AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀತಾ-ರಾಮನ ಜೋಡಿ ನೋಡಿ ಉರಿದುಹೋದ ಲಾಯರ್; ಮನಸ್ಸಲ್ಲಿ ಮೂಡಿದೆ ಸಂಚು?

Seetha Raama Serial: ಆಫೀಸ್​ಗೆ ಹೋಗಲು ಸೀತಾ ಮತ್ತು ರಾಮ್ ಆಟೋ ಹಿಡಿಯುತ್ತಾರೆ. ದಾರಿಯಲ್ಲಿ ಮನೆಯ ವಿಚಾರ ಮಾತನಾಡುತ್ತಾರೆ. ಅದಕ್ಕೆ ಸೀತಾ ‘ಲೋನ್ ತುಂಬಾ ಜಾಸ್ತಿ ಇದೆ. ಹಾಗಾಗಿ ತೀರಿಸುವುದು ತುಂಬಾ ಕಷ್ಟ. ಆದರೆ ನಾನು ನಂಬಿರುವ ರಾಮ್ ಕೈ ಬಿಡುವುದಿಲ್ಲ’ ಎನ್ನುತ್ತಾಳೆ. ಇದನ್ನು ಕೇಳಿ ರಾಮ್ ಅಚ್ಚರಿಪಡುತ್ತಾನೆ.

ಸೀತಾ-ರಾಮನ ಜೋಡಿ ನೋಡಿ ಉರಿದುಹೋದ ಲಾಯರ್; ಮನಸ್ಸಲ್ಲಿ ಮೂಡಿದೆ ಸಂಚು?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 16, 2023 | 7:34 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 22: ಶಾಲೆಯಲ್ಲಿ ನಡೆದ ಸ್ಪೀಚ್ ಕಾಂಪಿಟೇಷನ್ ನಲ್ಲಿ ಸಿಹಿ ಸ್ಟಾರ್ ತೆಗೆದುಕೊಂಡು ಬರುತ್ತಾಳೆ. ಮಾತಾಡಿದ್ದು ಫೆವರೇಟ್ ಹೀರೋ ಬಗ್ಗೆ. ಕೆಟ್ಟವರು ಬಂದಾಗ ಕಾಪಾಡುವವರು ಸಿಹಿ ಪಾಲಿಗೆ ಹೀರೋ. ಅದು ಅವಳ ಅಮ್ಮ ಸೀತಮ್ಮ. ಇದನ್ನೆಲ್ಲಾ ಅಜ್ಜಿ- ತಾತನಿಗೆ ಬಂದು ವರದಿ ಒಪ್ಪಿಸುತ್ತಾಳೆ. ಅದನ್ನು ಕೇಳಿ ಅವರಿಬ್ಬರಿಗೂ ಸಂತೋಷಪಡುತ್ತಾರೆ.

ಸೀತಾ ರಾಮ್ ಮುಖಾಮುಖಿ

ಇನ್ನು ಹೋಟೆಲ್​ನಲ್ಲಿ ಸೀತಾಳನ್ನು ನೋಡಿದ ರಾಮ್, ಮೀಟಿಂಗ್ ನೆಪ ಹೇಳಿ ಅಲ್ಲಿಂದ ಹೊರಡುತ್ತಾನೆ. ಅದೇ ಹೋಟೆಲ್​ನಲ್ಲಿದ್ದ ಸೀತಾ ಬ್ಯಾಂಕ್​ನವರು ಬರುವುದಿಲ್ಲ ಎಂದು ತಿಳಿದು ಹೊರಡುತ್ತಾಳೆ. ಸೀತಾ-ರಾಮ್ ಇಬ್ಬರೂ ಮುಖಾಮುಖಿ ಆಗುತ್ತಾರೆ. ರಾಮ್ ನೋಡಿದ ತಕ್ಷಣ ಸೀತಾ, ‘ನೀವು ಇಲ್ಲಿ ಏನು ಮಾಡುತ್ತಾ ಇದೀರಾ’ ಎಂದು ಕೇಳುತ್ತಾಳೆ. ಅದಕ್ಕೆ ಉತ್ತರಿಸೋ ರಾಮ್, ಬಾಸ್​ಗೆ ಫೈಲ್ ಕೊಡುವುದಕ್ಕೆ ಬಂದಿದ್ದೆ ಎಂದು ಸುಳ್ಳು ಹೇಳುತ್ತಾನೆ. ಇಬ್ಬರೂ ಆಫೀಸ್​ಗೆ ಹೊರಡಬೇಕು ಎನ್ನುವಷ್ಟರಲ್ಲಿ ರುದ್ರ ಪ್ರತಾಪ ಬಂದು ಡ್ರಾಪ್ ಕೊಡಬೇಕಾ? ಎಂದು ಸೀತಾ ಬಳಿ ಕೇಳುತ್ತಾನೆ. ಆದರೆ ಅದಕ್ಕವಳು ‘ಬೇಡ, ನಾವಿಬ್ಬರೂ ಜೊತೆಗೆ ಹೋಗುತ್ತೇವೆ’ ಎನ್ನುತ್ತಾಳೆ. ರುದ್ರನಿಗೆ ಅದನ್ನು ನೋಡಿ ಸಿಟ್ಟು ಬಂದರೂ ತೋರಿಸಿಕೊಳ್ಳಲಾಗದ ಸಂದರ್ಭ. ಬಳಿಕ ರುದ್ರನ ಪರಿಚಯ ರಾಮನಿಗೂ ಆಗುತ್ತದೆ.

ಸಿಹಿಗೆ ಶ್ರೀರಾಮನ ಪ್ರಾಮಿಸ್

ಇನ್ನು ಆಫೀಸ್ ಗೆ ಹೊರಟ ಸೀತಾಳಿಗೆ ಸಿಹಿಯ ಫೋನ್ ಬಂದಿದೆ. ಅಮ್ಮ ಬೇರೆಲ್ಲೋ ಇದ್ದಾಳೆ ಎಂಬುದನ್ನು ತಿಳಿದು ಎಲ್ಲಿಗೆ ಹೋಗಿದ್ದು? ಎಂದು ಕೇಳುತ್ತಾಳೆ. ಜೊತೆಗೆ ರಾಮನನ್ನು ನೋಡಿ, ನನ್ನ ಬಿಟ್ಟು ಸುತ್ತಾಡಲು ಹೋಗಿದ್ದೀರಾ ಎಂದು ಕೋಪ ಮಾಡಿಕೊಳ್ಳುತ್ತಾಳೆ. ಅವಳನ್ನು ಸಮಾಧಾನ ಮಾಡಿ ನೀನು ಏನೇ ಕೇಳಿದರೂ ನಡಸಿಕೊಡುತ್ತೀನಿ ಅಂತ ಪ್ರಾಮಿಸ್ ಮಾಡುತ್ತಾನೆ.

ಆಫೀಸ್​ಗೆ ಹೋಗಲು ಸೀತಾ ಮತ್ತು ರಾಮ್ ಆಟೋ ಹಿಡಿಯುತ್ತಾರೆ. ದಾರಿಯಲ್ಲಿ ಮನೆಯ ವಿಚಾರ ಮಾತನಾಡುತ್ತಾರೆ. ಅದಕ್ಕೆ ಸೀತಾ ‘ಲೋನ್ ತುಂಬಾ ಜಾಸ್ತಿ ಇದೆ. ಹಾಗಾಗಿ ತೀರಿಸುವುದು ತುಂಬಾ ಕಷ್ಟ. ಆದರೆ ನಾನು ನಂಬಿರುವ ರಾಮ್ ಕೈ ಬಿಡುವುದಿಲ್ಲ’ ಎನ್ನುತ್ತಾಳೆ. ಇದನ್ನು ಕೇಳಿ ರಾಮ್ ಅಚ್ಚರಿಪಡುತ್ತಾನೆ.

ನಡೆಯಲಿಲ್ಲ ಭಾರ್ಗವಿ ಆಟ

ರಾಮ್​ಗೆ ಹುಡುಗಿ ನೋಡುವ ನೆಪ ಇಟ್ಟುಕೊಂಡು ಹೋಟೆಲ್​ಗೆ ಮನೆಯವರನ್ನೆಲ್ಲಾ ಊಟಕ್ಕೆ ಕರೆದುಕೊಂಡು ಬಂದಿದ್ದ ಭಾರ್ಗವಿಯ ಮಾಸ್ಟರ್ ಪ್ಲಾನ್ ಹಾಳಾಗಿದೆ. ಅದನ್ನು ನೋಡಿ ಅವಳ ಗಂಡ ವಿಶ್ವಜಿತ್, ಸಿಕ್ಕಿದ್ದೇ ಚಾನ್ಸ್ ಎಂಬಂತೆ ಅವಳನ್ನು ಆಡಿಕೊಳ್ಳುತ್ತಾನೆ. ಭಾರ್ಗವಿ ಸೋಲು ಕಂಡವಳೇ ಅಲ್ಲ. ಅದರಲ್ಲಿಯೂ ಅವಳು ಅಷ್ಟು ಬೇಗ ಕೈ ಚೆಲ್ಲಿದ್ದಾಳಾ ಎಂದು ಅವನಿಗೆ ಆಶ್ಚರ್ಯ ವಾಗುತ್ತದೆ. ಆಗ ಭಾರ್ಗವಿ ಮತ್ತೊಂದು ಸವಾಲು ಹಾಕಿ “ಅವನು ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡೇ ಮಾಡತ್ತೀನಿ” ಅನ್ನುತ್ತಾಳೆ. ಆಗ ಅವಳ ಗಂಡನಿಗೆ, ರಾಮ್ ಹಿಂದಿನ ಪ್ರೀತಿಯೂ ಇವಳದೇ ಆಟ ಎಂದು ತಿಳಿಯುತ್ತದೆ.

ಇದನ್ನೂ ಓದಿ: ಪೂಜಾ ಲೋಕೇಶ್ ಸಂದರ್ಶನ: ‘ಸೀತಾ ರಾಮ’ ಧಾರಾವಾಹಿಯ ವಿಲನ್ ಪಾತ್ರದ ಬಗ್ಗೆ ಮಾತನಾಡಿದ ನಟಿ

ವಠಾರದಲ್ಲಿ ರಾಮ್ ಬಂದು ಹೋಗುವುದು ಅಕ್ಕ ಪಕ್ಕದ ಮನೆಯವರ ಮಾತಿನ ವಿಷಯವಾಗಿದೆ. ಅದನ್ನು ತಿಳಿದುಕೊಳ್ಳಲು ಕೆಲವು ಹೆಂಗಸರು ಏನು, ಅರಿಯದ ಸಿಹಿಯ ಮುಂದೆ ಪ್ರಶ್ನೆಗಳನ್ನಿಡುತ್ತಾರೆ. ಅದನ್ನು ನೋಡಿದ ಅವಳ ಅಜ್ಜಿ ಎಲ್ಲರ ಮಾತಿಗೆ ಬೀಗ ಹಾಕಲು ಬಂದು ನಿಲ್ಲುತ್ತಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?