Udaya TV: ‘ಪ್ರೀತಿಯ ಅರಸಿ’ ಧಾರಾವಾಹಿಯಲ್ಲಿ ಗಿರಿಜಾ ಲೋಕೇಶ್, ಪದ್ಮಾ ವಾಸಂತಿ; ಅ.16ಕ್ಕೆ ಆರಂಭ
ಅಕ್ಟೋಬರ್ 16ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ‘ಪ್ರೀತಿಯ ಅರಸಿ’ ಸೀರಿಯಲ್ ಪ್ರಸಾರ ಆಗಲಿದೆ. ರಕ್ಷಾ ನಿಂಬರ್ಗಿ, ಪೃಥ್ವಿ ಶೆಟ್ಟಿ, ಗಿರಿಜಾ ಲೋಕೇಶ್, ಪದ್ಮಾ ವಾಸಂತಿ, ಮಿಥುನ್ ತೇಜಸ್ವಿ, ರಾಧಾ ಜೈರಾಮ್, ನಾಗೇಂದ್ರ ಅರಸ್ ಮುಂತಾದ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೊಸ ಸೀರಿಯಲ್ ಬಗ್ಗೆ ಇಲ್ಲಿದೆ ಮಾಹಿತಿ..
ಕರುನಾಡಿನ ಕಿರುತೆರೆ ಪ್ರೇಕ್ಷಕರಿಗೆ ವಿವಿಧ ಬಗೆಯ ಮನರಂಜನೆ ನೀಡುತ್ತಾ ಬಂದಿರುವ ‘ಉದಯ ಟಿವಿ’ಗೆ ಮೂರು ದಶಕಗಳ ಇತಿಹಾಸ ಇದೆ. ಈವರೆಗೂ ಹಲವು ಬಗೆಯ ರಂಜನೀಯ ಕಾರ್ಯಕ್ರಮಗಳನ್ನು ವೀಕ್ಷಕರ ಎದುರು ತರಲಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ಹೊಸ ಧಾರಾವಾಹಿಗಳನ್ನು (New Kannada Serial) ಕೂಡ ಈ ಉದಯ ಟಿವಿ ಪರಿಚಯಿಸುತ್ತಿದೆ. ಕೆಲವೇ ವಾರಗಳ ಹಿಂದೆ ಡಿಫರೆಂಟ್ ಆದಂತಹ ಕಥಾಹಂದರ ಹೊಂದಿರುವ ‘ಶಾಂಭವಿ’ ಧಾರಾವಾಹಿ ಪ್ರಾರಂಭ ಆರಂಭ ಆಗಿತ್ತು. ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಈಗಾಗಲೇ ಆ ಸೀರಿಯಲ್ಗೆ ಮನ್ನಣೆ ಸಿಗುತ್ತಿದೆ. ಅದರ ಬೆನ್ನಲ್ಲೇ ಉದಯ ಟಿವಿ (Udaya TV) ಇನ್ನೊಂದು ಹೊಸ ಧಾರಾವಾಹಿಯ ಪ್ರಸಾರಕ್ಕೆ ದಿನಾಂಕ ನಿಗದಿ ಮಾಡಿದೆ. ‘ಪ್ರೀತಿಯ ಅರಸಿ’ (Preethiya Arasi) ಎಂಬುದು ಈ ಧಾರಾವಾಹಿಯ ಹೆಸರು.
ಅಕ್ಟೋಬರ್ 16ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ‘ಪ್ರೀತಿಯ ಅರಸಿ’ ಸೀರಿಯಲ್ ಪ್ರಸಾರ ಆಗಲಿದೆ. ಇದರಲ್ಲಿ ಅಪರೂಪದ ಪ್ರೇಮಕಥೆ ಇರಲಿದೆ ಎಂದು ತಂಡ ಹೇಳಿಕೊಂಡಿದೆ. ಶೃತಿ ನಾಯ್ಡು ಅವರು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ರಮೇಶ್ ಇಂದಿರಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅಂಜಲಿ ಎಂಬ ಪಾತ್ರವನ್ನು ರಕ್ಷಾ ನಿಂಬರ್ಗಿ ಮಾಡುತ್ತಿದ್ದಾರೆ. ರಾಕಿಯಾಗಿ ಪೃಥ್ವಿ ಶೆಟ್ಟಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ‘ಸಿಂಪಲ್’ ಸುನಿ ನಿರ್ದೇಶನದಲ್ಲಿ ‘ಶಾಂಭವಿ’ ಧಾರಾವಾಹಿ
ಅಂಜಲಿ ಮತ್ತು ರಾಕಿಯನ್ನು ಒಂದಾಗಿಸಲು ಪ್ರಯತ್ನಿಸುವ ಅಜ್ಜಿಯರ ಪಾತ್ರಕ್ಕೆ ಗಿರಿಜಾ ಲೋಕೇಶ್ ಹಾಗೂ ಪದ್ಮಾ ವಾಸಂತಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಅಪ್ಪನ ಪಾತ್ರವನ್ನು ಜೈ ಜಗದಿಶ್ ನಿಭಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಮಿಥುನ್ ತೇಜಸ್ವಿ, ರಾಧಾ ಜೈರಾಮ್, ನಾಗೇಂದ್ರ ಅರಸ್ ಅವರು ಕೂಡ ಈ ಧಾರಾವಾಹಿಯ ಪಾತ್ರವರ್ಗದಲ್ಲಿದ್ದಾರೆ. ಈ ಎಲ್ಲ ಕಲಾವಿದರ ಸಂಗಮದಿಂದಾಗಿ ‘ಪ್ರೀತಿಯ ಅರಸಿ’ ಧಾರಾವಾಹಿ ವಿಶೇಷ ಎನಿಸಿಕೊಳ್ಳುತ್ತಿದೆ.
ಇದನ್ನೂ ಓದಿ: Ananda Raaga Serial: ಕಪ್ಪು ಹುಡುಗನ ಕಥೆಯೇ ‘ಆನಂದರಾಗ’
ಸಾಮಾನ್ಯವಾಗಿ ಗಂಡು ಮನೆಯಿಂದ ಹೊರಗೆ ಬಂದು ದುಡಿಯುತ್ತಾನೆ ಹಾಗೂ ಮನೆಯೊಳಗಿನ ಜವಾಬ್ದಾರಿಯನ್ನು ಹೆಣ್ಣು ನಿಭಾಯಿಸುತ್ತಾಳೆ ಎಂಬ ಲೋಕಾರೂಢಿ ಇದೆ. ಆದರೆ ಈ ಸೀರಿಯಲ್ನ ಮುಖ್ಯ ಪಾತ್ರಗಳಾದ ಅಂಜಲಿ ಮತ್ತು ರಾಕಿಯ ಮನಸ್ಥಿತಿ ಭಿನ್ನವಾಗಿದೆ. ತನಗೆ ಉದ್ಯೋಗವೇ ಮುಖ್ಯ ಎಂದುಕೊಂಡವಳು ಅಂಜಲಿ. ತನ್ನ ಪಾಲಿಗೆ ಕುಟುಂಬವೇ ಸರ್ವಸ್ವ ಎಂದುಕೊಂಡವನು ರಾಕಿ. ಇಬ್ಬರ ನಡುವಿನ ಕಥೆ ‘ಪ್ರೀತಿಯ ಅರಸಿ’ ಸೀರಿಯಲ್ನಲ್ಲಿ ಬಿತ್ತರ ಆಗಲಿದೆ. ‘ಕನ್ಯಾದಾನ’, ‘ಆನಂದರಾಗ’, ‘ಅಣ್ಣ-ತಂಗಿ’, ‘ಸೇವಂತಿ’, ‘ಜನನಿ’, ‘ರಾಧಿಕಾ’, ‘ಗೌರಿಪುರದ ಗಯ್ಯಾಳಿಗಳು’ ಮುಂತಾದ ಧಾರಾವಾಹಿಗಳ ಪಾತ್ರಗಳ ರೀತಿಯೇ ‘ಪ್ರೀತಿಯ ಅರಸಿ’ ಸೀರಿಯಲ್ನ ಪಾತ್ರಗಳು ಜನರಿಗೆ ಇಷ್ಟವಾಗುವ ಭರವಸೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.