‘ಎಲ್ಲರೂ ನನ್ನ ಹೆಸರು ಕೂಗೋಕೆ ದರ್ಶನ್ ಕಾರಣ’; ಗುರುವನ್ನು ನೆನೆದ ರಚಿತಾ ರಾಮ್

ರಚಿತಾ ರಾಮ್ ಅವರು ತಮ್ಮ 12ನೇ ವರ್ಷದ ಚಿತ್ರರಂಗದ ಜರ್ನಿಯನ್ನು 'ಭರ್ಜರಿ ಬ್ಯಾಚುಲರ್ಸ್' ವೇದಿಕೆಯಲ್ಲಿ ಆಚರಿಸಿದರು. ಅವರು ತಮ್ಮ ಯಶಸ್ಸಿಗೆ ದರ್ಶನ್ ಅವರನ್ನು ಕಾರಣವೆಂದು ಹೇಳಿದರು. 'ಬುಲ್ ಬುಲ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಚಿತಾ, ದರ್ಶನ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ

‘ಎಲ್ಲರೂ ನನ್ನ ಹೆಸರು ಕೂಗೋಕೆ ದರ್ಶನ್ ಕಾರಣ’; ಗುರುವನ್ನು ನೆನೆದ ರಚಿತಾ ರಾಮ್
ರಚಿತಾ-ದರ್ಶನ್

Updated on: May 15, 2025 | 12:23 PM

ರಚಿತಾ ರಾಮ್ (Rachita Ram) ಅವರು ಕನ್ನಡದ ಸ್ಟಾರ್ ನಟಿ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ದರ್ಶನ್ ಎಂದು ಅವರು ಬಲವಾಗಿ ನಂಬುತ್ತಾರೆ. ಈ ಕಾರಣದಿಂದಲೇ ಹೋದಲ್ಲಿ ಬಂದಲ್ಲಿ ಅವರು ದರ್ಶನ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ದರ್ಶನ್ ಅವರ ಕಾರಣದಿಂದಲೇ ನಾನು ಇಲ್ಲಿವರೆಗೆ ಬಂದೆ ಎಂದು ಹೇಳುತ್ತಾರೆ. ಈಗ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೂ ಚಾಲೆಂಜಿಂಗ್ ಸ್ಟಾರ್​ನ ರಚಿತಾ ನೆನಪಿಸಿಕೊಂಡು ಧನ್ಯವಾದ ಹೇಳಿದ್ದಾರೆ. ಈ ವೇಳೆ ಅವರಿಗೊಂದು ಸರ್​ಪ್ರೈಸ್ ಕಾದಿತ್ತು.

ರಚಿತಾ ರಾಮ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಈಗ 12 ವರ್ಷ. ಅವರ ನಟನೆಯ ಮೊದಲ ಸಿನಿಮಾ ‘ಬುಲ್ ಬುಲ್’ 2013ರ ಮೇ 10ರಂದು ರಿಲೀಸ್ ಆಯಿತು. ಅವರಿಗೆ ಅವಕಾಶ ನೀಡಿದ್ದು ದರ್ಶನ್. ಆ ಸಿನಿಮಾ ಹಿಟ್ ಆಗಿ ರಚಿತಾ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಅವರನ್ನು ಎಲ್ಲರೂ ‘ಬುಲ್ ಬುಲ್’ ಎಂದೇ ಕರೆಯೋಕೆ ಆರಂಭಿಸಿದರು. ಅಷ್ಟು ಖ್ಯಾತಿಯನ್ನು ಈ ಸಿನಿಮಾ ತಂದುಕೊಟ್ಟಿತು.

ಇದನ್ನೂ ಓದಿ
ಮಾಧುರಿ ದೀಕ್ಷಿತ್ ರಿಯಾಲಿಟಿ ಶೋಗೆ ಪಡೆಯುತ್ತಾರೆ 25 ಕೋಟಿ ರೂಪಾಯಿ
17ನೇ ವಯಸ್ಸಿಗೆ ನಟನೆ; ಸಲ್ಲುಗಿಂತ ಹೆಚ್ಚು ಸಂಭಾವನೆ ಪಡೆದ ಮಾಧುರಿ
ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ ರಕ್ಷಕ್ ಬುಲೆಟ್; ತಂದೆಯೇ ಕಾರಣ
ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್?

ಆ ಬಳಿಕ ರಚಿತಾ ರಾಮ್ ಅವರು ದರ್ಶನ್ ಜೊತೆ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈಗಲೂ ಅವರು ದರ್ಶನ್ ಅವರನ್ನು ಆರಾಧಿಸುತ್ತಾರೆ. ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ರಚಿತಾ ಅವರ 12 ವರ್ಷದ ಚಿತ್ರರಂಗದ ಜರ್ನಿಯನ್ನು ಸೆಲೆಬ್ರೇಟ್ ಮಾಡುವಾಗ ಮತ್ತೊಮ್ಮೆ ಅವರು ದರ್ಶನ್​ಗೆ ಧನ್ಯವಾದ ಹೇಳಿದರು.

‘ನನ್ನ ಉಸಿರು ಇರೋವವರೆಗೂ ಒಂದು ಹೆಸರನ್ನು ನೆನಪಿಸಿಕೊಳ್ಳುತ್ತೇನೆ. ನಾನು ಎಲ್ಲೇ ಹೋದರು ಜನರು ನನ್ನ ಹೆಸರು ಕೂಗುತ್ತಾರೆ. ಇದಕ್ಕೆ ಕಾರಣ ಆಗಿದ್ದು ದರ್ಶನ್ ಸರ್’ ಎಂದರು ರಚಿತಾ ರಾಮ್. ಆ ಬಳಿಕ ದರ್ಶನ್ ವಾಯ್ಸ್ ಬಂತು. ‘ನಮ್ಮ ಬುಲ್ ಬುಲ್ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡ್ತಾ ಇರಲಿ’ ಎಂದು ಪ್ರೀತಿಯಿಂದ ಹಾರೈಸಿದರು. ರವಿಚಂದ್ರನ್ ಕೂಡ ರಚಿತಾ ನಗುವಿನ ಬಗ್ಗೆ ಮೆಚ್ಚುಗೆ ಸೂಚಿಸಿದರು

ಇದನ್ನೂ ಓದಿ: ರಚಿತಾ ರಾಮ್ ಸಿನಿ ಬದುಕಿಗೆ 12 ವರ್ಷ; ವೇದಿಕೆ ಮೇಲೆ ಬಾಯ್ತುಂಬ ಹಾರೈಸಿದ ದರ್ಶನ್ 

ಈ ಎಪಿಸೋಡ್ ಶನಿವಾರ ಹಾಗೂ ಭಾನುವಾರ ಜೀ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಎಪಿಸೋಡ್ ಪ್ರಸಾರ ಕಾಣಲಿದೆ. ಪೂರ್ತಿ ಎಪಿಸೋಡ್ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:51 am, Thu, 15 May 25