‘ಬಿಗ್ ಬಾಸ್ ಕನ್ನಡ ಸೀಸನ್ 11’ ಕೊನೆಯ ಹಂತಕ್ಕೆ ಬಂದಿದೆ. ಇನ್ನೊಂದು ವಾರದಲ್ಲಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸದ್ಯ ದೊಡ್ಮನೆಯಲ್ಲಿ ಆರು ಸ್ಪರ್ಧಿಗಳು ಇದ್ದು, ಈ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಈ ಸೀಸನ್ನಲ್ಲಿ ಉತ್ತಮ ಟಿಆರ್ಪಿ ಬಂದಿದೆ ನಿಜ. ಆದರೆ, ಸ್ಪರ್ಧಿಗಳು ನಡೆದುಕೊಂಡ ರೀತಿಗೆ ಸುದೀಪ್ ಬೇಸರಗೊಂಡಿದ್ದಾರೆ. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದೂ ಇದೆ. ‘ಅತ್ಯಂತ ಕೆಟ್ಟ ಸೀಸನ್’ ಎಂದು ಅನೇಕರು ಟೀಕೆ ಮಾಡಿದ್ದೂ ಇದೆ. ಈಗ ಸ್ಪರ್ಧಿಗಳಿಗೆ ಸುದೀಪ್ ಅವರು ಈ ಬಗ್ಗೆ ನೇರವಾಗಿ ಹೇಳಿದ್ದಾರೆ.
ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ಫನ್ ಮೂಡ್ನಲ್ಲಿ ಇರುತ್ತಾರೆ. ಏನೇ ಹೇಳಿದರೂ ಅದನ್ನು ಫನ್ ಆಗಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಯಾರು ಹೊರ ಹೋಗುತ್ತಾರೆ ಎಂದು ಕೇಳುತ್ತಾ ಬರಲಾಯಿತು. ಆಗ ಎಲ್ಲರೂ ಫನ್ ಆಗಿ ಉತ್ತರ ಕೊಟ್ಟರು. ರಜತ್ ಅವರು ಸುದೀಪ್ನ ಹೊಗಳಿದರು. ಇದಕ್ಕೆ ಸುದೀಪ್ ಅವರು ನೇರ ಮಾತುಗಳಲ್ಲಿ ಕೌಂಟರ್ ಕೊಟ್ಟಿದ್ದಾರೆ.
‘ಯಾವ ಸೀಸನ್ನಲ್ಲೂ ಇಲ್ಲದಿರೋ ಕಳೆ ನಿಮಗೆ ಈ ಸೀಸನ್ನಲ್ಲಿ ಬಂದಿದೆ’ ಎಂದು ರಜತ್ ಅವರು ಸುದೀಪ್ ಬಳಿ ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್ ಅವರು, ‘ಯಾವ ಸೀಸನ್ನಲ್ಲೂ ಇಲ್ಲದಿರೋ ಕಳೆ ಈಗ ಯಾಕೆ ಬಂತು ಎಂದರೆ, ಈ ಸೀಸನ್ ಇನ್ನೊಂದು ವಾರ ಇದೆಯಲ್ಲ. ಅದಕ್ಕೆ ಕಳೆ ಬಂದಿದೆ. ನಿಮ್ಮ ಸಹವಾಸ ಸಾಕಾಗಿದೆ’ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಈಗಾಗಲೇ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ನಿರ್ಧಾರ ಮಾಡಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ಕೂಡ ಮಾಡಿದ್ದಾರೆ. ಆದರೆ, ಕಲರ್ಸ್ ಕನ್ನಡ ಕಡೆಯಿಂದ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಯೋಚಿಸೋದಾಗಿ ಹೇಳಿದ್ದಾರೆ. ಅವರು ಮನಸ್ಸು ಬದಲಿಸಲಿ ಎಂದು ಫ್ಯಾನ್ಸ್ ಕೋರುತ್ತಾ ಇದ್ದಾರೆ. ಆ ಬಗ್ಗೆ ಸುದೀಪ್ ಫಿನಾಲೆ ದಿನ ಘೋಷಣೆ ಮಾಡುವ ಸಾಧ್ಯತೆ ಇದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.