ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನಕ್ಕೆ ಒಳಗಾಗಿ ತಿಂಗಳಾಗುತ್ತಾ ಬಂದಿದೆ. ಅವರ ವಿರುದ್ಧ ಆರೋಪ ತುಂಬಾನೇ ಗಂಭೀರವಾಗಿದೆ. ಜತೆಗೆ ಅವರಿಗೆ ಜಾಮೀನು ಸಿಕ್ಕರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಜಾಮೀನು ಸಿಗುತ್ತಿಲ್ಲ. ಈ ಮಧ್ಯೆ, ಜೈಲಿನಿಂದ ಹೊರಬರೋಕೆ ರಾಜ್ ಕುಂದ್ರಾ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಮಂಗಳವಾರ (ಆಗಸ್ಟ್ 10) ರಾಜ್ ಕುಂದ್ರಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂಬೈನ ಸೆಷನ್ ಕೋರ್ಟ್ ನಡೆಸಿತ್ತು. ಸದ್ಯ, ಈ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 20ರವರೆಗೆ ಮುಂದೂಡಿದೆ. ರಾಜ್ ಕುಂದ್ರಾಗೆ ಜಾಮೀನು ನೀಡಿದರೆ ಆಗುವ ತೊಂದರೆಗಳೇನು? ಅವರಿಗೆ ಏಕೆ ಜಾಮೀನು ನೀಡಬಾರದು ಎನ್ನುವ ಬಗ್ಗೆ ಮುಂಬೈ ಕ್ರೈಮ್ ಬ್ರ್ಯಾಂಚ್ನವರು 19 ಕಾರಣಗಳನ್ನು ನೀಡಿದ್ದರು. ಈ ಕಾರಣಕ್ಕೆ ಸೆಷನ್ ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ರಾಜ್ ಕುಂದ್ರಾ ಬಾಂಬೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮೂಲಕ ಅವರು ಹೊಸ ಮಾರ್ಗ ಪ್ರಯತ್ನಿಸಿದ್ದಾರೆ.
ರಾಜ್ ಕುಂದ್ರಾಗೆ ಜಾಮೀನು ನೀಡಬಾರದು. ಒಂದೊಮ್ಮೆ ಅವರಿಗೆ ಜಾಮೀನು ಸಿಕ್ಕರೆ ಸಾಕ್ಷ್ಯ ನಾಶಮಾಡಬಹುದು. ಅವರಿಗೆ ಬ್ರಿಟನ್ ಪೌರತ್ವ ಇದೆ. ಹೀಗಾಗಿ, ಅವರು ನೇರವಾಗಿ ಬ್ರಿಟನ್ಗೆ ತೆರಳಬಹುದು ಎಂದು ಪೊಲೀಸರು ಅನುಮಾನ ಹೊರ ಹಾಕಿದ್ದಾರೆ. ಹೀಗಾಗಿ, ರಾಜ್ ಕುಂದ್ರಾಗೆ ಜಾಮೀನು ಸಿಗೋಕೆ ಸಾಧ್ಯವಾಗುತ್ತಿಲ್ಲ.
ಪಾರ್ನ್ ಸಿನಿಮಾ ನಿರ್ಮಾಣ ಮಾಡಿ ಅದನ್ನು ಹಂಚುವ ಕೆಲಸವನ್ನು ರಾಜ್ ಕುಂದ್ರಾ ಮಾಡುತ್ತಿದ್ದರು. ಆದರೆ, ತಾವು ನಿರ್ಮಾಣ ಮಾಡುತ್ತಿದ್ದುದು ನೀಲಿ ಚಿತ್ರ ಅಲ್ಲ ಎಂದಿದ್ದಾರೆ ರಾಜ್ ಕುಂದ್ರಾ. ಈಗ ಅವರು ಜೈಲಿನಿಂದ ಹೊರ ಬರೋಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದು ಸಾಧ್ಯವಾಗುತ್ತಿಲ್ಲ. ಇನ್ನು, ರಾಜ್ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಜನಪ್ರಿಯತೆಗೆ ಪೆಟ್ಟು ಬಿದ್ದಿದೆ. ಅನೇಕ ಬ್ರ್ಯಾಂಡ್ಗಳು ಅವರ ಜತೆಗಿನ ಒಪ್ಪಂದ ರದ್ದು ಮಾಡಿಕೊಳ್ಳಲು ಮುಂದಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: ‘ಒಮ್ಮೆ ಅವನು ನನ್ನ ಜತೆ ಲಿಮಿಟ್ ಕ್ರಾಸ್ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ
500 ಕೋಟಿ ಬಜೆಟ್ನಲ್ಲಿ ಕನ್ನಡ ಸಿನಿಮಾ; 640 ಎಕರೆಯಲ್ಲಿ ಸಿದ್ಧಗೊಳ್ಳಲಿದೆ ಅದ್ದೂರಿ ಸೆಟ್