AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ಕೋಟಿ ಬಜೆಟ್​ನಲ್ಲಿ ಕನ್ನಡ​ ಸಿನಿಮಾ; 640 ಎಕರೆಯಲ್ಲಿ ಸಿದ್ಧಗೊಳ್ಳಲಿದೆ ಅದ್ದೂರಿ ಸೆಟ್​

‘ಕೃಷ್ಣರಾಜ 4’ ಸಿನಿಮಾ ನಿರ್ಮಾಣಕ್ಕೆ ಗಾನ ಶ್ರವಣ್ ಸ್ವಾಮೀಜಿ ಮುಂದಾಗಿದ್ದಾರೆ. ರಾಜಮೌಳಿ ಮೀರಿಸೋ ನಿರ್ದೇಶಕನಿಗಾಗಿ ಅವರು ಹುಡುಕಾಟ ಆರಂಭಿಸಿದ್ದಾರೆ.

500 ಕೋಟಿ ಬಜೆಟ್​ನಲ್ಲಿ ಕನ್ನಡ​ ಸಿನಿಮಾ; 640 ಎಕರೆಯಲ್ಲಿ ಸಿದ್ಧಗೊಳ್ಳಲಿದೆ ಅದ್ದೂರಿ ಸೆಟ್​
ಸಹ ನಿರ್ಮಾಪಕಿ ಅದಿತಿ ಹಾಗೂ ಗಾನ ಶ್ರವಣ್ ಸ್ವಾಮೀಜಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 13, 2021 | 4:16 PM

ತೆಲುಗು ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು ಯಾವುದೇ ಚಿತ್ರ ಕೈಗೆತ್ತಿಕೊಂಡರೂ ಅದರಲ್ಲೊಂದು ಅದ್ದೂರಿತನ ಇರುತ್ತದೆ. ಇದೇ ಕಾರಣಕ್ಕೆ, ಅವರ ನಿರ್ದೇಶನದ ಸಿನಿಮಾಗಳು ಹೆಚ್ಚಿನ ಬಜೆಟ್​ ಕೇಳುತ್ತವೆ. ಸ್ಯಾಂಡಲ್​ವುಡ್​ನಲ್ಲಿ ಹೈ ಬಜೆಟ್​ ಚಿತ್ರಗಳು ಸಿದ್ಧಗೊಂಡಿವೆಯಾದರೂ ಟಾಲಿವುಡ್​ ಮೀರಿಸೋಕೆ ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ, ಬರೋಬ್ಬರಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ! ಈ ಮೂಲಕ ಟಾಲಿವುಡ್​ಅನ್ನೂ ನಾವು ಮೀರಿಸುತ್ತಿದ್ದೇವೆ. ಈ ವಿಚಾರ ಕೇಳಿ ಸಿನಿಪ್ರಿಯರು ಸಾಕಷ್ಟು ಅಚ್ಚರಿಗೊಂಡಿದ್ದಾರೆ.

‘ಕೆಜಿಎಫ್’​, ‘ಕೆಜಿಎಫ್​ 2’, ‘ಕಬ್ಜ’ ಸೇರಿ ಬೆರಳೆಣಿಕೆ ಸಿನಿಮಾಗಳು ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಂಡಿವೆ. ಆದರೆ, ತೆಲುಗಿನ ಬಾಹುಬಲಿ ಸಿನಿಮಾ ಬಜೆಟ್​ ಮೀರಿಸೋಕೆ ಸಾಧ್ಯವಾಗಿಲ್ಲ. ಆದರೆ, ಈ ದಾಖಲೆ ಮುರಿಯೋಕೆ ಎಲ್ಲಾ ಸಿದ್ಧತೆ ನಡೆದಿದೆ. 400-500 ಕೋಟಿ ರೂಪಾಯಿಯ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣಕ್ಕೆ ಗಾನ ಶ್ರವಣ್ ಸ್ವಾಮೀಜಿ  ರೆಡಿ ಆಗಿದ್ದಾರೆ. ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​​ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದ್ದು, ಅದಿತಿ ಅವರು ಸಹ ನಿರ್ಮಾಪಕಿ ಆಗಿದ್ದಾರೆ.

‘ಕೃಷ್ಣರಾಜ 4’ ಸಿನಿಮಾ ನಿರ್ಮಾಣಕ್ಕೆ ಗಾನ ಶ್ರವಣ್ ಸ್ವಾಮೀಜಿ ಮುಂದಾಗಿದ್ದಾರೆ. ರಾಜಮೌಳಿ ಮೀರಿಸೋ ನಿರ್ದೇಶಕನಿಗಾಗಿ ಅವರು ಹುಡುಕಾಟ ಆರಂಭಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅಚ್ಚರಿ ಎಂದರೆ, ಮೈಸೂರಿನಲ್ಲಿ 640 ಎಕರೆ ಜಮೀನು ಖರೀದಿಸಿ, ಅದರಲ್ಲಿ ಸೆಟ್​ ಹಾಕಿ ಸಿನಿಮಾ ಶೂಟ್ ಮಾಡೋ ಆಲೋಚನೆ ಅವರದ್ದು.

ಶ್ರವಣ್ ಸ್ವಾಮೀಜಿ ಅವರು ಸುದ್ದಿ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕೇರಳದ ಭಗವತಿ ಅಮ್ಮ ದೇವಸ್ಥಾನಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ದೇಣಿಗೆ ನೀಡಿ ಗಾನ ಶ್ರವಣ್ ಸ್ವಾಮೀಜಿ ಎಲ್ಲರ ಗಮನ ಸೆಳೆದಿದ್ದರು. ಈಗ ಅವರು ಹೈ ಬಜೆಟ್​ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರೋದು ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ, ಕಲಾ ಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಇದನ್ನೂ ಓದಿ: Jaggesh: ಶೂಟಿಂಗ್​ ವೇಳೆ ಜಗ್ಗೇಶ್​ ಮೈಮೇಲಿತ್ತು ನಿಜವಾದ ಹಾವು; ಭಯದಲ್ಲಿ ಬಾಯಿಗೆ ಬಂದಂತೆ ಡೈಲಾಗ್​ ಹೇಳಿದ್ದ ನವರಸ ನಾಯಕ

ಅಭಿಷೇಕ್​ ಬಚ್ಚನ್​ ಖಾತೆಗೆ ಬಿತ್ತು 45.75 ಕೋಟಿ ರೂಪಾಯಿ; ಆದರೆ ಸಿನಿಮಾದಿಂದಲ್ಲ, ಅಚ್ಚರಿಗೊಂಡ ಫ್ಯಾನ್ಸ್​

Published On - 4:14 pm, Fri, 13 August 21

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ