‘ಕನ್ನಡ ಬಿಗ್ ಬಾಸ್ ಸೀಸನ್ 9’ರ (BBK 9) ಜರ್ನಿ ಪೂರ್ಣಗೊಳ್ಳುತ್ತಿದೆ. ಯಾರು ಕಪ್ ಎತ್ತಲಿದ್ದಾರೆ ಎಂಬ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಶನಿವಾರದ (ಡಿಸೆಂಬರ್ 30) ಎಪಿಸೋಡ್ನಲ್ಲಿ ಒಂದು ಎಲಿಮಿನೇಷನ್ ನಡೆದಿತ್ತು. ದಿವ್ಯಾ ಉರುಡುಗ (Divya Uruduga) ಔಟ್ ಆದರು. ಈ ಮೂಲಕ ದೊಡ್ಮನೆಯ ಸ್ಪರ್ಧಿಗಳ ಸಂಖ್ಯೆ 4ಕ್ಕೆ ಇಳಿಕೆ ಆಯಿತು. ಇಂದಿನ (ಡಿಸೆಂಬರ್ 31) ಎಪಿಸೋಡ್ನ ಮೊದಲ ಎಲಿಮಿನೇಷನ್ ನಡೆದಿದೆ. ರೂಪೇಶ್ ರಾಜಣ್ಣ ಅವರು ಮೊದಲು ಔಟ್ ಆಗಿದ್ದಾರೆ. ಈ ಮೂಲಕ ಮೂರನೇ ರನ್ನರ್ ಅಪ್ ಆಗಿದ್ದಾರೆ.
ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು ಈ ಮೊದಲು ಬಿಗ್ ಬಾಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ಆದರೂ ಬಿಗ್ ಬಾಸ್ಗೆ ಬಂದರು. ಬಂದ ನಂತರ ದೊಡ್ಮನೆ ಬಗೆಗಿನ ಅವರ ಅಭಿಪ್ರಾಯ ಬದಲಾಯಿತು. ಆರಂಭದಲ್ಲಿ ಡಲ್ ಆಗಿದ್ದ ಅವರು ನಂತರ ಹೈಪರ್ ಆ್ಯಕ್ಟೀವ್ ಆದರು. ಪ್ರಶಾಂತ್ ಸಂಬರ್ಗಿ ಜತೆಗೆ ಅನೇಕ ಬಾರಿ ಅವರು ಜಗಳಕ್ಕೆ ಇಳಿದಿದ್ದೂ ಇದೆ.
ಟಾಪ್ ಐದರಲ್ಲಿ ಇದ್ದ ಸ್ಪರ್ಧಿಗಳ ಪೈಕಿ ಎರಡನೇ ವ್ಯಕ್ತಿಯಾಗಿ ರೂಪೇಶ್ ರಾಜಣ್ಣ ಔಟ್ ಆಗಿದ್ದಾರೆ. ಕಿಚ್ಚ ಸುದೀಪ್ ಅವರ ಹೆಸರನ್ನು ಘೋಷಣೆ ಮಾಡಿದಾಗ ತುಂಬಾನೇ ಬೇಸರ ಮಾಡಿಕೊಂಡಿದ್ದರು. ‘ನಾನು ಎರಡು ವಾರ ಇದ್ದು ಔಟ್ ಆಗುತ್ತೇನೆ ಎಂದುಕೊಂಡಿದ್ದೆ. ಆದರೆ, ಒಳ್ಳೆಯ ಪರ್ಫಾರ್ಮೆನ್ಸ್ ನೀಡಿ ಇಲ್ಲಿವರೆಗೆ ಬಂದಿದ್ದೇನೆ. ಈಗ ಟಾಪ್ ಎರಡರಲ್ಲಿ ಬರಲೇಬೇಕು ಎಂದು ನನಗೆ ಅನಿಸುತ್ತಿದೆ’ ಎಂದು ರೂಪೇಶ್ ರಾಜಣ್ಣ ಈ ಮೊದಲು ಹೇಳಿದ್ದರು. ಈಗ ಅದು ಕನಸಾಗಿಯೇ ಉಳಿದಿದೆ.
ಇದನ್ನೂ ಓದಿ: ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ
ರೂಪೇಶ್ ರಾಜಣ್ಣ ಅವರು ಆರಂಭದಲ್ಲಿ ಏರು ಧ್ವನಿಯಲ್ಲಿ ಮಾತನಾಡಿ, ಹೋರಾಟದ ಮೂಲಕ ಬಿಗ್ ಬಾಸ್ನಲ್ಲಿ ಗುರುತಿಸಿಕೊಂಡರು. ಆ ಬಳಿಕ ಅವರು ಮುಗ್ಧತನದ ಮೂಲಕ ಗಮನ ಸೆಳೆದರು. ಈಗ ಅವರು ಔಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ ‘ಬಿಗ್ ಬಾಸ್ 9’ರ ಜರ್ನಿ ಪೂರ್ಣಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ