು ಖಚಿತ. ಆದರೆ ಯಾವಾಗ ಎಲಿಮಿನೇಷನ್ ನಡೆಯಲಿದೆ? ಯಾವ ರೀತಿ ನಡೆಯಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನಡುಕ ಹುಟ್ಟಿಸಿದ ಮಿಡ್ ವೀಕ್ ಎಲಿಮಿನೇಷನ್

ಇಮ್ಯುನಿಟಿ ಸಿಕ್ಕಿದೆ ಎಂದು ಧನರಾಜ್ ಅವರು ಮೊದಲು ಖುಷಿಯಾಗಿದ್ದರು. ಆದರೆ ಈಗ ಇಮ್ಯುನಿಟಿ ಕಳೆದುಕೊಂಡ ಅವರಿಗೆ ಸಹಜವಾಗಿಯೇ ಬೇಸರ ಆಗಿದೆ. ಆದರೆ ಟಾಸ್ಕ್​ನಲ್ಲಿ ಮೋಸ ಆಗಿದೆ ಎಂಬ ಆರೋಪ ಬಂದಿದ್ದರಿಂದ ಅವರು ಅಳಲು ಆರಂಭಿಸಿದರು. ತಮ್ಮನ್ನು ಕೂಡ ನಾಮಿನೇಟ್ ಮಾಡಿ ಎಂದು ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡರು. ಮತ್ತೆ ಹೊಸದಾಗಿ ನಾಮಿನೇಷನ್ ಪ್ರತಿಕ್ರಿಯೆ ಮಾಡಲಾಗಿದೆ. ಅಲ್ಟಿಮೇಟ್ ಕ್ಯಾಪ್ಟನ್ ಆಗಿರುವ ಹನುಮಂತ ಮಾತ್ರ ಸೇಫ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.