‘ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’

| Updated By: ರಾಜೇಶ್ ದುಗ್ಗುಮನೆ

Updated on: Aug 01, 2021 | 3:25 PM

ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನ ಎಲ್ಲರನ್ನೂ ಅಳೆದು ತೂಗಿದ್ದರು. ಯಾರು ಯಾವ ತಪ್ಪನ್ನು ಮಾಡುತ್ತಿದ್ದಾರೆ ಮತ್ತು ಅದರಿಂದ ಆಗುವ ಪರಿಣಾಮಗಳೇನು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು.

‘ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’
‘ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’
Follow us on

ಕನ್ನಡ ಬಿಗ್​ ಬಾಸ್ ಸೀಸನ್​ 8 ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ಇದಕ್ಕೆ ಉತ್ತರ ಸಿಗಬೇಕು ಎಂದರೆ ಇನ್ನೂ ಒಂದು ವಾರ ಕಾಯೋದು ಅನಿವಾರ್ಯ. ಆದರೆ, ಅನೇಕರು ಸೀಸನ್​ 8 ಕಿರೀಟವನ್ನು ಯಾರು ಧರಿಸಬಹುದು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಎಲಿಮಿನೇಟ್​ ಆದ ಚಕ್ರವರ್ತಿ ಕೂಡ ತಮ್ಮ ಲೆಕ್ಕಾಚಾರವನ್ನು ಹೇಳಿದ್ದಾರೆ.

ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನ ಎಲ್ಲರನ್ನೂ ಅಳೆದು ತೂಗಿದ್ದರು. ಯಾರು ಯಾವ ತಪ್ಪನ್ನು ಮಾಡುತ್ತಿದ್ದಾರೆ ಮತ್ತು ಅದರಿಂದ ಆಗುವ ಪರಿಣಾಮಗಳೇನು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಆದರೆ, ಅವರು ಮಾಡಿದ ಒಂದು ತಪ್ಪಿನಿಂದ ಬಿಗ್​ ಬಾಸ್​ನಲ್ಲಿ ಕಡಿಮೆ ವೋಟ್​ ಪಡೆದು ಹೊರ ಬರುವಂತಾಯಿತು.

ಬಿಗ್​ ಬಾಸ್​ ಮನೆಯಲ್ಲಿ ವೀಕೆಂಡ್​ನಲ್ಲಿ ಎಲಿಮಿನೇಷನ್​ ನಡೆಯುತ್ತದೆ. ಆದರೆ, ಈ ಬಾರಿ ಮಿಡ್​ವೀಕ್​ ಎಲಿಮಿನೇಷನ್​ ನಡೆದಿತ್ತು. ಈ ಕಾರಣಕ್ಕೆ ಸುದೀಪ್​ ಅವರನ್ನು ಬಿಗ್​ ಬಾಸ್​ ವೇದಿಕೆ ಮೇಲೆ ಮೀಟ್​ ಮಾಡೋಕೆ ಚಕ್ರವರ್ತಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಶನಿವಾರ (ಜುಲೈ 31) ಚಕ್ರವರ್ತಿ ಬಿಗ್​ ಬಾಸ್​ ವೇದಿಕೆ ಏರಿದ್ದರು. ಈ ವೇಳೆ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಲಾಯಿತು.

ಬಿಗ್​ ಬಾಸ್ ಗೆಲ್ಲೋಕೆ ಸಾಧ್ಯವಿಲ್ಲ ಎನ್ನುವ ಸ್ಪರ್ಧಿ ಯಾರು ಎಂದು ಸುದೀಪ್​ ಕೇಳಿದರು. ಇದಕ್ಕೆ ದಿವ್ಯಾ ಸುರೇಶ್​-ಪ್ರಶಾಂತ್​ ಸಂಬರಗಿ ಹೆಸರನ್ನು ಎತ್ತಿಕೊಂಡರು ಚಕ್ರವರ್ತಿ. ‘ಪ್ರಶಾಂತ್​ ಮೊದಲ ಇನ್ನಿಂಗ್ಸ್​ನಂತೆ ಇಲ್ಲ. ಅವರು ಒಂದು ವರ್ಗದ ಜನತೆಗೆ ಮಾತ್ರ ಇಷ್ಟವಾಗುತ್ತಿದಾರೆ. ದಿವ್ಯಾ ಸುರೇಶ್​ ಅಮಾಯಕಿ. ಅವಳಲ್ಲಿ ಬದಲಾವಣೆ ಬಂದಿದೆ. ಆದರೆ, ತುಂಬ ತಡವಾಗಿದೆ’ ಎಂದರು ಅವರು.

ಬಿಗ್​ ಬಾಸ್​ ಯಾರು ಗೆಲ್ಲಬಹುದು ಎಂದು ನಿಮಗನ್ನಿಸುತ್ತದೆ ಎಂದು ಸುದೀಪ್​ ಕೇಳಿದರು. ‘ನಾನು ಮೊದಲ ಇನ್ನಿಂಗ್ಸ್​​ನಿಂದ ಹೊರ ಬಂದಾಗ ಅರವಿಂದ್ ಗೆಲ್ತಾರೆ ಅಂದುಕೊಂಡಿದ್ದೆ. ಆದರೆ, ಈ ಇನ್ನಿಂಗ್ಸ್​ನಲ್ಲಿ ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ. ನನ್ನ ಪ್ರಕಾರ ಮಂಜು ಗೆಲ್ತಾರೆ’ ಎಂದರು ಚಕ್ರವರ್ತಿ.

ಇದನ್ನೂ ಓದಿ: ಭಾನುವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ಸ್ಪರ್ಧಿ ಇವರೇನಾ?

‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​