AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನ ಕೊನೆ ಆಯ್ತು ಅಕ್ಕ-ತಂಗಿ ಬದುಕು; ಹಾರಿ ಹೋಯ್ತು ನಟಿಯರಿಬ್ಬರ ಜೀವ

ಅಮನ್​ದೀಪ್ ಅವರಿಗೆ ಹಲವು ದಿನಗಳ ಹಿಂದೆ ಜಾಂಡಿಸ್ ಆಗಿತ್ತು. ಅವರಿಗೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದಾದ ಬೆನ್ನಲ್ಲೇ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಸೋಹಿ ಕೂಡ ಕೊನೆಯುಸಿರು ಎಳೆದಿದ್ದಾರೆ. ಇವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಎರಡೂ ಸಾವುಗಳಿಂದ ಕುಟುಂಬ ಶಾಕ್​ಗೆ ಒಳಗಾಗಿದೆ.

ಒಂದೇ ದಿನ ಕೊನೆ ಆಯ್ತು ಅಕ್ಕ-ತಂಗಿ ಬದುಕು; ಹಾರಿ ಹೋಯ್ತು ನಟಿಯರಿಬ್ಬರ ಜೀವ
ಡಾಲಿ-ಅಮನ್​ದೀಪ್
ರಾಜೇಶ್ ದುಗ್ಗುಮನೆ
|

Updated on: Mar 08, 2024 | 10:29 AM

Share

ಹಿಂದಿ ಕಿರುತೆರೆ ಲೋಕಕ್ಕೆ ಶಾಕ್​ ಆಗುವಂಥ ಘಟನೆ ಒಂದು ನಡೆದಿದೆ. ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದ ಸಹೋದರಿಯರಾದ ಡಾಲಿ ಸೋಹಿ (Dolly Sohi) ಹಾಗೂ ಅಮನ್​ದೀಪ್​ ಸೋಹಿ ಇಬ್ಬರೂ ಕೆಲವೇ ಗಂಟೆಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಒಬ್ಬರು ಜಾಂಡಿಸ್​ಗೆ ಮೃತಪಟ್ಟರೆ ಮತ್ತೊಬ್ಬರು ಗರ್ಭಕಂಠ ಕ್ಯಾನ್ಸರ್​ನಿಂದ ಕೊನೆಯುಸಿರು ಎಳೆದಿದ್ದಾರೆ. ಈ ವಿಚಾರ ಶಾಕಿಂಗ್ ಎನಿಸಿದೆ.

ಅಮನ್​ದೀಪ್ ಅವರಿಗೆ ಹಲವು ದಿನಗಳ ಹಿಂದೆ ಜಾಂಡಿಸ್ ಆಗಿತ್ತು. ಅವರಿಗೆ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದಾದ ಬೆನ್ನಲ್ಲೇ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಸೋಹಿ ಕೂಡ ಕೊನೆಯುಸಿರು ಎಳೆದಿದ್ದಾರೆ. ಇವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಎರಡೂ ಸಾವುಗಳಿಂದ ಕುಟುಂಬ ಶಾಕ್​ಗೆ ಒಳಗಾಗಿದ್ದು, ಇದರಿಂದ ಚೇತರಿಸಿಕೊಳ್ಳುವ ಶಕ್ತಿಯನ್ನು ಅವರಿಗೆ ದೇವರು ನೀಡಲಿ ಎಂದು ಫ್ಯಾನ್ಸ್ ಕೋರಿದ್ದಾರೆ.

‘ನಮ್ಮ ಪ್ರೀತಿಯ ಅಮನ್​ದೀಪ್ ಸೋಹಿ ಅವರು ಇಂದು ಸ್ವರ್ಗಸ್ಥರಾಗಿದ್ದಾರೆ. ನಾವು ಅವರನ್ನು ಕಳೆದುಕೊಂಡು ಶಾಕ್​ಗೆ ಒಳಗಾಗಿದ್ದೇವೆ. ಇಂದು (ಮಾರ್ಚ್ 8) ಮಧ್ಯಾಹ್ನ ಅಂತಿಮ ಸಂಸ್ಕಾರ ನಡೆಯಲಿದೆ’ ಎಂದು ಡಾಲಿ ಸೋಹಿ ಅವರ ಸಹೋದರ ಮನು ಗುರುವಾರ ಹೇಳಿದ್ದರು. ಇದಾದ ಬೆನ್ನಲ್ಲೇ ಡಾಲಿ ಸಾವನಪ್ಪಿದ್ದಾರೆ.

ಅಮನ್​ದೀಪ್ ಅವರು ಗುರುವಾರ (ಮಾರ್ಚ್ 7) ಮೃತಪಟ್ಟರು. ‘ಅಮನ್​ದೀಪ್ ಮೃತಪಟ್ಟಿದ್ದಾರೆ ಅನ್ನೋದು ನಿಜ. ಅವರಿಗೆ ಜಾಂಡಿಸ್ ಆಗಿತ್ತು. ವೈದ್ಯರ ಬಳಿ ಹೆಚ್ಚಿನ ಮಾಹಿತಿ ಕೇಳುವ ತಾಕತ್ತು ನಮಗೆ ಇಲ್ಲ’ ಎಂದಿದ್ದಾರೆ ಮನು. ಡಾಲಿ ಅವರ ಆರೋಗ್ಯ ತೀವ್ರ ಹದಗೆಟ್ಟಿರಲಿಲ್ಲ. ಆದರೆ, ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದರು. 2023ರಲ್ಲಿ ಅವರಿಗೆ ಗರ್ಭಕಂಠ ಕ್ಯಾನ್ಸ್ ಇರೋದು ಪತ್ತೆ ಆಗಿತ್ತು.

ಇದನ್ನೂ ಓದಿ: ಟಿಆರ್​ಪಿ ರೇಸ್​ನಲ್ಲಿರೋ ಟಾಪ್​ ಐದು ಕನ್ನಡದ ಧಾರಾವಾಹಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಡಾಲಿ ಸೋಹಿ ಅವರು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 2000ರಲ್ಲಿ ಪ್ರಸಾರ ಆರಂಭಿಸಿದ ‘ಕಲಾಶ್’ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. 2022ರಲ್ಲಿ ಪ್ರಸಾರ ಕಂಡ ‘ಸಿಂಧೂರ್​ ಕಿ ಕಿಮತ್’ ಅವರ ನಟನೆಯ ಕೊನೆಯ ಧಾರಾವಾಹಿ. ಅಮನ್​ದೀಪ್​ ಅವರು ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More