ಹಿತಾಳು ಅಂಬಿಕಾ ಮಗಳು ಅನ್ನೋದು ದುರ್ಗಾಗೆ ತಿಳಿದೇ ಹೋಯ್ತು

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್‌ಗಳು ಸಂಭವಿಸುತ್ತಿವೆ. ಅಂಬಿಕಾಳ ಆತ್ಮ ದುರ್ಗಾಳನ್ನು ಹಿಂಬಾಲಿಸುತ್ತಿದೆ. ಹಿತಾ ಅಪಹರಣಗೊಂಡಿದ್ದು, ಅದರ ಹಿಂದೆ ಮಾಯಾ ಇದ್ದಾಳೆ. ದುರ್ಗಾ ಹಿತಾಳನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಅಂಬಿಕಾ ದುರ್ಗಾಳಿಗೆ ತಾನು ಹಿತಾಳ ತಾಯಿ ಎಂದು ಬಹಿರಂಗಪಡಿಸುತ್ತಾಳೆ. ಶರತ್ ಮತ್ತು ಮಾಯಾ ಮದುವೆಯಾಗಲು ಸಿದ್ಧರಾಗಿದ್ದಾರೆ.

ಹಿತಾಳು ಅಂಬಿಕಾ ಮಗಳು ಅನ್ನೋದು ದುರ್ಗಾಗೆ ತಿಳಿದೇ ಹೋಯ್ತು
ನಾ ನಿನ್ನ ಬಿಡಲಾರೆ
Updated By: ರಾಜೇಶ್ ದುಗ್ಗುಮನೆ

Updated on: Jun 06, 2025 | 8:08 AM

‘ನಾ ನಿನ್ನ ಬಿಡಲಾರೆ’ (Na Ninna Bidalare) ಧಾರಾವಾಹಿ ಸಾಕಷ್ಟು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಅಂಬಿಕಾ ಈಗಾಗಲೇ ಮನೆಯವರು ಮಾಡಿದ ಕೆಲಸಕ್ಕೆ ಬಲಿಯಾಗೆ ಆತ್ಮವಾಗಿದ್ದಾಳೆ. ಅವಳು ದುರ್ಗಾ ಬಿಟ್ಟು ಮತ್ಯಾರಿಗೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಿರುವಾಗಲೇ ಹಿತಾ ಕಿಡ್ನ್ಯಾಪ್ ಆಗಿದ್ದಳು. ಇದನ್ನು ಮಾಡಿದ್ದು ಮಾಯಾನೇ ಆದರೂ ಅದನ್ನು ದುರ್ಗಾ ಮೇಲೆ ಬರುವಂತೆ ನೋಡಿಕೊಳ್ಳಲು ಪ್ಲ್ಯಾನ್ ಮಾಡಿದ್ದಾಳೆ. ಈ ಮಧ್ಯೆ ಹಿತಾ ತನ್ನ ಮಗಳು ಎಂಬ ಸತ್ಯವನ್ನು ಅಂಬಿಕಾಳು ದುರ್ಗಾ ಮುಂದೆ ಹೇಳಿಯಾಗಿದೆ. ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಬಗ್ಗೆ ಇಲ್ಲಿದೆ ಮಾಹಿತಿ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ದುರ್ಗಾ ಆಕೆಯನ್ನು ನೋಡಿಕೊಳ್ಳಲು ನೇಮಕ ಆದ ಕೇರ್ ಟೇಕರ್. ಇತ್ತೀಚೆಗೆ ಹಿತಾಳು ಕಿಡ್ನ್ಯಾಪ್ ಆಗಿದ್ದಾಳೆ. ಅದು ದುರ್ಗಾ ಕಣ್ಣೆದುರೇ. ಇದನ್ನು ಮಾಡಿದ್ದು ಮಾಯಾ. ಆದರೆ, ತಾನೇ ಹಿತಾಳನ್ನು ಮರಳಿ ತರುವ ಮೂಲಕ ತಾನು ಹಿತಾಳನ್ನು ಕಾಪಾಡಿದ್ದು ಎಂದು ಹೇಳಿಕೊಂಡಳು.

ಇದನ್ನೂ ಓದಿ
ರಕ್ಷಿತ್ ಶೆಟ್ಟಿ ಜನ್ಮದಿನ: ನಟನ ಎದುರು ಇರೋ ಪ್ರಶ್ನೆಗೆ ಸಿಗುತ್ತಾ ಉತ್ತರ?
‘ಸರಿಗಮಪ’ದಲ್ಲಿ ಇತಿಹಾಸ ನಿರ್ಮಿಸಿದ ಮಹಿಳಾ ಸ್ಪರ್ಧಿಗಳು; ವಿನ್ನರ್ ಯಾರು?
ಹೊಸ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ; ನೆಗೆಟಿವ್ ಪಾತ್ರ
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ

ಇನ್ನು, ಆತ್ಮದ ರೂಪದಲ್ಲಿರುವ ಅಂಬಿಕಾ ಪ್ರತಿ ಹಂತದಲ್ಲಿ ದುರ್ಗಾಳಿಗೆ ಪ್ರಯತ್ನ ಮಾಡುತ್ತಾ ಬರುತ್ತಿದ್ದಾಳೆ. ಏನೇ ಆದರೂ ಅದರ ಮಾಹಿತಿ ಪಡೆದು ದುರ್ಗಾ ಅಪ್​ಡೇಟ್ ಮಾಡುತ್ತಿದ್ದಳು. ಎಲ್ಲೇ ಹೋದರು ಆಕೆಯನ್ನು ಅಂಬಿಕಾ ಹಿಂಬಾಲಿಸುತ್ತಿದ್ದಳು. ಈ ಎಲ್ಲಾ ಕಾರಣದಿಂದ ದುರ್ಗಾಗೆ ಅನುಮಾನ ಬಂದಿದೆ.


‘ಆ ಮನೆಯಲ್ಲಿ ನಡೆಯುವ ಪ್ರತಿ ವಿಚಾರವೂ ನಿಮಗೆ ಮೊದಲು ಗೊತ್ತಾಗುತ್ತದೆ. ಅದು ಹೇಗೆ? ಆ ಮಗುವಿನ ಬಗ್ಗೆ ಅಷ್ಟು ಕಾಳಜಿ ಮಾಡುತ್ತಿರುವುದು ಏಕೆ’ ಎಂದು ದುರ್ಗಾ ಕೋಪದಲ್ಲೇ ಕೇಳಿದಳು. ಇದಕ್ಕೆ ಉತ್ತರಿಸಿದ ಅಂಬಿಕಾ, ‘ಆಕೆ ನನ್ನ ಮಗಳು’ ಎಂದು ಹೇಳಿಕೊಂಡಿದ್ದಾಳೆ. ಈ ಮೂಲಕ ಸತ್ಯವನ್ನು ಅವಳು ಹೇಳೇ ಬಿಟ್ಟರೆ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ಯಲ್ಲಿ ವೈರಿ; ನಿಜ ಜೀವನದಲ್ಲಿ ಎಷ್ಟು ಕ್ಲೋಸ್ ನೋಡಿ

ಮೊದಲೇ ದುರ್ಗಾಗೆ ಆತ್ಮ ಎಂದರೆ ಭಯ. ಹೀಗಿರುವಾಗ ಅಂಬಿಕಾ ಸತ್ತು ಹೋಗಿದ್ದಾಳೆ, ಅವರ ಜೊತೆ ಇರೋದು ಆತ್ಮ ಎಂಬುದು ಗೊತ್ತಾದರೆ ಮುಂದೇನಾಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ. ಒಂದೊಮ್ಮೆ ಈ ವಿಚಾರ ಗೊತ್ತಾದರೆ ಆ ಬಳಿಕ ಕಥೆಯಲ್ಲಿ ಯಾವ ರೀತಿಯ ತಿರುವು ಬರಬಹುದು ಎನ್ನುವ ಕುತೂಹಲ ಮೂಡಿದೆ.  ಇನ್ನು, ಶರತ್ ಮಾಯಾನ ಮದುವೆ ಆಗಲು ರೆಡಿ ಆಗಿದ್ದು ಕೂಡ ಸಾಕಷ್ಟು ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.