‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಈಗಾಗಲೇ ಕೊನೆಯ ಹಂತ ತಲುಪಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಬಿಗ್ ಬಾಸ್ (BBK 10) ಮನೆಯಲ್ಲಿ ಈ ವಾರ ಉಳಿದುಕೊಂಡಿದ್ದ ಆರು ಮಂದಿ. ಈ ಪೈಕಿ ಐವರು ನಾಮಿನೇಟ್ ಆಗಿದ್ದಾರೆ. ಈಗ ಮನೆಯಿಂದ ಒಬ್ಬರು ಎಲಿಮಿನೇಟ್ (Bigg Boss Elimination) ಆಗಲಿದ್ದಾರೆ. ಅದು ಯಾರು ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ಪ್ರಮುಖ ವ್ಯಕ್ತಿಯೇ ಎಲಿಮಿನೇಟ್ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿದೆ.
ಸದ್ಯ ದೊಡ್ಮನೆಯಲ್ಲಿ ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್ ಮಹೇಶ್, ವಿನಯ್ ಗೌಡ, ನಮ್ರತಾ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಇದ್ದಾರೆ. ಈ ಪೈಕಿ ತುಕಾಲಿ ಸಂತೋಷ್ ಹಾಗೂ ಸಂಗೀತಾ ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಶನಿವಾರದ (ಜನವರಿ 20) ಎಪಿಸೋಡ್ನಲ್ಲಿ ವರ್ತೂರು ಸಂತೋಷ್ ಸೇವ್ ಆಗಿದ್ದಾರೆ. ಈಗ ನಮ್ರತಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ ಮೊದಲು ವಿನಯ್ ಗೌಡ ಅವರ ಚಮಚ ರೀತಿ ಕಾಣಿಸುತ್ತಿದ್ದರು. ಯಾವಾಗ ಅವರು ವಿನಯ್ ಅವರಿಂದ ಅಂತರ ಕಾಯ್ದುಕೊಂಡರೋ ಆಗ ಅವರಲ್ಲಿ ಸಾಕಷ್ಟು ಬದಲಾವಣೆ ಆಯಿತು. ಅವರು ಉತ್ತಮ ಪ್ರದರ್ಶನ ನೀಡಿದರು. ಈ ಕಾರಣಕ್ಕೆ ಅವರಿಗೆ ‘ಉತ್ತಮ’, ‘ಕಿಚ್ಚನ ಚಪ್ಪಾಳೆ’ ಸಿಕ್ಕಿತು. ಅವರು ಕ್ಯಾಪ್ಟನ್ ಕೂಡ ಆದರು. ಇತ್ತೀಚೆಗೆ ಅವರು ಡಲ್ ಹೊಡೆದಿದ್ದರು.
ಕಾರ್ತಿಕ್ ಮೇಲೆ ಸಂಗೀತಾ, ನಮ್ರತಾ ಮಾತಿನ ದಾಳಿ; ಜೊತೆ ಇದ್ರೂ ಕಷ್ಟ, ಒಬ್ಬರೇ ಇದ್ರೂ ಕಷ್ಟ
ಕಾರ್ತಿಕ್ ಹಾಗೂ ನಮ್ರತಾ ಆಪ್ತವಾಗಿ ನಡೆದುಕೊಂಡಿದ್ದರು. ಅತಿಥಿಯಾಗಿ ಬಂದ ಸ್ನೇಹಿತ್ ಅವರು ನಮ್ರತಾನ ಡಿಮೋಟಿವೇಟ್ ಮಾಡಿದ್ದರು. ಇದರಿಂದ ಅವರ ಆಟ ಸಾಕಷ್ಟು ಡಲ್ ಆಗಿತ್ತು. ಇದು ಅವರ ಜರ್ನಿ ಮೇಲೆ ಸಾಕಷ್ಟು ಎಫೆಕ್ಟ್ ಆಗಿದೆ. ಅವರು ಕಡಿಮೆ ವೋಟ್ ಪಡೆದು ಔಟ್ ಆಗಿದ್ದಾರೆ ಎನ್ನಲಾಗಿದೆ. ಫಿನಾಲೆ ತಲುಪಬೇಕು ಎಂಬ ಕನಸು ನುಚ್ಚುನೂರಾಗಿದೆ.
ನಮ್ರತಾ ಅವರನ್ನು ಬಿಟ್ಟರೆ ‘ಬಿಗ್ ಬಾಸ್’ ಮನೆಯಲ್ಲಿ ಉಳಿದಿರೋದು ಆರು ಮಂದಿ ಮಾತ್ರ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್ ಮಹೇಶ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಮಧ್ಯೆ ಆಟ ಮುಂದುವರಿದಿದೆ. ಸಂಗೀತಾಗೆ ಈಗಾಗಲೇ ಫಿನಾಲೆ ಟಿಕೆಟ್ ಸಿಕ್ಕಿದೆ. ತುಕಾಲಿ ಅವರು ಈ ವಾರ ನಾಮಿನೇಟ್ ಆಗದೆ ಫಿನಾಲೆ ವೀಕ್ ತಲುಪಿದ್ದಾರೆ. ವರ್ತೂರು ಸಂತೋಷ್ ಈ ವಾರ ಮೊದಲು ಸೇವ್ ಆಗಿ ಅವರು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಉಳಿದ ನಾಲ್ಕು ಸ್ಥಾನಕ್ಕೆ ಐದು ಜನರ ಮಧ್ಯದಲ್ಲಿ ಪೈಪೋಟಿ ನಡೆಯುತ್ತಿದೆ. ಶೀಘ್ರದಲ್ಲೇ ಮತ್ತೊಂದು ಎಲಿಮಿನೇಷನ್ ನಡೆಯಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ