ಅಂಬಿಕಾ ಮರಳಿ ಬರೋ ಸಮಯ ಬಂದಾಯ್ತು; ನಡೆಯುತ್ತಿದೆ ಶರತ್-ದುರ್ಗಾ ಮರು ಮಾಂಗಲ್ಯ

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಅಂಬಿಕಾ ಮರಳಿ ಬರುವ ಮಹತ್ವದ ಘಟ್ಟ ತಲುಪಿದೆ. ಮಾಳವಿಕಾ ಬಂಧಿಸಿದ್ದ ಅಂಬಿಕಾಳ ಆತ್ಮವನ್ನು ಮರಳಿ ತರಲು ದುರ್ಗಾ ತಾಳಿಯನ್ನು ಪಡೆದಿದ್ದಾಳೆ. ಅಂಬಿಕಾಳ ತಂದೆಯ ಸೂಚನೆಯಂತೆ ಶರತ್ ಮತ್ತು ದುರ್ಗಾಳ ಮರು ಮಾಂಗಲ್ಯವು ಅಂಬಿಕಾಳ ಪುನರಾಗಮನಕ್ಕೆ ಕಾರಣವಾಗಲಿದೆ. ಈ ರೋಚಕ ತಿರುವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಅಂಬಿಕಾ ಮರಳಿ ಬರೋ ಸಮಯ ಬಂದಾಯ್ತು; ನಡೆಯುತ್ತಿದೆ ಶರತ್-ದುರ್ಗಾ ಮರು ಮಾಂಗಲ್ಯ
ನಾ ನಿನ್ನ ಬಿಡಲಾರೆ
Edited By:

Updated on: Apr 25, 2026 | 8:00 AM

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಈಗ ಮಹತ್ವದ ತಿರುವು ಎದುರಾಗಿದೆ. ಅಂಬಿಕಾಳನ್ನು ಮಾಳವಿಕಾ ತನ್ನ ಶಕ್ತಿಯಿಂದ ಬಂಧಿಸಿಟ್ಟಿದ್ದಾಳೆ. ದುರ್ಗಾಳ ಬಳಿ ಇದ್ದ ತಾಳಿಯನ್ನು ಕಸಿದುಕೊಂಡ ಅವಳು, ಅಂಬಿಕಾಳನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಳು. ಈಗ ಆಕೆಯ ಶ್ರಾದ್ಧ ಕೂಡ ಮಾಡಾಗಿದೆ. ಹೀಗಿರುವಾಗಲೇ ಅಂಬಿಕಾ ಮರಳಿ ಬರುವ ಸಮಯ ಬಂದಿದೆ. ಇದಕ್ಕೆ ಒಂದು ಅವಕಾಶ ಸಿಕ್ಕಿದೆ.

ಅಂಬಿಕಾ ಪಾತ್ರ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ, ಈ ಧಾರಾವಾಹಿಯಲ್ಲಿ ಆಕೆಯೇ ಮುಖ್ಯ ಪಾತ್ರಧಾರಿ. ಆಕೆಯನ್ನು ಸಾಯಿಸಲಾಗಿದ್ದು, ಆತ್ಮದ ರೂಪದಲ್ಲಿ ಓಡಾಡುತ್ತಿದ್ದಾಳೆ. ಹೀಗಿರುವಾಗ ಅಂಬಿಕಾ ಆತ್ಮವನ್ನು ಬಂಧಿಸಿಡುವ ಕೆಲಸ ಆಗಿದೆ. ಈ ಕೆಲಸ ಮಾಡಿದ್ದು ಮಾಳವಿಕಾ. ಈ ಮಧ್ಯೆ ಒಂದು ಮುಖ್ಯ ಬೆಳವಣಿಗೆ ನಡೆದಿತ್ತು.

ಅಂಬಿಕಾ ಹಾಗೂ ದುರ್ಗಾ ಅಕ್ಕ-ತಂಗಿ. ಈ ವಿಷಯ ಅಂಬಿಕಾಗೆ ಮಾತ್ರ ಗೊತ್ತಿತ್ತು. ಇದು ದುರ್ಗಾಗೆ ತಿಳಿದಿರಲೇ ಇಲ್ಲ. ಅಂಬಿಕಾ ಆತ್ಮ ಮಾಯಾವಾದ ಬಳಿಕ ಈ ವಿಷಯ ಗೊತ್ತಾಗಿದೆ. ಈಗ ಅಂಬಿಕಾಳನ್ನು ಮತ್ತೆ ಕರೆತರುವ ಪ್ರಯತ್ನದಲ್ಲಿ ದುರ್ಗಾ ಇದ್ದಾಳೆ. ಆದರೆ, ಅದು ಅಷ್ಟು ಸುಲಭದಲ್ಲಿ ಇಲ್ಲ ಎನ್ನಬಹುದು. ಮಾಳವಿಕಾ ತುಂಬಾನೇ ಕೆಟ್ಟವಳು. ಆಕೆ ಉದ್ದೇಶಪೂರ್ವಕವಾಗಿ ದುರ್ಗಾ ತಾಳಿಯನ್ನು (ಮೊದಲು ಅಂಬಿಕಾ ತಾಳಿ ಆಗಿತ್ತು) ಕಸಿದುಕೊಂಡಿದ್ದಾಳೆ. ಈ ಮೂಲಕ ತನ್ನ ಕಾರ್ಯಸಾಧನೆ ಮಾಡಿದ್ದಾಳೆ. ಅವಳ ಬಳಿ ಹೋಗಿ ತಾಳಿ ಕೊಡಿ ಎಂದರೆ ಅವಳು ಯಾವುದೇ ಕಾರಣಕ್ಕೂ ತಾಳಿ ಕೊಡುವುದಿಲ್ಲ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

ಸದ್ಯ ದುರ್ಗಾಳ ತಂದೆ ಮಾರ್ಗವನ್ನು ಸೂಚಿಸಿದ್ದಾನೆ. ‘ಅಂಬಿಕಾ ತಾಳಿಯನ್ನು ಮರಳಿ ತಂದರೆ ಆಕೆ ಮರಳುತ್ತಾಳೆ’ ಎಂದು ಹೇಳಿದ್ದಾನೆ. ನಿಜಕ್ಕೂ ಆಕೆ ಮರಳುತ್ತಾಳಾ? ಇದಕ್ಕೆ ಎಷ್ಟು ಕಷ್ಟಪಡಬೇಕು ಎಂಬುದು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಈಗಾಗಲೇ ಆಕೆ ಹೊಗಿ ತಾಳಿ ಕೇಳಿದ್ದಾಳೆ. ಇದನ್ನು ಕೇಳಿ ಮಾಳವಿಕಾ ಶಾಕ್ ಆಗಿದ್ದಾಳೆ. ಆಕೆ ತಾಳಿ ಕೊಟ್ಟಿದ್ದು, ಮರು ಮಾಂಗಲ್ಯಕ್ಕೆ ಸಿದ್ಧತೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us