ಶೂಟಿಂಗ್‌ಗೂ ಮುನ್ನವೇ ವಿಧಿವಶರಾದ ನಾನಾ ಪಾಟೇಕರ್; ಮಾಧುರಿ ಶೋಗೂ ಕವಿಯಿತು ಮೌನ

ಕೌನ್ ಹೋನರ್ ಕರೋಡ್‌ಪತಿ ಕಾರ್ಯಕ್ರಮದ ಪ್ರಥಮ ಸಂಚಿಕೆಯಲ್ಲಿ ನಾನಾ ಪಾಟೇಕರ್ ಅತಿಥಿಯಾಗಿ ಭಾಗವಹಿಸಬೇಕಿತ್ತು. ಆದರೆ ಅವರ ಅನಿರೀಕ್ಷಿತ ನಿಧನದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನಟಿ ಸೋನಾಲಿ ಬೇಂದ್ರೆ ಆಗಮಿಸಿದ್ದಾರೆ. ಮಾಧುರಿ ದೀಕ್ಷಿತ್ ನಿರೂಪಣೆಯ ಈ ಹೊಸ ಮರಾಠಿ ರಿಯಾಲಿಟಿ ಶೋ ಅಕ್ಟೋಬರ್ 12ರಂದು ಅಧಿಕೃತವಾಗಿ ಪ್ರಸಾರವಾಗಲಿದೆ.

ಶೂಟಿಂಗ್‌ಗೂ ಮುನ್ನವೇ ವಿಧಿವಶರಾದ ನಾನಾ ಪಾಟೇಕರ್; ಮಾಧುರಿ ಶೋಗೂ ಕವಿಯಿತು ಮೌನ
ನಾನಾ-ಮಾಧುರಿ

Updated on: Oct 10, 2026 | 2:42 PM

ನಾನಾ ಪಾಟೇಕರ್ ಅವರ ನಿಧನವು ಚಿತ್ರರಂಗಕ್ಕೆ ಶಾಕ್ ತಂದಿದೆ. ಅವರು ಸೋನಿ ಮರಾಠಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಕೋನ್ ಹೋನರ್ ಕರೋಡ್‌ಪತಿ’ ಕಾರ್ಯಕ್ರಮದ ಹೊಸ ಆವೃತ್ತಿಗೆ ಅತಿಥಿಯಾಗಿ ತೆರಳಬೇಕಿತ್ತು. ಮಾಧುರಿ ದೀಕ್ಷಿತ್ ಅವರು ನಿರೂಪಣೆ ಮಾಡುತ್ತಿರುವ ಈ ಕ್ವಿಜ್ ಶೋ ಇದೇ ಬರುವ ಅಕ್ಟೋಬರ್ 12ರಂದು ರಾತ್ರಿ 9 ಗಂಟೆಗೆ ಸೋನಿ ಮರಾಠಿ ಮತ್ತು ಸೋನಿಲೀವ್‌ನಲ್ಲಿ ಪ್ರಸಾರವಾಗಲು ಸಜ್ಜಾಗಿದೆ.

ಈ ಪ್ರತಿಷ್ಠಿತ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ನಾನಾ ಪಾಟೇಕರ್ ಅವರು ಸಿದ್ಧತೆ ನಡೆಸಿದ್ದರು. 1998ರಲ್ಲಿ ತೆರೆಕಂಡ ‘ವಜೂದ್’ ಸಿನಿಮಾದ ಬಳಿಕ ಮಾಧುರಿ ದೀಕ್ಷಿತ್ ಮತ್ತು ನಾನಾ ಪಾಟೇಕರ್ ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅಕ್ಟೋಬರ್ 8ರಂದು ನಾನಾ ಪಾಟೇಕರ್ ಅವರ ಅನಿರೀಕ್ಷಿತ ನಿಧನದಿಂದಾಗಿ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟಾಗಿದ್ದು, ಇಡೀ ಚಿತ್ರಲೋಕ ಕಂಬನಿ ಮಿಡಿದಿದೆ.

ನಾನಾ ಪಾಟೇಕರ್ ಅವರ ಹಠಾತ್ ಅಗಲಿಕೆಯಿಂದಾಗಿ ನಿರ್ಮಾಪಕರು ಕಾರ್ಯಕ್ರಮದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಬೇಕಾಗಿ ಬಂತು. ನಾನಾ ಬದಲು ಪ್ರಸಿದ್ಧ ನಟಿ ಸೋನಾಲಿ ಬೇಂದ್ರೆ ಅವರು ಮೊದಲ ಸಂಚಿಕೆಗೆ ಸೆಲೆಬ್ರಿಟಿ ಅತಿಥಿಯಾಗಿ ಹೆಜ್ಜೆ ಇಟ್ಟಿದ್ದಾರೆ. ನಾನಾ ಅವರ ಅಗಲಿಕೆಗೆ ಕಂಬನಿ ಮಿಡಿದಿರುವ ನಟಿ ಮಾಧುರಿ ದೀಕ್ಷಿತ್, ಅವರು ಒಬ್ಬ ಮಹಾನ್ ಕಲಾವಿದ ಹಾಗೂ ಮರೆಯಲಾಗದ ಧ್ವನಿಯಾಗಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಈ ಬದಲಾವಣೆಯಿಂದಾಗಿ ಮೊದಲ ಬಾರಿಗೆ ತೆರೆಯಲ್ಲಿ ಮಾಧುರಿ ದೀಕ್ಷಿತ್ ಮತ್ತು ಸೋನಾಲಿ ಬೇಂದ್ರೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರೂ ಹಿಂದೆಂದೂ ಯಾವುದೇ ಚಲನಚಿತ್ರದಲ್ಲಿ ಒಟ್ಟಿಗೆ ನಟಿಸಿರಲಿಲ್ಲ. ಆದರೆ ಈ ರಿಯಾಲಿಟಿ ಶೋ ಮೂಲಕ ಮೊದಲ ಬಾರಿಗೆ ಜೊತೆಯಾಗಿರುವುದು ತಮಗೆ ತುಂಬಾ ವಿಶೇಷ ಹಾಗೂ ಸಂತೋಷದ ಕ್ಷಣವಾಗಿದೆ ಎಂದು ಮಾಧುರಿ ದೀಕ್ಷಿತ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ನಾನಾ ಪಾಟೇಕರ್ ಅಂತ್ಯಸಂಸ್ಕಾರ ನಡೆದಿದ್ದೇಕೆ? ಸಿಕ್ಕಿತು ಉತ್ತರ

ಮಾಧುರಿ ದೀಕ್ಷಿತ್ ಅವರ ಅಪ್ಪಟ ಅಭಿಮಾನಿಯಾಗಿರುವ ಸೋನಾಲಿ ಬೇಂದ್ರೆ, ಅವರನ್ನು ಈ ಶೋನ ನಿರೂಪಕಿಯಾಗಿ ಸ್ವಾಗತಿಸಿದ್ದಾರೆ. ಇಬ್ಬರ ಮಕ್ಕಳೂ ಒಂದೇ ಶಾಲೆಯಲ್ಲಿ ಓದುವುದರಿಂದ ಇವರಿಬ್ಬರ ನಡುವೆ ಮೊದಲೇ ಉತ್ತಮ ಸ್ನೇಹ ಹಾಗೂ ಬಾಂಧವ್ಯವಿತ್ತು. ಈಗ ಕೊನೆಗೂ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us