ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನವು ಸಮೀಪಿಸಿದೆ. ಜನವರಿ 8 ಅವರ ಬರ್ತ್ಡೇ. ಈಗಾಗಲೇ ಯಶ್ ಅವರು ಜನ್ಮದಿನದ ಆಚರಣೆ ಬೇಡ ಎಂಬ ಮಾತನ್ನು ನೇರವಾಗಿ ಹೇಳಿದ್ದಾರೆ. ಈ ಬಗ್ಗೆ ಅಭಿಮಾನಿಗಳ ಬಳಿ ಕೋರಿಕೆಯನ್ನೂ ಇಟ್ಟಿದ್ದಾರೆ. ಅವರ ಜನ್ಮದಿನಗಳ ಸಂದರ್ಭದಲ್ಲಿ ಯಶ್ ಅವರ ಹಳೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.
ಯಶ್ ಅವರು ಕಷ್ಟದಿಂದ ಮೇಲೆ ಬಂದವರು. ಅವರು ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಅದರ ಹಿಂದೆ ಸಾಕಷ್ಟು ಶ್ರಮ ಇದೆ. ಯಶ್ ಅವರು ಪಟ್ಟ ಕಷ್ಟಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಯಶ್ ಸ್ಟಾರ್ಗಿರಿಯನ್ನು ಎಲ್ಲರೂ ಕೊಂಡಾಡುತ್ತಾ ಇದ್ದಾರೆ. ಅವರು ನುಗ್ಗಿ ಹೊಡೆಯುವ ಗುಣ ಹೊಂದಿದ್ದಾರೆ. ಇದರಿಂದ ಸಾಕಷ್ಟು ಗಳಿಸಿದ್ದಾರೆ. ಈ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡಿದ್ದರು.
‘ಧೈರ್ಯವಾಗಿ ನುಗ್ಗಬೇಕು, ಡಿಫೆನ್ಸ್ ಎಷ್ಟು ವರ್ಷ ಆಡ್ತೀರಾ? ನುಗ್ಗಿ ಹೊಡೆಯಬೇಕು ಎಂಬ ಅಭ್ಯಾಸ. ಇದರಲ್ಲಿ ನಂಬಿಕೆ ಹೆಚ್ಚು. ಅದಕ್ಕೆ ತಕ್ಕಂತೆ ಗೌರವ ಕೊಟ್ಟಿದ್ದಾರೆ’ ಎಂದಿದ್ದರು ಯಶ್. ಪ್ರಶಾಂತ್ ನೀಲ್ ಕೂಡ ಯಶ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ‘ಪ್ಯಾನ್ ಇಂಡಿಯಾ ವೇವ್ ಇದೆ. ನುಗ್ಗಿ ಬಿಡೋಣ ಎಂಬುದು ಯಾವಾಗಲೂ ಇರಲಿಲ್ಲ. ಆದರೆ, ಯಶ್ಗೆ ಅದೇನು ಸ್ಪಾರ್ಕ್ ಹೊಡೆಯಿತೋ ಏನೋ ಗೊತ್ತಿಲ್ಲ, ಇದನ್ನು (ಕೆಜಿಎಫ್) ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂದರು. ಅದಕ್ಕೆ ಸಾಕಷ್ಟು ಓಡಾಟ ಮಾಡಿದರು. ಬಿಡಲೇ ಇಲ್ಲ. ಅವನಿಗೆ ಇರೋವಷ್ಟು ಹಠವನ್ನು ಯಾರಲ್ಲೂ ನೋಡಿಲ್ಲ’ ಎಂದಿದ್ದರು ಪ್ರಶಾಂತ್ ನೀಲ್.
ಈಗ ಯಶ್ ಅವರು ‘ಟಾಕ್ಸಿಕ್’ ಚಿತ್ರವನ್ನು ಪ್ಯಾನ್ ವರ್ಲ್ಡ್ನಲ್ಲಿ ರಿಲೀಸ್ ಮಾಡಲು ಆಲೋಚನೆ ಮಾಡಿದ್ದೀರಾ ಎಂಬ ಪ್ರಶ್ನೆ ಮೂಡಿದೆ. ಅವರ 21st ಸೆಂಚುರಿ ಸ್ಟುಡಿಯೋ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಎಲ್ಲರೂ ಪ್ಯಾನ್ ಇಂಡಿಯಾ ಎಂದು ನುಗ್ಗುತ್ತಿದ್ದಾರೆ. ಆದರೆ, ಯಶ್ ಅವರು ಈ ವಿಚಾರದಲ್ಲಿ ಒಂದು ಹಂತ ಮುಂದೆ ಹೋದರೇ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: Yash: ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಸಿಂಪಲ್ ಆಗಿ ಹೊಸ ವರ್ಷ ಆಚರಿಸಿದ ಯಶ್
ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಿದ್ದು, ಇದಕ್ಕಾಗಿ 200 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Fri, 3 January 25