ಕಿರುತೆರೆಗೆ ಮರಳುತ್ತಿದ್ದಂತೆ ಸ್ಮೃತಿ ಇರಾನಿಗೆ ಭರ್ಜರಿ ಸಂಭಾವನೆ

‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ 2’ರಲ್ಲಿ ಸ್ಮೃತಿ ಇರಾನಿ ಅವರ ಮರಳುವಿಕೆಯು ಸಂಚಲನವನ್ನು ಉಂಟುಮಾಡಿದೆ. ಪ್ರತಿ ಕಾಲ್ ಶೀಟ್ ಗೆ ಲಕ್ಷ, ಲಕ್ಷ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂಬುದು ವರದಿಯಾಗಿದೆ. ಇದು ಅವರ ಕಠಿಣ ಪರಿಶ್ರಮ ಮತ್ತು ಧಾರಾವಾಹಿಯ ಟಿಆರ್ಪಿಗೆ ಸಲ್ಲುವ ಪ್ರತಿಫಲ ಎಂದು ಅವರು ಹೇಳಿದ್ದಾರೆ. ವೇತನ ಸಮಾನತೆಯನ್ನು ಅವರು ಬಲವಾಗಿ ಬೆಂಬಲಿಸುತ್ತಾರೆ ಎಂದೂ ಹೇಳಿದ್ದಾರೆ.

ಕಿರುತೆರೆಗೆ ಮರಳುತ್ತಿದ್ದಂತೆ ಸ್ಮೃತಿ ಇರಾನಿಗೆ ಭರ್ಜರಿ ಸಂಭಾವನೆ
ಸ್ಮೃತಿ ಇರಾನಿ
Updated By: ರಾಜೇಶ್ ದುಗ್ಗುಮನೆ

Updated on: Aug 10, 2025 | 6:30 AM

ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಬಿರುಗಾಳಿ ಎಬ್ಬಿಸಿದ ಸರಣಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ. ಈ ಧಾರಾವಾಹಿಯ ಎಲ್ಲ ಪಾತ್ರಗಳು ಜನಪ್ರಿಯತೆ ಪಡೆದವು. ಈಗ, ಹಲವು ವರ್ಷಗಳ ನಂತರ, ಈ ಸರಣಿಯ ಮುಂದಿನ ಭಾಗವಾದ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ 2′ ಪ್ರೇಕ್ಷಕರ ಎದುರು ಬಂದಿದೆ. ಈ ಸರಣಿಯ ಮೂಲಕ ಸ್ಮೃತಿ ಇರಾನಿ (Smriti Irani) ಕಿರುತೆರೆಗೆ ಮರಳುತ್ತಿರುವುದು ಸಂಚಲನ ಮೂಡಿಸಿದೆ. ಅವರ ಸಂಭಾವನೆ ವಿಚಾರ ಕೂಡ ಚರ್ಚೆ ಆಗಿದೆ.

ವರದಿಯ ಪ್ರಕಾರ, ಸ್ಮೃತಿ ಇರಾನಿ ಸಂಭಾವನೆ ವಿಷಯದಲ್ಲಿ ಇತರ ಟಿವಿ ಕಲಾವಿದರನ್ನು ಹಿಂದಿಕ್ಕಿದ್ದಾರೆ. ಅವರು ಪ್ರತಿ ಕಾಲ್​ಶೀಟ್​ಗೆ 14 ಲಕ್ಷ ರೂ.ಗಳನ್ನು ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ. ಇದರಿಂದಾಗಿ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಟಿಯಾಗಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಸ್ವತಃ ತಮ್ಮ ಸಂಭಾವನೆಯನ್ನು ಖಚಿತಪಡಿಸಿದ್ದಾರೆ. ಇತ್ತೀಚೆಗೆ, ಸುದ್ದಿ ವಾಹಿನಿಯೊಂದಕ್ಕೆ ಮಾತನಾಡುತ್ತಾ, ಸ್ಮೃತಿ ಇರಾನಿ ಅವರು ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಒಪ್ಪಿಕೊಂಡರು. ಕಠಿಣ ಪರಿಶ್ರಮ ಮತ್ತು ಟಿಆರ್‌ಪಿ ಅಂಕಿಅಂಶಗಳಿಂದಾಗಿ ಅವರು ಈ ಸಂಭಾವನೆಯನ್ನು ಗಳಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ
ಮಹೇಶ್ ಬಾಬು ಇಷ್ಟೊಂದು ಶ್ರೀಮಂತರೇ? ನಟನ ಆಸ್ತಿ ಬಗ್ಗೆ ಇಲ್ಲಿದೆ ವಿವರ
‘ಬ್ಲಾಕ್​ಬಸ್ಟರ್’; ಒಂದು ವಾರ ಮೊದಲೇ ಹೊರಬಿತ್ತು ಕೂಲಿ ಸಿನಿಮಾ ವಿಮರ್ಶೆ
ತೆಲುಗು ರಿಲೀಸ್ ಬೆನ್ನಲ್ಲೇ ಮತ್ತೆ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಸ್ಮೃತಿ ಇರಾನಿ ಅವರು ವೇತನ ಸಮಾನತೆಯನ್ನು ಬಹುವಾಗಿ ಒಪ್ಪುತ್ತಾರೆ. ಹೀಗಾಗಿ. ‘ಇದು ಬಹಳಷ್ಟು ಕಠಿಣ ಪರಿಶ್ರಮಕ್ಕೆ ಸಿಕ್ಕ ಉತ್ತರ’ ಎಂದಿದ್ದಾರೆ ಅವರು. ತುಳಸಿ ವಿರಾನಿ ಪಾತ್ರದಲ್ಲಿ ನಟಿಸಿರುವ ಸ್ಮೃತಿ ಇರಾನಿ ನಟಿಸಿದ್ದಾರೆ.

ಭಾರತದ ಕಿರುತೆರೆ ಲೋಕದಲ್ಲಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಏಕ್ತಾ ಕಪೂರ್ ನಿರ್ಮಾಣ ಮಾಡಿದ ಈ ಧಾರಾವಾಹಿ 2000ನೇ ಇಸವಿಯ ಜುಲೈ 3ರಿಂದ 2008ರ ನವೆಂಬರ್ 6ರ ತನಕ ಪ್ರಸಾರ ಆಗಿತ್ತು. ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಈ ಸೀರಿಯಲ್ ಬಿತ್ತರವಾಗಿತ್ತು. ಒಟ್ಟು 1,800 ಸಂಚಿಕೆಗಳು ಪ್ರಸಾರವಾಗಿದ್ದವು ಅನ್ನೋದು ಧಾರಾವಾಹಿಯ ಹೆಗ್ಗಳಿಕೆ.

ಇದನ್ನೂ ಓದಿ: ಧಾರಾವಾಹಿ ಚಿತ್ರೀಕರಣ ಪ್ರಾರಂಭಿಸಿದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಸ್ಮೃತಿ ಅವರು ಬಣ್ಣದ ಲೋಕ ತೊರೆದ ಬಳಿಕ ರಾಜಕೀಯದಲ್ಲಿ ಬ್ಯುಸಿ ಆಗಿದ್ದರು. ಆದರೆ, ಈಗ ಅವರು ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಮತ್ತೆ ಕಿರುತೆರೆಗೆ ಮರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.