Ananda Raaga Serial: ಕಪ್ಪು ಹುಡುಗನ ಕಥೆಯೇ ‘ಆನಂದರಾಗ’; ಮಾ.13ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ
Udaya TV | Kannada Serial: ಡಿಫರೆಂಟ್ ಲವ್ ಸ್ಟೋರಿ ಹೊಂದಿರುವ ‘ಆನಂದರಾಗ’ ಧಾರಾವಾಹಿಯಲ್ಲಿ ದುರ್ಗಾ ಪಾತ್ರವನ್ನು ನಟಿ ದೀಪಾ ಹಿರೇಮಠ್ ಅವರು ನಿಭಾಯಿಸುತ್ತಿದ್ದಾರೆ. ಚೆಲುವರಾಜ್ ಪಾತ್ರಕ್ಕೆ ರಂಗಭೂಮಿ ನಟ ಮಂಜು ಬಣ್ಣ ಹಚ್ಚುತ್ತಿದ್ದಾರೆ.
ಧಾರಾವಾಹಿಗಳ ಮಾರುಕಟ್ಟೆ ದಿನದಿನಕ್ಕೂ ಹಿರಿದಾಗುತ್ತಿದೆ. ಪ್ರತಿ ವಾಹಿನಿಗಳ ನಡುವೆ ಪೈಪೋಟಿ ಇದೆ. ಡಿಫರೆಂಟ್ ಆದಂತಹ ಕಥಾಹಂದರ ಇರುವ ಕನ್ನಡ ಸೀರಿಯಲ್ಗಳಿಗೆ (Kannada Serials) ಪ್ರೇಕ್ಷಕರು ಮನಸೋಲುತ್ತಾರೆ. ಹಾಗಾಗಿ ಒಂದಕ್ಕಿಂತ ಒಂದು ಭಿನ್ನವಾದ ಕಥೆಯನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಆಗುತ್ತಿದೆ. ಈ ನಿಟ್ಟಿನಲ್ಲಿ ‘ಉದಯ ಟಿವಿ’ (Udaya TV) ಒಂದು ಹೊಸ ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದೆ. ಈ ಧಾರಾವಾಹಿ ಹೆಸರು ‘ಆನಂದರಾಗ’. ಮಾರ್ಚ್ 13ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ಈ ಧಾರಾವಾಹಿ ಬಿತ್ತರ ಆಗಲಿದೆ. ‘ವಿಷನ್ ಟೈಮ್ಸ್’ ನಿರ್ಮಾಣ ಹಾಗೂ ಎಸ್. ಗೋವಿಂದ್ ಅವರು ನಿರ್ದೇಶನದಲ್ಲಿ ‘ಆನಂದರಾಗ’ ಸೀರಿಯಲ್ (Ananda Raaga Serial) ಮೂಡಿಬರಲಿದೆ. ಈ ಹೊಸ ಧಾರಾವಾಹಿ ಬಗ್ಗೆ ಇಲ್ಲಿದೆ ವಿವರ..
ಕಪ್ಪು ಮೈಬಣ್ಣ ಇರುವ ಯುವತಿಯ ಕಥೆಗಳನ್ನು ಈಗಾಗಲೇ ಕೆಲವು ಸೀರಿಯಲ್ಗಳಲ್ಲಿ ಪ್ರೇಕ್ಷಕರು ನೋಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಯುವಕನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ರೀತಿಯ ಕಥೆಯನ್ನು ‘ಆನಂದರಾಗ’ ಧಾರಾವಾಹಿ ಮೂಲಕ ಹೇಳಲಾಗುತ್ತಿದೆ. ಅದೇ ಈ ಸೀರಿಯಲ್ನ ವಿಶೇಷ. ಕಪ್ಪು ಮೈಬಣ್ಣ ಇರುವ ಹುಡುಗನ ಮನಸ್ಥಿತಿ ಎಂಥದ್ದು? ಅವನಿಗೆ ಎದುರಾಗುವ ಅವಮಾನ ಹೇಗಿರುತ್ತದೆ? ಖಿನ್ನತೆಯಿಂದ ಆತ ಹೊರಬರುವುದು ಹೇಗೆ ಎಂಬಿತ್ಯಾದಿ ವಿಷಯಗಳು ಈ ಧಾರಾವಾಹಿಯಲ್ಲಿ ಇರಲಿವೆ.
ಇದನ್ನೂ ಓದಿ: ಕೆಲಸ ಇಲ್ಲದೆ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಖ್ಯಾತ ಸೀರಿಯಲ್ ನಟಿಯರು
ಹೇಗಿದೆ ‘ಆನಂದರಾಗ’ ಹೀರೋ ಪಾತ್ರ?
‘ಆನಂದರಾಗ’ ಧಾರಾವಾಹಿಯ ಕಥಾನಾಯಕನ ಪಾತ್ರದ ಹೆಸರು ಚೆಲುವರಾಜ್. ಇವನು ‘ರೆಬಲ್ ಸ್ಟಾರ್’ ಅಂಬರೀಷ್ ಅವರ ಅಪ್ಪಟ ಅಭಿಮಾನಿ. ಒಂದಲ್ಲ ಒಂದು ದಿನ ತಾನೂ ಅಂಬರೀಷ್ ರೀತಿ ಹೀರೋ ಆಗಬಲ್ಲೆ ಎಂದು ಆತ ಕನಸು ಕಂಡಿದ್ದಾನೆ. ಚೆಲುವನ ತಾಯಿ ಹೆಸರು ವಸುಂಧರ. ಮಗನಿಗೆ ವಿದ್ಯೆ ಕಲಿಸಲು ಸಾಧ್ಯವಾಗದೇ ಆಕೆ ಹೈರಾಣಾಗಿದ್ದಾಳೆ. ಸಮಾಜದಲ್ಲಿ ಮಗನಿಗೆ ಉತ್ತಮ ಸ್ಥಾನ ಕೊಡಿಸಬೇಕು ಎಂದು ಆಕೆ ಪಣ ತೊಟ್ಟಿದ್ದಾಳೆ.
ಇದನ್ನೂ ಓದಿ: ತಾಯಿಯಾದ ಬಳಿಕ ಸೀರಿಯಲ್ ನಟಿ ಟಾಪ್ ಲೆಸ್ ಪೋಸ್; ಬೇಸರಗೊಂಡ ಫ್ಯಾನ್ಸ್ ಹೇಳಿದ್ದೇನು?
ಚೆಲುವರಾಜನಿಗೆ ಜೋಡಿ ದುರ್ಗಾ:
ಕಥಾನಾಯಕಿ ಪಾತ್ರದ ಹೆಸರು ದುರ್ಗಾ. ಅಪ್ಪ-ಅಮ್ಮನ ಮುದ್ದಿನ ಮಗಳಾದ ಆಕೆಗೆ ಐ.ಪಿ.ಎಸ್. ಆಫೀಸರ್ ಆಗಬೇಕು ಎಂಬ ಕನಸು. ಇಂಥ ಹುಡುಗಿಗೆ ಚೆಲುವರಾಜ್ ಜೊತೆ ಅರಳುವ ವಿಭಿನ್ನವಾದ ಪ್ರೇಮಕಥೆಯೇ ‘ಆನಂದರಾಗ’ ಧಾರಾವಾಹಿಯ ಹೈಲೈಟ್. ತನ್ನ ಮುಗುಳುನಗೆಯಿಂದಲೇ ಎಲ್ಲ ಸಮಸ್ಯೆ ಬಗೆಹರಿಸುವ ಚತುರೆಯಾದ ದುರ್ಗಾ ಮತ್ತು ಚೆಲುವರಾಜನ ಋಣಾನುಬಂಧದ ಕಥೆಯನ್ನು ಹೇಳಲಿದೆ ‘ಆನಂದರಾಗ’ ಸೀರಿಯಲ್.
‘ಆನಂದರಾಗ’ ಧಾರಾವಾಹಿ ಪಾತ್ರವರ್ಗ:
ಡಿಫರೆಂಟ್ ಲವ್ ಸ್ಟೋರಿ ಹೊಂದಿರುವ ‘ಆನಂದರಾಗ’ ಧಾರಾವಾಹಿಯಲ್ಲಿ ದುರ್ಗಾ ಪಾತ್ರವನ್ನು ನಟಿ ದೀಪಾ ಹಿರೇಮಠ್ ಅವರು ನಿಭಾಯಿಸುತ್ತಿದ್ದಾರೆ. ಚೆಲುವರಾಜ್ ಪಾತ್ರಕ್ಕೆ ರಂಗಭೂಮಿ ನಟ ಮಂಜು ಬಣ್ಣ ಹಚ್ಚುತ್ತಿದ್ದಾರೆ. ಕಥಾನಾಯಕಿಯ ತಂದೆಯಾಗಿ ಕೀರ್ತಿರಾಜ್, ತಾಯಿಯಾಗಿ ಉಷಾ ಭಂಡಾರಿ ನಟಿಸುತ್ತಿದ್ದಾರೆ. ಹೀರೋ ತಾಯಿ ಪಾತ್ರದಲ್ಲಿ ವೀಣಾ ಸುಂದರ್ ಅಭಿನಯಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.