AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ಕನ್ನಡ’ ಪ್ರಸಾರ ಕಂಡ ಮೊದಲ ದಿನವೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್

‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಿದೆ. ಸೆಪ್ಟೆಂಬರ್ 29ರಂದು ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಹಲವು ಕ್ಷೇತ್ರಗಳ ಸ್ಪರ್ಧಿಗಳು ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್​ನಲ್ಲಿ ಮೂಡಿ ಬಂದಿದೆ. ಆದರೆ, ಈ ಬಾರಿ ಒಂದು ಬ್ಯಾಡ್​ ನ್ಯೂಸ್ ಕೂಡ ಇದೆ.

‘ಬಿಗ್ ಬಾಸ್ ಕನ್ನಡ’ ಪ್ರಸಾರ ಕಂಡ ಮೊದಲ ದಿನವೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Sep 30, 2024 | 7:05 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿದೆ. ಈ ಬಾರಿ ಒಟ್ಟೂ 17 ಮಂದಿ ದೊಡ್ಮನೆ ಸೇರಿದ್ದಾರೆ. ಈ ಬಾರಿ ನರಕ-ಸ್ವರ್ಗ ಕಾನ್ಸೆಪ್ಟ್​ನಲ್ಲಿ ಬಿಗ್ ಬಾಸ್ ಮೂಡಿ ಬಂದಿದೆ. ಈಗ ಬಿಗ್ ಬಾಸ್ ವೀಕ್ಷಕರಿಗೆ ಮೊದಲ ದಿನವೇ ಬ್ಯಾಡ್ ನ್ಯೂಸ್ ಸಿಕ್ಕಿದೆ. ಹಾಗಾದರೆ ಏನು ಆ ಬ್ಯಾಡ್ ನ್ಯೂಸ್ ಎಂಬ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ’ ಈ ಬಾರಿ ಕಲರ್ಸ್​ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಈ ಹಿಂದಿನ ಕೆಲವು ವರ್ಷ ‘ಬಿಗ್ ಬಾಸ್’ಗೆ 24 ಗಂಟೆ ಲೈವ್ ನೀಡಲಾಗುತ್ತಿತ್ತು. ಈ ಬಾರಿ ಅದನ್ನು ತೆಗೆಯಲಾಗಿದೆ. ಎಪಿಸೋಡ್​ಗಿಂತ ಮೊದಲೇ ಬಿಗ್ ಬಾಸ್ ನೋಡಬಹುದು ಎಂದು ಪ್ಲ್ಯಾನ್ ಮಾಡಿದ್ದವರಿಗೆ ಬೇಸರ ಆಗಿದೆ.

ಕಳೆದ ವರ್ಷ ‘ಬಿಗ್ ಬಾಸ್’ ಲೈವ್ ನೀಡಿದಾಗ ಕೆಲವು ತೊಂದರೆಗಳು ಕೂಡ ಎದುರಾಗಿದ್ದವು. ವೀಕ್ಷಕರಿಗೆ ಎಲ್ಲವೂ ತಿಳಿಯಬಾರದು ಎನ್ನುವ ಕಾರಣಕ್ಕೆ ಪ್ರಮುಖ ಸಂಭಾಷಣೆಗಳನ್ನು ಮ್ಯೂಟ್ ಮಾಡಾಗುತ್ತಿತ್ತು. ಅಲ್ಲದೆ, ಯಾವುದೇ ಟಾಸ್ಕ್​ಗಳನ್ನು ಇಲ್ಲಿ ತೋರಿಸುವ ಕೆಲಸ ಆಗುತ್ತಿರಲಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಅನೇಕರು ಇದರ ಬಗ್ಗೆ ಅಪಸ್ವರ ತೆಗೆದಿದ್ದರು. ಈ ಬಾರಿ ಲೈವ್​ ಇರುವುದಿಲ್ಲ. ಹೀಗಾಗಿ, ರಾತ್ರಿ ಒಂದೂವರೆ ಗಂಟೆ ತೋರಿಸುವ ಎಪಿಸೋಡ್​ನೇ ಎಲ್ಲರೂ ನೋಡಬೇಕು.

ಇದನ್ನೂ ಓದಿ: BBK11: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ 17 ಸ್ಪರ್ಧಿಗಳ ಹೆಸರು, ವಿವರ, ಫೋಟೋ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ಬಾರಿ ಸ್ವರ್ಗ ನರಕ ಕಾನ್ಸೆಪ್ಟ್​ನಲ್ಲಿ ಇದೆ. 10 ಜನ ಸ್ವರ್ಗ ಹಾಗೂ 7 ಜನ ನರಕದಲ್ಲಿ ಇದ್ದಾರೆ. ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಅನುಷಾ ರೈ, ಧರ್ಮಕೀರ್ತಿರಾಜ್, ಲಾಯರ್ ಜಗದೀಶ್, ಶಿಶಿರ್, ತ್ರಿವಿಕ್ರಂ, ಹಂಸ, ಮಾನಸಾ, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ್, ಉಗ್ರಂ ಮಂಜು, ಮೋಕ್ಷಿತಾ ಪೈ, ರಂಜಿತ್ ಕುಮಾರ್ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.