ರಿಷಬ್ ನಟನೆಯ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅವರಿಗೆ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ಅದೇ ರೀತಿ ರಿಷಬ್ ಶೆಟ್ಟಿ ಕೂಡ ವಿಶ್ ಮಾಡಿದರು. ‘ಅತ್ಯುತ್ತಮ ನಟನಿಗೆ ರಾಜ್ಯ ಸರ್ಕಾರದಿಂದ ಗೌರವ. ರಕ್ಷಿತ್​ ಶೆಟ್ಟಿ, ಕಂಗ್ರಾಜ್ಯುಲೇಶನ್ ಮಗ. ರಾಜ್ಯ ಪ್ರಶಸ್ತಿ ಪಡೆದ ಎಲ್ಲಾ ವಿಜೇತರಿಗೂ ನನ್ನ ಶುಭಾಶಯಗಳು’ ಎಂದು ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡಿದ್ದರು. ಇದಕ್ಕೆ ರಕ್ಷಿತ್ ಉತ್ತರಿಸಿದ್ದಾರೆ.

ರಿಷಬ್ ನಟನೆಯ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ
ರಕ್ಷಿತ್-ರಿಷಬ್
Updated By: ರಾಜೇಶ್ ದುಗ್ಗುಮನೆ

Updated on: Oct 05, 2025 | 6:00 AM

ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿಶ್ವ ಮಟ್ಟದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಈ ಸಿನಿಮಾವು ಬಹಳ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರ ಎರಡು ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋದು ಈ ಚಿತ್ರದ ಹೆಚ್ಚುಗಾರಿಕೆ ಎನ್ನಬಹುದು. ರಿಷಬ್ ಶೆಟ್ಟಿ ಅವರ ಸಿನಿಮಾದ ಬಗ್ಗೆ ರಕ್ಷಿತ್ ಶೆಟ್ಟಿ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ರಕ್ಷಿತ್ ಅವರು ಈ ಬಗ್ಗೆ ಕೊನೆಗೂ ಮಾತನಾಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರು ‘ಸಪ್ತ ಸಾಗರಾದಚೆ ಎಲ್ಲೋ ಪಾರ್ಟ್ ಬಿ’ ಬಳಿಕ ಹೆಚ್ಚು ಕಾಣಿಸಿಕೊಳ್ಳಲೇ ಇಲ್ಲ. ಅವರು ‘ರಿಚರ್ಡ್ ಆ್ಯಂಟನಿ’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಅವರು ಸದ್ಯ ಉಡುಪಿಯಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಈಗ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ‘ಚಾರ್ಲಿ 777’ ಸಿನಿಮಾದಲ್ಲಿನ ನಟನೆಗೆ ಅವರಿಗೆ ಈ ಅವಾರ್ಡ್ ಸಿಕ್ಕಿದೆ.

ಇದನ್ನೂ ಓದಿ
‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ
‘ನೀವು ಆಂಟಿ ಲವರ್ ಅನಿಸುತ್ತೆ’; ಅಭಿಷೇಕ್​ಗೆ ನೇರವಾಗಿ ಹೇಳಿದ ಜಾನ್ವಿ
ಬಾಕ್ಸ್ ಆಫೀಸ್​ನಲ್ಲಿ ‘ಕಾಂತಾರ: ಚಾಪ್ಟರ್ 1’ ಅಬ್ಬರ; 100 ಕೋಟಿ ಕಲೆಕ್ಷನ್
ಗುಟ್ಟಾಗಿ ನಡೆಯಿತು ರಶ್ಮಿಕಾ-ವಿಜಯ್ ನಿಶ್ಚಿತಾರ್ಥ? ಫೆಬ್ರವರಿಯಲ್ಲಿ ಮದುವೆ

ರಕ್ಷಿತ್ ಶೆಟ್ಟಿ ಅವರಿಗೆ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ಅದೇ ರೀತಿ ರಿಷಬ್ ಶೆಟ್ಟಿ ಕೂಡ ವಿಶ್ ಮಾಡಿದರು. ‘ಅತ್ಯುತ್ತಮ ನಟನಿಗೆ ರಾಜ್ಯ ಸರ್ಕಾರದಿಂದ ಗೌರವ. ರಕ್ಷಿತ್​ ಶೆಟ್ಟಿ, ಕಂಗ್ರಾಜ್ಯುಲೇಶನ್ ಮಗ. ರಾಜ್ಯ ಪ್ರಶಸ್ತಿ ಪಡೆದ ಎಲ್ಲಾ ವಿಜೇತರಿಗೂ ನನ್ನ ಶುಭಾಶಯಗಳು’ ಎಂದು ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡಿದ್ದರು.

‘ಧನ್ಯವಾದಗಳು ಮಗ. ಕಾಂತಾರ ಅಧ್ಯಾಯ 1ರ ಅದ್ಭುತ ಯಶಸ್ಸಿಗೆ ಹೃತ್ಪೂರ್ವಕ ಅಭಿನಂದನೆಗಳು’ ಎಂದು ರಕ್ಷಿತ್ ಶೆಟ್ಟಿ ಉತ್ತರಿಸಿದ್ದಾರೆ. ಅಂದಹಾಗೆ ರಕ್ಷಿತ್ ಶೆಟ್ಟಿ ಅವರು ಈ ಚಿತ್ರವನ್ನು ವೀಕ್ಷಿಸಿದ್ದಾರೋ ಅಥವಾ ಇಲ್ಲವೋ ಎಂಬ ವಿಚಾರ ಗೊತ್ತಾಗಿಲ್ಲ. ಈ ಮೊದಲು ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ನೋಡಿ ಅವರು ವಿಶೇಷ ಅಭಿನಂದನೆ ತಿಳಿಸಿದ್ದರು.

ಇದನ್ನೂ ಓದಿ: ಬಾಕ್ಸ್ ಆಫೀಸ್​ನಲ್ಲಿ ‘ಕಾಂತಾರ: ಚಾಪ್ಟರ್ 1’ ಅಬ್ಬರ; ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್

ಈ ಮೊದಲು ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಪ್ರೀಮಿಯರ್ ಶೋಗೆ ರಕ್ಷಿತ್ ಶೆಟ್ಟಿ ಅವರು ಬಂದಿದ್ದರು. ಅವರು ಬಂದಿದ್ದೂ ಅಲ್ಲದೆ, ಸಿನಿಮ ನೋಡಿ ರಿಷಬ್ ಶೆಟ್ಟಿ ಅವರನ್ನು ಹೊಗಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.