ಬಿಗ್​ಬಾಸ್ ಮನೆಯಲ್ಲಿ ಕಿತ್ತಾಡಿದ ಶಿವ-ಸತಿ

Bigg Boss Kannada 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ನಾಮಿನೇಷನ್ ನಡೆದಿದ್ದು, ಶಿವ-ಸತಿ ಪರಸ್ಪರ ವಾಗ್ವಾದ ಮಾಡಿಕೊಂಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಕಿತ್ತಾಡಿದ ಶಿವ-ಸತಿ
Follow us
ಮಂಜುನಾಥ ಸಿ.
|

Updated on: Oct 10, 2023 | 11:46 PM

ಬಿಗ್​ಬಾಸ್ ಕನ್ನಡ ಸೀಸನ್ 10ರ (Bigg Boss) ಮೊದಲ ನಾಮಿನೇಷನ್ ಪ್ರಕ್ರಿಯೆ ಮಂಗಳವಾರ ನಡೆದಿದೆ. ನಿರೀಕ್ಷೆಯಂತೆಯೇ ನಾಮಿನೇಷನ್ ಬಳಿಕ ಸ್ಪರ್ಧಿಗಳ ನಡುವೆ ಚರ್ಚೆ, ವಾಗ್ವಾದ ಜಗಳ, ದೂರು, ಅಸಮಾಧಾನ, ಸಣ್ಣ ದ್ವೇಷ, ಸಿಟ್ಟುಗಳು ಪ್ರಾರಂಭವಾಗಿವೆ. ಅದರಲ್ಲಿಯೂ ಬಿಗ್​ಬಾಸ್ ಮನೆಯಲ್ಲಿ ಶಿವ-ಸತಿ ಪರಸ್ಪರ ಜಗಳವಾಡಿದ್ದು ನಾಮಿನೇಷನ್ ಎಪಿಸೋಡ್​ನ ಪ್ರಮುಖ ಘಟನೆಗಳಲ್ಲಿ ಒಂದು.

‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ನಿರ್ವಹಿಸುವ ನಟ ವಿನಯ್ ಬಿಗ್​ಬಾಸ್ ಪ್ರವೇಶ ಮಾಡಿದ್ದಾರೆ. ಡಯಟ್, ವ್ಯಾಯಾಮ, ಸ್ವಚ್ಛತೆ ಹೀಗೆ ಬಹಳ ಶಿಸ್ತಿನ ವ್ಯಕ್ತಿ ಆಗಿರುವ ವಿನಯ್, ಬಿಗ್​ಬಾಸ್ ಮನೆಯ ನಿಯಮಗಳ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಇನ್ನು ಅದೇ ಧಾರಾವಾಹಿಯಲ್ಲಿ ಶಿವನ ಮೊದಲ ಪತ್ನಿ ಸತಿ ಅಥವಾ ದಾಕ್ಷಾಯಿಣಿ ಪಾತ್ರದಲ್ಲಿ ನಟಿಸಿರುವ ಸಂಗೀತಾ ಶೃಂಗೇರಿ ಸಹ ಬಿಗ್​ಬಾಸ್ ಪ್ರವೇಶ ಮಾಡಿದ್ದಾರೆ.

ಸಂಗೀತಾ ಅವರಿಗೆ ಮೊದಲ ದಿನ ಕಡಿಮೆ ಜನ ಮತ ಬಂದ ಕಾರಣ ಅವರನ್ನು ಅಸಮರ್ಥ ಎಂದು ಪರಿಗಣಿಸಿ ಅವರಿಗೆ ಪ್ರತ್ಯೇಕ ಬಟ್ಟೆಗಳನ್ನು ನೀಡಿ ಇತರೆ ಸದಸ್ಯರಿಂದ ಭಿನ್ನವಾಗಿ ಪರಿಗಣಿಸಲಾಗಿದೆ. ಸಂಗೀತ ಜೊತೆಗೆ ಇನ್ನೂ ಐದು ಮಂದಿ ಅಸಮರ್ಥರು ಬಿಗ್​ಬಾಸ್ ಮನೆಯಲ್ಲಿದ್ದಾರೆ.

ಇದನ್ನೂ ಓದಿ:ನಾಮಿನೇಟ್ ಆದವರಿಗೆ ಬಣ್ಣದ ಗುಂಡು: ಬಿಗ್​ಬಾಸ್ ಮನೆಯಲ್ಲಿ ಶುರು ಅಸಲಿ ಆಟ

ಇಂದು ಮನೆಯ ಇತರೆ ಸದಸ್ಯರು ಅಸಮರ್ಥ ಎನಿಸಿಕೊಂಡಿರುವ ಆರು ಸದಸ್ಯರನ್ನು ನಾಮಿನೇಟ್ ಮಾಡಬೇಕಿತ್ತು, ಹರ ಹರ ಮಹದೇವ ನಟ ವಿನಯ್, ಧಾರಾವಾಹಿಯಲ್ಲಿ ತನ್ನ ಪತ್ನಿಯ ಪಾತ್ರ ಅಂದರೆ ಸತಿಯ ಪಾತ್ರ ನಿರ್ವಹಿಸಿರುವ ಸಂಗೀತಾ ಹೆಸರು ಹೇಳಿದರು. ಸಂಗೀತಾ ಸೋಫಾ ಮೇಲೆ ಕೆಲ ಸೆಕೆಂಡ್​ಗಳ ಕಾಲ ಕೂತು ಬಿಗ್​ಬಾಸ್ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣವನ್ನು ವಿನಯ್ ನೀಡಿದರು.

ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ ಇದೇ ಕಾರಣಕ್ಕೆ ವಿನಯ್ ಮೇಲೆ ವಾಗ್ವಾದ ನಡೆಸಿ, ನಾನು ಅಥವಾ ಮನೆಯ ಯಾವುದೇ ಸದಸ್ಯರು ನಿಯಮ ಮುರಿದರೆ ಸ್ವತಃ ಬಿಗ್​ಬಾಸ್ ಎಚ್ಚರಿಸುತ್ತಾರೆ, ನಿಯಮ ಮುರಿದಿದ್ದೀರಿ ಎಂದು ಹೇಳುತ್ತಾರೆ. ನಾನು ನಿಯಮ ಮುರಿದೆ ಎಂದು ನೀವು ಹೇಗೆ ತೀರ್ಮಾನಿಸಿದಿರಿ, ನಿಮಗೆ ನೀವೇ ಬಿಗ್​ಬಾಸ್ ಅಂದುಕೊಂಡಿದ್ದೀರಾ? ಎಂದು ಖಾರವಾಗಿಯೇ ಪ್ರಶ್ನಿಸಿದರು.

ಆರಂಭದಲ್ಲಿ ಮೆದು ಧ್ವನಿಯಲ್ಲಿ ಮಾತನಾಡಿದ ನಟ ವಿನಯ್ ಆ ನಂತರ ಅವರೂ ಸಹ ಧ್ವನಿ ಏರಿಸಿ ಸಂಗೀತಾ ಬಳಿ ಮಾತನಾಡಿದರು. ಕೊನೆಗೆ ಸಂಗೀತಾ, ನಿನ್ನ ನಿಜ ಬಣ್ಣ ತೋರಿಸಿದೆ ಎಂದರೆ, ವಿನಯ್, ನಿನ್ನ ಮೈಮೇಲೆ ಬಣ್ಣವಿದೆ ಅದು ಎಲ್ಲರಿಗೂ ಕಾಣುತ್ತಿದೆ ಎಂದು ಟಾಂಗ್ ನೀಡಿದರು. ವಿನಯ್, ನಟ ಕಾರ್ತಿಕ್ ಅನ್ನು ಸಹ ನಿಯಮ ಉಲ್ಲಂಘಿಸಿದ ಕಾರಣ ನೀಡಿಯೇ ನಾಮಿನೇಟ್ ಮಾಡಿದರು. ಅವರೂ ಸಹ ವಿನಯ್ ಬಳಿ ಕೆಲ ಕಾಲ ವಾಗ್ವಾದ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ