ರೀಲ್ಸ್ ವಿವಾದ, ರಜತ್-ವಿನಯ್ ನಡುವೆ ಭಿನ್ನಾಭಿಪ್ರಾಯ, ಮುರಿಯಿತೇ ಗೆಳೆತನ?
Vinay and Rajath: ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕಾಗಿ ವಿನಯ್ ಹಾಗೂ ರಜತ್ ಅವರುಗಳು ಈಗಾಗಲೇ ಜೈಲು ವಾಸದ ರುಚಿ ಅನುಭವಿಸಿದ್ದಾರೆ. ಆದರೆ ಈ ವಿವಾದ ಈ ಇಬ್ಬರ 10 ವರ್ಷದ ಗೆಳೆತನಕ್ಕೆ ಕೊಳ್ಳಿ ಇಟ್ಟಂತಿದೆ. ರೀಲ್ಸ್ ವಿವಾದದ ಬಳಿಕ ರಜತ್ ಹಾಗೂ ವಿನಯ್ ನಡುವೆ ಎಲ್ಲವೂ ಸರಿಯಿದ್ದಂತಿಲ್ಲ. ಈ ಬಗ್ಗೆ ಸ್ವತಃ ರಜತ್ ಮಾತನಾಡಿದ್ದಾರೆ.

ಮಾಜಿ ಬಿಗ್ಬಾಸ್ (Bigg Boss) ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ (Vinay and Rajath) ಅವರುಗಳು ರೀಲ್ಸ್ ಮಾಡುವ ವೇಳೆ ಮಚ್ಚು ಬಳಕೆ ಮಾಡಿದ್ದು ವಿವಾದವಾಗಿ ಪರಿಣಮಿಸಿತ್ತು. ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿನಯ್ ಹಾಗೂ ರಜತ್ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿದ್ದರು. ಕೆಲ ದಿನ ಜೈಲಿನಲ್ಲಿದ್ದ ವಿನಯ್ ಹಾಗೂ ರಜತ್ ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು. ಬಳಿಕ ಇಬ್ಬರೂ ಸಹ ತಮ್ಮ ರಿಯಾಲಿಟಿ ಶೋ, ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿ ಆದರು. ಜನರೂ ವಿವಾದ ಮರೆತರು, ಆದರೆ ಆ ವಿವಾದದಿಂದಾಗಿ ರಜತ್ ಹಾಗೂ ವಿನಯ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇಬ್ಬರ ಗೆಳೆತನದಲ್ಲಿ ಬಿರುಕು ಮೂಡಿದೆ. ರಜತ್ ನೀಡಿರುವ ಹೇಳಿಕೆ ಇದನ್ನು ಖಾತ್ರಿಪಡಿಸುತ್ತಿದೆ.
ರೀಲ್ಸ್ ವಿವಾದದ ಬಗ್ಗೆ ಇದೇ ಮೊದಲಿಗೆ ಮಾತನಾಡಿರುವ ರಜತ್, ‘ನಮಗೆ ಅವತ್ತು ಅಕ್ಷಯ್ ಸ್ಟೋಡಿಯೋ ಲ್ಲಿ ಕಾರ್ಯಕ್ರಮ ಇತ್ತು,ಕಾರ್ಯಕ್ರಮ ಮುಗಿದ ಮೇಲೆ ನಾನೇ ಮೊದಲಿಗೆ ರೀಲ್ಸ್ ಮಾಡೋಣ ಅಂದೆ,ವಿನಯ್ ಮತ್ತು ನಾನು ಒಟ್ಟಿಗೆ ರಿಲ್ಸ್ ಮಾಡಿದ್ವಿ,ಅದು ಇಷ್ಟು ದೊಡ್ಡ ವಿಚಾರ ಆಗುತ್ತೆ ಅಂತಾ ಗೊತ್ತಿರಲಿಲ್ಲ,ಅದು ಫೈಬರ್ ಮಚ್ಚು, ನಾವು ಆಸಲಿ ಮಚ್ಚು ಬಳಸಿ ರೀಲ್ಸ್ ಮಾಡಿಲ್ಲ,ಅವತ್ತು ನಾವು ಜನರಲ್ ಆಗಿ ರೀಲ್ಸ್ ಮಾಡಿದ್ದು ಅಷ್ಟೇ ಎಂದಿದ್ದಾರೆ ರಜತ್.
ಮಾತು ಮುಂದುವರೆಸಿ, ‘ನಂದು ವಿನಯ್ ದು ಹನ್ನೊಂದು ವರ್ಷದ ಫ್ರೆಂಡ್ಶಿಪ್,ರೀಲ್ಸ್ ಮಾಡಿ ವಿನಯ್ ಗೆ ತೊಂದರೆ ಮಾಡಬೇಕು ಅನ್ನೊದು ನಂಗೆ ಇರಲಿಲ್ಲ,ಮತ್ತೆ ಅವನು ಏನು ಚಿಕ್ಕ ಹುಡುಗ ಕೂಡ ಅಲ್ಲ,ಈಗ ನಾನೇ ಮಾಡಿಸಿದ್ದು, ರೀತಿಯಲ್ಲಿ ಮಾತಾಡ್ತಿದ್ದಾನೆ. ನಾನು ಯಾರಿಗೂ ನನ್ನ ಜೊತೆಗೆ ರೀಲ್ಸ್ ಮಾಡಿ ಅಂತಾ ಒತ್ತಾಯ ಕೂಡ ಮಾಡಲ್ಲ,ಕಳೆದ ಒಂದು ವಾರದಿಂದ ನಾನು ನೋಡ್ತಾ ಇದೀನಿ, ಸೋಷಿಯಲ್ ಮೀಡಿಯಾದಲ್ಲಿ ರಜತ್ ಜೊತೆಗೆ ಫ್ರೆಡ್ಶಿಪ್ ಕಟ್ ಮಾಡು ಅಂತಾ ಕೆಲವರು ಮಸೇಜ್ ಮಾಡ್ತಾ ಇದಾರೆ ಅದಕೆ ವಿನಯ್ ಲೈಕ್ ಮಾಡ್ತ ಇದಾನೆ,ಅವನಿಗೆ ನನ್ನ ಫ್ರೆಂಡ್ ಶೀಪ್ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ’ ಎಂದಿದ್ದಾರೆ.
ಇದನ್ನೂ ಓದಿ:ಮಚ್ಚಿನ ಕೇಸ್ ಬಳಿಕ ‘ಬಾಯ್ಸ್ vs ಗರ್ಲ್ಸ್’ ಶೋಗೆ ರಜತ್ ಹಾಜರ್; ವಿನಯ್ ಗೌಡ ಅಬ್ಸೆಂಟ್
‘ಮಚ್ಚು ಹಿಡಿದು ರೀಲ್ಸ್ ಮಾಡೋದು ತಪ್ಪು ಎಂಬುದು ನಮಗೆ ಗೊತ್ತಿರಲಿಲ್ಲ, ಮಾಡಿದೆವು, ಆದರೆ ಈಗ ಗೊತ್ತಾಗಿದೆ. ಯಾರೂ ಸಹ ಇನ್ನು ಮುಂದೆ ಇಂಥಹಾ ತಪ್ಪು ಮಾಡಬೇಡಿ’ ಎಂದಿದ್ದಾರೆ ರಜತ್. ಅಂದಹಾಗೆ ವಿನಯ್ ಹಾಗೂ ರಜತ್ ಬಹಳ ಹಳೆಯ ಗೆಳೆಯರು. ರಜತ್, ಬಿಗ್ಬಾಸ್ ಮನೆಯಲ್ಲಿದ್ದಾಗ ಅವರನ್ನು ಕಾಣಲು ವಿನಯ್ ಸಹ ಬಿಗ್ಬಾಸ್ ಗೆ ಬಂದಿದ್ದರು. ವಿನಯ್, ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ, ರಜತ್, ಬಿಗ್ಬಾಸ್ 11ರ ಸ್ಪರ್ಧಿಯಾಗಿದ್ದರು. ಇಬ್ಬರೂ ಸಹ ಫಿನಾಲೆ ವರೆಗೆ ಬಂದಿದ್ದರು ಆದರೆ ವಿಜೇತರಾಗಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ