AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸಿಹಿಯ ಊರು ಸುತ್ತುವ ಕಾರ್ಯಕ್ರಮ ರಾಮ್ ಮತ್ತು ಸೀತಾ ಮಧ್ಯೆ ಪ್ರೀತಿ ಅಂಕುರವಾಗುವಂತೆ ಮಾಡುತ್ತಾ?

Seetha Raama Serial: ರಾಮ್ ಮತ್ತು ಅಶೋಕ್ ಮಾಡಿರುವ ಐಡಿಯಾ ಬಗ್ಗೆ ಗೊತ್ತಿಲ್ಲದ ರಾಮನ ಚಿಕ್ಕಿ ಅವನು ಆಫೀಸ್ನಲ್ಲಿಯೇ ಇದ್ದಾನೆ ಎಂದು ನಂಬಿಕೊಳ್ಳುತ್ತಾಳೆ. ಜೊತೆಗೆ ಬಾಸ್ ಹಿಂದೆ ಯಾರೋ ಬಿದ್ದಿದ್ದಾರೆ ಅದನ್ನು ಪತ್ತೆ ಹಚ್ಚಿ ಎಂದು ಚರಣ್ ಗೆ ವಿಷಯ ತಿಳಿಸುತ್ತಾಳೆ. ಹೇಳದೆ ಕೇಳದೆ ಆಫೀಸಿಗೆ ಬಂದಿರುವ ಮ್ಯಾನೇಜರ್ ನಡೆ ಅಶೋಕ್ ಗೆ ಅನುಮಾನ ತರಿಸುತ್ತದೆ. ಮುಂದೆ ಏನಾಗಬಹುದು? ಕಾದು ನೋಡೋಣ.

Seetha Raama Serial: ಸಿಹಿಯ ಊರು ಸುತ್ತುವ ಕಾರ್ಯಕ್ರಮ ರಾಮ್ ಮತ್ತು ಸೀತಾ ಮಧ್ಯೆ ಪ್ರೀತಿ ಅಂಕುರವಾಗುವಂತೆ ಮಾಡುತ್ತಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Aug 29, 2023 | 10:30 PM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 32: ರುದ್ರ ಪ್ರತಾಪನ ಮೋಸ ಅರಿಯದ ಸೀತಾ ಅವನ ಮಾತು ಕೇಳಿ ಆಫೀಸ್ ಗೆ ಹೋಗುತ್ತಾಳೆ. ಅವಳಿಗಾಗಿ ರಾಮ್ ಮತ್ತು ಸಿಹಿ ಹೊರಗಡೆಯೇ ಕಾದು ಕುಳಿತುಕೊಳ್ಳುತ್ತಾರೆ. ಒಳಗೆ ಹೋದ ಸೀತಾ ಆರ್ ಪಿಯ ಮೋಸದ ತೆಕ್ಕೆಗೆ ಬೀಳುವ ಮೊದಲು ಹೊರಗಡೆ ಕಾದು ಕುಳಿತ ಸಿಹಿ, ಅಮ್ಮ ಬರದಿರುವುದನ್ನು ನೋಡಿ ಒಳಗಡೆ ಬರುತ್ತಾಳೆ. ಆರ್ ಪಿ ಸೀತಾಳಿಗೆ ಕೊಡುವ ಜ್ಯೂಸ್ ನಲ್ಲಿ ಮದ್ದು ಬೆರೆಸಿರುತ್ತಾನೆ ಇನ್ನೇನು ಸೀತಾ ಕುಡಿಯಬೇಕು ಎನ್ನುವಷ್ಟರಲ್ಲಿ ಸಿಹಿ ಬಂದ ವೇಗಕ್ಕೆ ಅವಳ ಕೈ ಜಾರಿ ಆ ಗ್ಲಾಸ್ ಕೆಳಗೆ ಬೀಳುತ್ತದೆ. ಅವಳ ಹಿಂದೆ ರಾಮನು ಓಡಿ ಬರುತ್ತಾನೆ. ಅದನ್ನು ನೋಡಿದ ರುದ್ರ ಪ್ರತಾಪನಿಗೆ ಕೋಪ ಉಕ್ಕರಿಸಿ ಬರುತ್ತದೆ. ಆದರೆ ಏನು ಹೇಳಲಾಗದ ಅವನ ಪರಿಸ್ಥಿತಿ ಬಳಸಿಕೊಂಡ ಸೀತಾ ಅಲ್ಲಿಂದ ಹೊರಡುತ್ತಾಳೆ.

ಮಗಳನ್ನು ಹೊರಗಡೆ ಕರೆದುಕೊಂಡು ಹೋಗುತ್ತೀನಿ ಎಂದಿದ್ದ ಸೀತಮ್ಮ ಅವಳ ಮಾತನ್ನು ಉಳಿಸಿಕೊಂಡು, ಬಂದಿದ್ದರಿಂದ ರಾಮ್, ಸೀತಾ, ಸಿಹಿ ಮೂರು ಜನ ಸೇರಿಕೊಂಡು ಸುತ್ತಾಡಲು ಆರಂಭಿಸುತ್ತಾರೆ. ಮೂವರು ಸೇರಿ ಪಾನಿಪುರಿ ತಿನ್ನುವುದಕ್ಕೆ ಶುರು ಮಾಡುತ್ತಾರೆ. ಅವರಿಬ್ಬರು ಅಷ್ಟೆಲ್ಲಾ ಖಾರ ತಿನ್ನುವುದನ್ನು ನೋಡಿ ಶ್ರೀರಾಮನಿಗೆ ಸಂಕಟವಾಗುತ್ತದೆ. ಅವನನ್ನು ಇಬ್ಬರು ಸಮಾಧಾನ ಮಾಡಿ ನೀರು ಕೊಟ್ಟು ಬಾಯಿ ಒರೆಸುತ್ತಾರೆ. ಜೊತೆಗೆ ದುಡ್ಡು ಸರಿ ಇಟ್ಟುಕೊಳ್ಳುವ ಬಗ್ಗೆ ಸೀತಾಳ ಪಾಠವು ಆಗುತ್ತದೆ.

ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್​ಪಿ

ರಜೆ ಇದ್ದರೂ ಆಫೀಸ್ ಗೆ ಬಂದ ರಾಮ್ ಬಗ್ಗೆ ವಿಚಾರಿಸಲು ಭಾರ್ಗವಿ ಮ್ಯಾನೇಜರ್ ಗೆ ಕಾಲ್ ಮಾಡುತ್ತಾಳೆ. ಅಶೋಕ್ ಬಾಸ್ ಅಲ್ಲ ಎನ್ನುವುದು ಗೊತ್ತಿಲ್ಲದೇ ಭಾರ್ಗವಿಗೆ ಬಾಸ್ ಆಫೀಸ್ನಲ್ಲಿಯೇ ಇದ್ದಾರೆ ಎನ್ನುತ್ತಾನೆ. ರಾಮ್ ಮತ್ತು ಅಶೋಕ್ ಮಾಡಿರುವ ಐಡಿಯಾ ಬಗ್ಗೆ ಗೊತ್ತಿಲ್ಲದ ರಾಮನ ಚಿಕ್ಕಿ ಅವನು ಆಫೀಸ್ನಲ್ಲಿಯೇ ಇದ್ದಾನೆ ಎಂದು ನಂಬಿಕೊಳ್ಳುತ್ತಾಳೆ. ಜೊತೆಗೆ ಬಾಸ್ ಹಿಂದೆ ಯಾರೋ ಬಿದ್ದಿದ್ದಾರೆ ಅದನ್ನು ಪತ್ತೆ ಹಚ್ಚಿ ಎಂದು ಚರಣ್ ಗೆ ವಿಷಯ ತಿಳಿಸುತ್ತಾಳೆ. ಹೇಳದೆ ಕೇಳದೆ ಆಫೀಸಿಗೆ ಬಂದಿರುವ ಮ್ಯಾನೇಜರ್ ನಡೆ ಅಶೋಕ್ ಗೆ ಅನುಮಾನ ತರಿಸುತ್ತದೆ. ಮುಂದೆ ಏನಾಗಬಹುದು? ಅಶೋಕ್ ಗೆ ಭಾರ್ಗವಿಯ ಮೋಸ ಮಾಡುತ್ತಿರುವ ವಿಷಯ ತಿಳಿಯುತ್ತಾ? ಸಿಹಿಯ ಊರು ಸುತ್ತುವ ಕಾರ್ಯದಿಂದ ರಾಮ್ ಮತ್ತೆ ಸೀತಾ ಮಧ್ಯೆ ಪ್ರೀತಿ ಹುಟ್ಟುತ್ತಾ? ಕಾದು ನೋಡೋಣ.

Published On - 10:27 pm, Tue, 29 August 23

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ