Seetha Raama Serial: ರಾಮನೇ ದೇಸಾಯಿ ಮನೆಯ ಮೊಮ್ಮಗ ಅನ್ನೋ ಸತ್ಯ ಸೀತಾಳಿಗೆ ತಿಳಿಯುತ್ತಾ? ಸೀತಾ ಲಾಯರ್ ಬಳಿಗೆ ಬಂದ ವಿಷಯ ರಾಮನಿಗೆ ತಿಳಿಯುತ್ತಾ?

ಗೊತ್ತೋ ಗೊತ್ತಿಲ್ಲದೆಯೋ ಸೀತಾ ಮತ್ತು ರಾಮ್ ಒಂದೇ ಹೋಟೆಲ್ ಗೆ ಬರುತ್ತಾರೆ. ಸೀತಾ ಬಂದಿರುವ ವಿಚಾರ ರಾಮನಿಗೆ ತಿಳಿಯುತ್ತಾ? ರಾಮನೇ ದೇಸಾಯಿ ಮನೆಯ ಮೊಮ್ಮಗ ಎಂಬುದು ಸೀತಾಳಿಗೆ ತಿಳಿಯುತ್ತಾ ಕಾದು ನೋಡಬೇಕಾಗಿದೆ.

Seetha Raama Serial: ರಾಮನೇ ದೇಸಾಯಿ ಮನೆಯ ಮೊಮ್ಮಗ ಅನ್ನೋ ಸತ್ಯ ಸೀತಾಳಿಗೆ  ತಿಳಿಯುತ್ತಾ? ಸೀತಾ ಲಾಯರ್ ಬಳಿಗೆ ಬಂದ ವಿಷಯ ರಾಮನಿಗೆ ತಿಳಿಯುತ್ತಾ?
ಸೀತಾ ರಾಮ
Edited By:

Updated on: Aug 11, 2023 | 11:11 PM

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 20: ಫೈಲ್ ಹುಡುಕಿಕೊಂಡು ಬಂದ ರಾಮ್ ಮತ್ತು ಅಶೋಕ್ ನಿಗೆ ಆಫೀಸ್ ಗೆ ಬೆಂಕಿ ಬಿದ್ದಿರುವುದು ಕಳ್ಳನ ಬಗ್ಗೆ ಇನ್ನಷ್ಟು ಅನುಮಾನ ತರಿಸುತ್ತದೆ. ಮ್ಯಾನೇಜರ್ ಚರಣ್ ಅವರಿಗೆ ಆಫೀಸ್ ಗೆ ಬೆಂಕಿ ಹಚ್ಚುವಷ್ಟು ಧೈರ್ಯ ಇಲ್ಲ ಎಂಬುದು ಗೆಳೆಯರಿಬ್ಬರ ನಂಬಿಕೆ. ಹಾಗಾದರೆ ಇದರ ಹಿಂದಿರುವವರನ್ನು ಹುಡುಕಲೇ ಬೇಕು ಎಂದು ಇಬ್ಬರೂ ನಿರ್ಧಾರ ಮಾಡುತ್ತಾರೆ. ಇನ್ನು ಭಾರ್ಗವಿಗೆ ಅಲ್ಲಿ ಏನು ಆಗಿರಬಹುದು ಎಂಬ ಚಿಂತೆಗೆ ಸಿಹಿಯಾದ ಉತ್ತರ ಸಿಗುತ್ತದೆ. ಎಲ್ಲಿ ತನ್ನ ಬಣ್ಣ ಬಯಲಾಗುತ್ತದೆಯೋ ಎಂಬ ಭಯ ದೂರವಾಗಿ ತಾನು ಗೆದ್ದೆ ಎಂಬ ಖುಷಿ ಅವಳನ್ನು ಹತ್ತು ಪಟ್ಟು ಏರಿಸಿಸುತ್ತದೆ. ಅದೇ ಸಂತೋಷದಲ್ಲಿ ರಾಮ್ ಮುಂದೆ ನಾಟಕವಾಡುವುದರಲ್ಲಿಯೂ ಆಕೆ ಯಶಸ್ಸಿಯಾಗುತ್ತಾಳೆ. ಆದರೆ ಅವಳು ಕೋರಮಂಗಲ ಬ್ರಾಂಚ್ ಗೆ ಹೋಗ ಬೇಡ ಎಂಬುದು ರಾಮ್ ನಿಗೆ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೂ ಚಿಕ್ಕಿ ಮಾತಿಗೆ ಕಟ್ಟು ಬಿದ್ದು ಅಲ್ಲಿಗೆ ಹೋಗುವುದಿಲ್ಲ ಬದಲಾಗಿ ಎಲ್ಲರೂ ಫ್ಯಾಮಿಲಿ ಲಂಚ್ ಗೆ ಹೋಗೋಣ ಎಂಬ ಮಾತನ್ನು ಕಷ್ಟವಾದರೂ ಒಪ್ಪಿಕೊಳ್ಳುತ್ತಾನೆ.

ರಾಜ್ಮಾ ಮಸಾಲಾಗೇ ಸಿಹಿ ಕಡೆಯಿಂದ ಫೈವ್ ಸ್ಟಾರ್ ರೇಟಿಂಗ್

ಇನ್ನು ಸೀತಾ ಮಾಡಿದ ರಾಜ್ಮಾ ಮಸಾಲಾಗೇ ಸಿಹಿ ಫೈವ್ ಸ್ಟಾರ್ ರೇಟಿಂಗ್ ಕೊಟ್ಟಿದ್ದಾಳೆ. ಇನ್ನು ಆಫೀಸ್ನಲ್ಲಿ ಸೀತಾ ಬರುವುದನ್ನೇ ಕಾದು ಕುಳಿತ ರಾಮ್ ನಿಗೆ ಸೀತಾ ಮನೆ ಮಾರುವ ವಿಚಾರ ಹೇಳುವಾಗ ಅಷ್ಟೇ ಬೇಸರವೂ ಆಗುತ್ತದೆ. “ಬೆಂಗಳೂರಿನಲ್ಲಿ ಬಾಡಿಗೆ ಮನೆ ಸಿಗಲ್ವಾ? ಇನ್ನುಮುಂದೆ ಅದೇ ನಮ್ಮ ಮನೆ” ಅನ್ನೋ ಸೀತಾ ಮಾತಿಗೆ ರಾಮನ ಬಳಿ ಉತ್ತರವಿಲ್ಲದಂತಾಗಿದೆ. ಆದರೆ ಸೀತಾಳಿಗೆ ಬೆನ್ನು ಬಿಡದ ಬೇತಾಳನಂತೆ ರುದ್ರ ಪ್ರತಾಪ ಫೋನ್ ಮಾಡಿ ಹೋಟೆಲ್ ಗೆ ಬರುವುದಕ್ಕೆ ಹೇಳುತ್ತಾನೆ. ಸೀತಾ ಆಗುವುದಿಲ್ಲವೆಂದರೂ ನೋಟಿಸ್ ವಿಚಾರವಾಗಿ ಅವಳನ್ನು ಹೆದರಿಸುತ್ತಾನೆ. ಏನು ಮಾಡಬೇಕೆಂದು ತಿಳಿಯದ ಸೀತಾ ಲಾಯರ್ ಮಾತಿಗೆ ಕಟ್ಟುಬಿಳುತ್ತಾಳೆ.

ಇದನ್ನೂ ಓದಿ:ಭರ್ಜರಿ ಟಿಆರ್​ಪಿ ಪಡೆದ ‘ಸೀತಾ ರಾಮ’ ಧಾರಾವಾಹಿ; ಯಾವ ಸೀರಿಯಲ್​ಗೆ ಯಾವ ಸ್ಥಾನ?

ಇಬ್ಬರೂ ಮುಚ್ಚಿಟ್ಟ ಸತ್ಯ ಬಯಲಾಗುತ್ತಾ?

ಎಲ್ಲರೂ ಫ್ಯಾಮಿಲಿ ಲಂಚ್ ಗೆ ಹೋಗೋಣ ಎಂದು ಭಾರ್ಗವಿ ಹೇಳಿದ್ದಕ್ಕೆ ಸತ್ಯನನ್ನು ಕರೆದುಕೊಂಡಳು ಹೋಗಲು ಅವನ ಹೆಂಡತಿ ಬರುತ್ತಾಳೆ. ಅವನಿಗಾಗಿ ಹೊಸ ಬಟ್ಟೆಯನ್ನೂ ತರುತ್ತಾಳೆ. ಎಲ್ಲರೂ ಹೊರಟು ರಾಮನನ್ನು ಅದೇ ಹೋಟೆಲ್ ಗೆ ಕರೆಸಿಕೊಳ್ಳುತ್ತಾರೆ. ಗೊತ್ತೋ ಗೊತ್ತಿಲ್ಲದೆಯೋ ಸೀತಾ ಮತ್ತು ರಾಮ್ ಒಂದೇ ಹೋಟೆಲ್ ಗೆ ಬರುತ್ತಾರೆ. ಸೀತಾ ಬಂದಿರುವ ವಿಚಾರ ರಾಮನಿಗೆ ತಿಳಿಯುತ್ತಾ? ರಾಮನೇ ದೇಸಾಯಿ ಮನೆಯ ಮೊಮ್ಮಗ ಎಂಬುದು ಸೀತಾಳಿಗೆ ತಿಳಿಯುತ್ತಾ ಕಾದು ನೋಡಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us