
‘ಸೀತಾ ರಾಮ’ ಧಾರಾವಾಹಿ (Seetha Raama Serial) ಹಲವು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈಗ ಧಾರಾವಾಹಿ ಒಂದು ಪ್ರಮುಖ ಘಟ್ಟ ತಲುಪಿದೆ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಸಿಹಿ ಬದಲು ಸುಬ್ಬಿಯನ್ನು ಕರೆತಂದಿದ್ದು ಗೊತ್ತೇ ಇದೆ. ಸಿಹಿ ಸತ್ತು ಹೋಗಿದ್ದಾಳೆ. ಆ ಸ್ಥಾನವನ್ನು ಸುಬ್ಬಿ ತುಂಬಿದ್ದಾಳೆ. ಇಬ್ಬರೂ ಅವಳಿ ಜವಳಿ. ಆದರೆ, ಈ ವಿಚಾರ ಸುಬ್ಬಿಗೆ ಗೊತ್ತಿರಲೇ ಇಲ್ಲ. ಈಗ ಸುಬ್ಬಿಗೆ ಸತ್ಯ ಗೊತ್ತಾಗುವ ಸಮಯ. ಆಕೆಯನ್ನು ಈ ಮೊದಲು ಸಾಕಿದ್ದ ತಾತ ಎಲ್ಲವನ್ನೂ ಹೇಳಿದ್ದಾನೆ.
ಸುಬ್ಬಿ ಶ್ರೀರಾಮ್ ದೇಸಾಯಿ ಮನೆಯಲ್ಲಿ ಇದ್ದಾಳೆ. ಸೀತಾಳ ಮಗಳಾಗಿ ಅವಳು ನಾಟಕ ಮಾಡುತ್ತಿದ್ದಾಳೆ. ಆದರೆ, ಸೀತಾಳೆ ತನ್ನ ತಾಯಿ ಎಂಬುದು ಆಕೆಗೆ ಹೇಗೆ ಗೊತ್ತಾಗಲು ಸಾಧ್ಯ ನೀವೇ ಹೇಳಿ. ಆದರೆ, ಈಗ ಸತ್ಯ ಹೊರ ಬರುವ ಸಮಯ. ಸುಬ್ಬಿ ಎದುರು ಮುಚ್ಚಿಟ್ಟಿದ್ದ ಸತ್ಯ ಈಗ ಹೊರ ಬಿದ್ದಿದೆ. ಸುಬ್ಬಿ ಎದುರು ಆಕೆಯ ತಾತ ನಿಜವಾದ ವಿಚಾರ ಹೇಳಿದ್ದಾನೆ.
‘ನಾನು ಯಾರಿಂದ ನಿನ್ನ ದೂರ ಮಾಡಿದ್ದೀನೋ ಅವರ ಹತ್ತಿರವೇ ಹೋಗಿ ಸೇರಿಕೊಂಡಿದ್ದೀಯಾ. ಸೀತಾಗೆ ಇಬ್ಬರು ಮಕ್ಕಳಿದ್ದರು. ಒಂದು ಮಗುನ ನಾನು ಕದ್ದುಕೊಂಡು ಬಂದೆ. ಅದೇ ನೀನು. ಮತ್ತೆ ಸೀತಾ ಬಳಿಯೇ ಹೋಗಿದ್ದೀಯಾ. ನೀನು ಸೀತಾ ಮನೆಗೆ ಹೋಗಿದ್ದು ನಂಗೆ ಗೊತ್ತಾದ ತಕ್ಷಣ ನನ್ನ ಬಂಡವಾಳ ಹೊರ ಬರುತ್ತದೆ ಎಂದುಕೊಂಡೆ. ಇದಕ್ಕಾಗಿ ನಿನ್ನ ಬೇರೆಯವರಿಗೆ ದತ್ತು ಕೊಡಬೇಕು ಎಂದುಕೊಂಡೆ. ನಿನ್ನ ಸಣ್ಣ ವಯಸ್ಸಲ್ಲೇ ಮಾರುವವನಿದ್ದೆ. ಆದರೆ, ನಿನ್ನ ಮುಖ ನೋಡಿ ಮಾರಲು ಮನಸ್ಸೇ ಬಂದಿಲ್ಲ’ ಎಂದು ಸುಬ್ಬಿಯನ್ನು ಸಾಕಿದ್ದ ತಾತ ಹೇಳಿದ.
‘ನಾನು-ಸಿಹಿ ಅಕ್ಕ ತಂಗಿನಾ’ ಎಂದು ಸುಬ್ಬಿ ಖುಷಿಪಟ್ಟಳು. ಅಲ್ಲದೆ, ತನ್ನ ತಾತ ಈ ರೀತಿ ಮಾಡಿದ್ದನ್ನಲ್ಲಾ ಎಂಬುದನ್ನು ತಿಳಿದು ಆಕೆ ಬೇಸರ ಮಾಡಿಕೊಂಡಳು. ‘ನನ್ನ ಮುಖವನ್ನು ಯಾವಾಗಲೂ ನೋಡೋಕೆ ಬರಬೇಡಿ’ ಎಂದು ಹೇಳಿ ಸುಬ್ಬಿ ಹೊರಟು ಹೋದಳು. ಆಕೆ ಸದ್ಯ ನಿಜವಾದ ವಿಚಾರ ತಿಳಿದು ಖುಷಿಯಾಗಿದ್ದಾಳೆ. ಇನ್ನುಮುಂದೆ ಆಕೆ ಸೀತಾಳನ್ನು ನೋಡುವ ರೀತಿ ಬದಲಾಗಬಹುದು. ಸಣ್ಣ ವಯಸ್ಸಿನಿಂದ ತಾಯಿಯನ್ನು ನೋಡಬೇಕು ಎಂಬ ಅವಳ ಆಸೆ ಈಡೇರಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.