‘ಬಿಗ್ ಬಾಸ್ ಕನ್ನಡ’ಕ್ಕೆ ಬಂದ ‘ಸೀತಾ ರಾಮ’ ಖ್ಯಾತಿಯ ಗಗನ್ ಚಿನ್ನಪ್ಪ

ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟ ಗಗನ್ ಚಿನ್ನಪ್ಪ 'ಬಿಗ್ ಬಾಸ್ ಕನ್ನಡ ಸೀಸನ್ 13'ರ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹ್ಯಾಂಡ್ಸಮ್ ಲುಕ್ ಹಾಗೂ ಡ್ಯಾಶಿಂಗ್ ಪರ್ಸನಾಲಿಟಿಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಇವರು, ಈ ಬಾರಿಯ ದೊಡ್ಮನೆ ಅಂಗಳದಲ್ಲಿ ತಮ್ಮ ರಿಯಲ್ ಆಟದ ಮೂಲಕ ಸಖತ್ ಸದ್ದು ಮಾಡಲು ಸಂಪೂರ್ಣ ಸಜ್ಜಾಗಿದ್ದಾರೆ.

‘ಬಿಗ್ ಬಾಸ್ ಕನ್ನಡ’ಕ್ಕೆ ಬಂದ ‘ಸೀತಾ ರಾಮ’ ಖ್ಯಾತಿಯ ಗಗನ್ ಚಿನ್ನಪ್ಪ
ಗಗನ್ ಚಿನ್ನಪ್ಪ
Edited By:

Updated on: Sep 06, 2026 | 8:51 PM

ಮುಖ್ಯಾಂಶಗಳು

  • ದೊಡ್ಮನೆಗೆ ಕಾವೇರಿದ ಗ್ಲಾಮರ್
  • ಬಿಗ್ ಬಾಸ್ ಕನ್ನಡ 13ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಗಗನ್
  • ಸೀರಿಯಲ್ ಚಾಕೊಲೇಟ್ ಬಾಯ್ ಟು ರಿಯಾಲಿಟಿ ಶೋ

ಕನ್ನಡ ಕಿರುತೆರೆಯ ಜನಪ್ರಿಯ ನಟ ಗಗನ್ ಚಿನ್ನಪ್ಪ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಪ್ರಮುಖ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಹಲವು ಪ್ರಸಿದ್ಧ ಧಾರಾವಾಹಿಗಳಲ್ಲಿ ನಾಯಕನಾಗಿ ನಟಿಸಿ ವೀಕ್ಷಕರ ಮನ ಗೆದ್ದಿರುವ ಗಗನ್, ಇದೀಗ ರಿಯಾಲಿಟಿ ಶೋ ಅಂಗಳದಲ್ಲಿ ತಮ್ಮ ರಿಯಲ್ ವ್ಯಕ್ತಿತ್ವವನ್ನು ಅನಾವರಣಗೊಳಿಸಲು ಸಿದ್ಧರಾಗಿದ್ದಾರೆ. ಅವರು ಜೋಶ್​ನಿಂದ ದೊಡ್ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ.

‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ನಟಿಸಿದರು. ಅದು ಅವರ ಮೊದಲ ಸೀರಿಯಲ್. ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸಿ ಭರ್ಜರಿ ಮೆಚ್ಚುಗೆ ಪಡೆದರು. ಈ ಧಾರಾವಾಹಿಯಲ್ಲಿ ರಾಮ್ ಪಾತ್ರ ಸಾಕಷ್ಟು ಮೆಚ್ಚುಗೆ ಪಡೆಯಿತು. ಅವರು ಈಗ ಬಿಗ್ ಬಾಸ್​​ ವೇದಿಕೆ ಏರಿರುವುದು ಅನೇಕರಿಗೆ ಅಚ್ಚರಿ ತಂದಿದೆ.

ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರೊಂದಿಗೆ ಮಾತುಕತೆ ನಡೆಸಿದ ಗಗನ್, ತಮ್ಮ ಜರ್ನಿ ಹಂಚಿಕೊಂಡರು. ‘ಬಿಗ್ ಬಾಸ್ ಪ್ರಯಾಣ ಮುಖ್ಯ’ ಎಂದರು. ತಮ್ಮ ವಿಶಿಷ್ಟ ಪರ್ಸನಾಲಿಟಿ, ಫಿಟ್‌ನೆಸ್ ಹಾಗೂ ಚಾರ್ಮಿಂಗ್ ಲುಕ್‌ನಿಂದಲೇ ಹೆಸರುವಾಸಿಯಾಗಿರುವ ಇವರು ಮನೆಯೊಳಗೆ ಸೃಷ್ಟಿಸಲಿರುವ ಕಂಟೆಂಟ್ ಮತ್ತು ನೀಡಲಿರುವ ಟಾಸ್ಕ್ ಪರ್ಫಾರ್ಮೆನ್ಸ್ ಮೇಲೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಮಸ್ಕತ್​​ನಲ್ಲಿ ಹುಟ್ಟಿದ ಸೌಂದರ್ಯಾ ಶೆಟ್ಟಿ ಬಿಗ್ ಬಾಸ್​ಗೆ ಎಂಟ್ರಿ

ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಗಗನ್ ಚಿನ್ನಪ್ಪ, ದೊಡ್ಮನೆಯ ಸವಾಲುಗಳನ್ನು ಎದುರಿಸಿ ವೀಕ್ಷಕರ ಹೃದಯ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ‘ನಾನು ಸಖತ್ ಮನರಂಜನೆ ಕೊಡುತ್ತೇನೆ’ ಎಂದು ಗಗನ್ ಭರವಸೆ ನೀಡಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಪಡೆದರು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us