Rani Abbakka: ದೂರದರ್ಶನದಲ್ಲಿ ನೋಡಿ ಉಲ್ಲಾಳದ ರಾಣಿ ಅಬ್ಬಕ್ಕನ ಸಾಹಸದ ಕಥೆ; ಭಾನುವಾರ ರಾತ್ರಿ 9ಕ್ಕೆ ‘ಸ್ವರಾಜ್’
DD National | Swaraj: ಪ್ರತಿ ಭಾನುವಾರ ರಾತ್ರಿ 9ರಿಂದ 10 ಗಂಟೆಯವರೆಗೆ ಈ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರ ಕಾಣಲಿದೆ. ಈ ವಾರ ರಾಣಿ ಅಬ್ಬಕ್ಕನ ಸಂಚಿಕೆ ಬಿತ್ತರ ಆಗಲಿದೆ.
ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದಿದೆ. ಈ ವರ್ಷ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಆಚರಿಸಲಾಗಿದೆ. ಎಲ್ಲೆಲ್ಲೂ ತ್ರಿವರ್ಣ ಧ್ವಜ ರಾರಾಜಿಸಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಯುವಂತಿಲ್ಲ. ಅವರ ತ್ಯಾಗ, ಬಲಿದಾನಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಹೋರಾಟ ನಡೆಸಿದ ಎಲ್ಲ ಮಹಾನ್ ವೀರರ ಬಗ್ಗೆ ‘ದೂರದರ್ಶನ’ (Doordarshan) ವಾಹಿನಿ ಸೀರಿಯಲ್ ಪ್ರಸಾರ ಮಾಡುತ್ತಿದೆ. ಇದಕ್ಕೆ ‘ಸ್ವರಾಜ್: ಭಾರತ್ ಕೆ ಸ್ವಾತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ’ ಎಂದು ಶೀರ್ಷಿಕೆ ಇಡಲಾಗಿದೆ. ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಈ ಸಂಚಿಕೆಗಳು ಪ್ರಸಾರ ಆಗಲಿವೆ. ಈ ವಾರ (ಆಗಸ್ಟ್ 28) ಕರುನಾಡಿನ ಉಲ್ಲಾಳದ ರಾಣಿ ಅಬ್ಬಕ್ಕ (Rani Abbakka) ಮೆರೆದ ಸಾಹಸದ ಕಥೆ ಬಿತ್ತರವಾಗಲಿದೆ. ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ಮಹಿಳೆಯ ಕಹಾನಿಯನ್ನು ‘ಸ್ವರಾಜ್’ (Swaraj) ಸೀರಿಸ್ ತೆರೆದಿಡಲಿದೆ. ಇದನ್ನು ನೋಡಲು ದೇಶದ ಜನತೆ ಕಾದಿದ್ದಾರೆ.
‘ಪ್ರಸಾರ ಭಾರತಿ’ ಅಧಿಕೃತ ಟ್ವಿಟರ್ ಖಾತೆ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತದ ಮೂಲೆ ಮೂಲೆಗಳಿಂದಲೂ ಅನೇಕ ರಾಜ ಮನೆತನಗಳು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿವೆ. ಲೆಕ್ಕವಿಲ್ಲದಷ್ಟು ವೀರ ಸೇನಾನಿಗಳು ರಣರಂಗದಲ್ಲಿ ಮಡಿದಿದ್ದಾರೆ. ಅಂಥ ಎಲ್ಲರಿಗೂ ‘ಸ್ವರಾಜ್: ಭಾರತ್ ಕೆ ಸ್ವಾತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ’ ಮೂಲಕ ನಮನ ಸಲ್ಲಿಸಲಾಗುತ್ತಿದೆ.
ಆಗಸ್ಟ್ 14ರಂದು ‘ಸ್ವರಾಜ್’ ಸರಣಿಯ ಪ್ರದರ್ಶನ ಆರಂಭ ಆಗಿದೆ. 75 ಎಪಿಸೋಡ್ಗಳಲ್ಲಿ ಈ ಸರಣಿ ಪ್ರಸಾರ ಕಾಣಲಿದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ, ದೇಶದ ಇತಿಹಾಸದ ಬಗ್ಗೆ ಜಗತ್ತಿಗೆ ತಿಳಿಯದ ಅನೇಕ ಮಾಹಿತಿಗಳು ಈ ಸರಣಿಯಲ್ಲಿ ಇರಲಿವೆ. ಪ್ರತಿ ಭಾನುವಾರ ರಾತ್ರಿ 9ರಿಂದ 10 ಗಂಟೆಯವರೆಗೆ ಈ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರ ಕಾಣಲಿದೆ.
A must watch…coming up on Sunday, 28th August, the story of Rani Abbakka of Ullal in Karnataka…she sacrificed her life but didn’t bow to Portugese aggressors @DDNational at 9 PM.#SwarajOnDoordarshan pic.twitter.com/PsrsQi6d6P
— Mayank Agrawal (@Mayank23Agrawal) August 24, 2022
ಕೆಲವೇ ದಿನಗಳ ಹಿಂದೆ ‘ಸ್ವರಾಜ್: ಭಾರತ್ ಕೆ ಸ್ವಾತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ’ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ರಾಣಿ ಅಬ್ಬಕ್ಕ ಹಾಗೂ ಶಿವಪ್ಪ ನಾಯಕನ ಸಂಚಿಕೆಗಳನ್ನು ಬಿತ್ತರ ಮಾಡಲಾಗಿತ್ತು. ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.