ಬಿಗ್ ಬಾಸ್ ಫಿನಾಲೆಗೆ (Bigg Boss Finale) ಕ್ಷಣಗಣನೆ ಆರಂಭ ಆಗಿದೆ. 18 ಸ್ಪರ್ಧಿಗಳ ಪೈಕಿ ಐವರು ಮಾತ್ರ ಫಿನಾಲೆಯಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಗೆಲ್ಲೋದು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ನವೀನರು ಹಾಗೂ ಪ್ರವೀಣರು ಎನ್ನುವ ಕಾನ್ಸೆಪ್ಟ್ ಮೇಲೆ ಈ ಸೀಸನ್ ಆರಂಭಿಸಲಾಯಿತು. ನವೀನರ ಪೈಕಿ ಈಗ ಉಳಿದುಕೊಂಡಿದ್ದು ರೂಪೇಶ್ ರಾಜಣ್ಣ (Roopesh Rajanna) ಮಾತ್ರ. ಅವರು ತಮ್ಮದೇ ಸ್ಟೈಲ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಎಲ್ಲರ ಎದುರು ಅವರ ಪತ್ನಿ ಶೇಪ್ಔಟ್ ಮಾಡಿದ್ದಾರೆ.
ರೂಪೇಶ್ ರಾಜಣ್ಣ ಬಿಗ್ ಬಾಸ್ನಿಂದ ಹೊರಗೆ ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ನಲ್ಲೂ ಕನ್ನಡದ ಪರ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಇದರ ಜತೆಗೆ ಅವರ ಮುಗ್ಧತನ ಎಲ್ಲರಿಗೂ ಇಷ್ಟವಾಗುತ್ತಿದೆ. ಅವರು ಹೆಚ್ಚು ವೋಟ್ ಪಡೆದು ಬಿಗ್ ಬಾಸ್ ಫಿನಾಲೆ ತಲುಪಿದ್ದಾರೆ. ಅವರು ಕಪ್ ಗೆಲ್ಲಬೇಕು ಎಂಬುದು ಅನೇಕರ ಕೋರಿಕೆ. ಬಿಗ್ ಬಾಸ್ನಲ್ಲಿ ರೂಪೇಶ್ ರಾಜಣ್ಣ ಹಾಗೂ ಅವರ ಪತ್ನಿ ನಡುವೆ ನಡೆದ ಮಾತುಕತೆ ಸಖತ್ ಫನ್ನಿ ಆಗಿತ್ತು.
ಡಿಸೆಂಬರ್ 29ರ ಎಪಿಸೋಡ್ನಲ್ಲಿ ರೂಪೇಶ್ ರಾಜಣ್ಣಗೆ ದೂರವಾಣಿ ಕರೆ ಬಂದಿತ್ತು. ಅದು ಅವರ ಪತ್ನಿಯಿಂದ. ಮಾತನಾಡುತ್ತಾ ಇರುವಾಗ ದಿವ್ಯಾ ಅವರ ಕಾಳೆಯಲು ಪ್ರಯತ್ನಿಸಿದರು ರೂಪೇಶ್ ರಾಜಣ್ಣ. ನಗು ಬರದೇ ಇರುವ ರೀತಿಯಲ್ಲಿ ಜೋಕ್ ಹೇಳೋಕೆ ದಿವ್ಯಾ ಉರುಡುಗ ಫೇಮಸ್. ಇದನ್ನೇ ಇಟ್ಟುಕೊಂಡು ರೂಪೇಶ್ ರಾಜಣ್ಣ ಮಾತನಾಡಿದರು. ‘ದಿವ್ಯಾ ಉರುಡುಗ ಜೋಕ್ ಹೇಳಿ ಹೇಳಿ ಕಷ್ಟ ಕೊಡ್ತಾ ಇದಾರೆ’ ಎಂದು ಪತ್ನಿ ಬಳಿ ಹೇಳಿಕೊಂಡರು ರೂಪೇಶ್ ರಾಜಣ್ಣ.
ಇದನ್ನೂ ಓದಿ: ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ
ಇದಕ್ಕೆ ಉತ್ತರಿಸಿದ ರೂಪೇಶ್ ರಾಜಣ್ಣ ಪತ್ನಿ, ‘ಅವರ ಜೋಕ್ ಆದರೂ ಕೇಳಬಹುದು ಆದರೆ, ನಿಮ್ಮ ಜೋಕ್ ಕೇಳಲು ಕಷ್ಟ ಆಗ್ತಿದೆ. ದಿವ್ಯಾ ಜೋಕ್ ಚುಟುಕಾಗಿರುತ್ತದೆ. ಆದರೆ, ನಿಮ್ಮ ಜೋಕ್ ತುಂಬಾನೇ ಉದ್ದವಾಗಿರುತ್ತದೆ. ಒಳ್ಳೆಯ ಜೋಕ್ ಹೇಳಿ’ ಎಂದರು. ಎಲ್ಲರ ಎದುರು ಶೇಪ್ಔಟ್ ಮಾಡಿಸಿಕೊಂಡ ರೂಪೇಶ್ ರಾಜಣ್ಣ ‘ಇದೇನು ಈ ರೀತಿ ಹೇಳಿಬಿಟ್ಯಲ್ಲ’ ಎಂದು ನಕ್ಕರು. ಈ ಎಪಿಸೋಡ್ ಸಖತ್ ಫನ್ನಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ