ಹಿಂದಿಯ ಜನಪ್ರಿಯ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ (Tarak mehta ka ulta chasma) ಧಾರಾವಾಹಿಯ (Serial) ನಟಿಯೊಬ್ಬರು ಧಾರಾವಾಹಿ ನಿರ್ಮಾಪಕರ (Producer) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಧಾರಾವಾಹಿ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಹಾಗೂ ಇನ್ನಿಬ್ಬರ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ದುರ್ವತನೆಯ ಆರೋಪ ಮಾಡಿದ್ದರು. ಇದೀಗ ಆರೋಪಗಳಿಗೆ ನಿರ್ಮಾಪಕ ಮೋದಿ ಪ್ರತಿಕ್ರಿಯಿಸಿದ್ದು ನಟಿಯ ಆರೋಪಗಳು ಆಧಾರ ರಹಿತ ಎಂದಿದ್ದಾರೆ.
‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಧಾರಾವಾಹಿಯು ಹಿಂದಿ ಭಾಷಿಕರ ಅಚ್ಚು ಮೆಚ್ಚಿನ ಧಾರಾವಾಹಿಯಾಗಿದ್ದು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಜೊತೆ ಸುಮಾರು 15 ವರ್ಷಗಳಿಂದಲೂ ಗುರುತಿಸಿಕೊಂಡಿದ್ದ ನಟಿಯೊಬ್ಬರು ನಿರ್ಮಾಪಕ ಅಸಿತ್ ಕುಮಾರ್ ಮೋದಿ, ಪ್ರಾಜೆಕ್ಟ್ ಹೆಡ್ ಸೊಹಾಲಿ ರೊಮಾನಿ ಹಾಗೂ ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಮುಂಬೈ ಪೊಲೀಸ್, ಮಹಿಳಾ ಆಯೋಗಗಳಿಗೆ ಪತ್ರ ಬರೆದಿದ್ದಾರೆ.
ನಟಿಯು ದುರ್ವತನೆ ತೋರಿದ ಕಾರಣ ಆಕೆಯನ್ನು ಧಾರಾವಾಹಿಯಿಂದ ಹೊರಗೆ ಇಡಲಾಗಿದೆ ಎಂದಿರುವ ನಿರ್ಮಾಪಕ ಮೋದಿ, ನಟಿ ಮಾಡಿರುವ ಆರೋಪಗಳು ಸುಳ್ಳು, ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದಿದ್ದಾರೆ.
ನಟಿಯು ಮಾರ್ಚ್ 6 ರಂದು ಧಾರಾವಾಹಿಯಲ್ಲಿ ಕೊನೆಯ ಬಾರಿ ನಟಿಸಿದ್ದರು. ಅದಾದ ಬಳಿಕ ಯಾವುದೇ ಎಪಿಸೋಡ್ನಲ್ಲಿ ಕಾಣಿಸಿಕೊಂಡಿಲ್ಲ. ನಟಿ, ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಂತೆ, ಮಾರ್ಚ್ 7 ರಂದು ಹೋಲಿ ಇದ್ದ ಕಾರಣ ಕುಟುಂಬದೊಟ್ಟಿಗೆ ಸಮಯ ಕಳೆಯಲು ಎರಡು ಗಂಟೆಗಳ ಕಾಲ ಬ್ರೇಕ್ ಕೇಳಿದ್ದರಂತೆ. ಆದರೆ ಇತರೆ ನಟರಿಗೆ ಬ್ರೇಕ್ ಕೊಟ್ಟು ತಮಗೆ ಕೊಡಲಿಲ್ಲವಂತೆ, ಬಲವಂತ ಮಾಡಿದಾಗ ಸೊಹಾಲಿ ರೊಮಾನಿ ಕೆಟ್ಟದಾಗಿ ನಡೆದುಕೊಂಡು ಬೈದರಂತೆ. ತಾವು ಸೆಟ್ನಿಂದ ಹೊರನಡೆಯಲು ಯತ್ನಿಸಿದಾಗ ಜತಿನ್ ಬಜಾಜ್ ತಮ್ಮ ಕಾರನ್ನು ಅಡ್ಡಗಟ್ಟಲು ಯತ್ನಿಸಿದರಂತೆ. ಅದಾದ ಬಳಿಕ ನೊಟೀಸ್ ಕಳಿಸಿದ್ದಾರೆ, ಆದರೆ ಅದಕ್ಕೆ ವಾಟ್ಸ್ಆಪ್ ಮೂಲಕ ಪ್ರತಿಕ್ರಿಯಿಸಿದ ನಟಿ, ಲೈಂಗಿಕ ಕಿರುಕುಳದ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಆಗ ಆ ಕಡೆಯಿಂದ ಹಣ ವಸೂಲಿಗೆ ಯತ್ನ ಮಾಡುತ್ತಿದ್ದೀಯ ಎಂದು ಪ್ರತ್ಯುತ್ತರಿಸಿದ್ದಾರೆ.
ಇದನ್ನೂ ಓದಿ:ಶೀಘ್ರವೇ ಪೂರ್ಣಗೊಳ್ಳಲಿದೆ ‘ಜೊತೆ ಜೊತೆಯಲಿ’ ಧಾರಾವಾಹಿ’; ಕಾರಣ ಏನು?
ನಟಿ ಹೇಳಿರುವಂತೆ, ಧಾರಾವಾಹಿ ನಿರ್ಮಾಪಕ ಮೋದಿ, ಹಲವು ಬಾರಿ ಧಾರಾವಾಹಿಯ ಹಲವು ನಟಿಯರೊಟ್ಟಿಗೆ ಕೆಟ್ಟದಾಗಿ ವರ್ತಿಸಿದ್ದಾರಂತೆ. ಅಸಭ್ಯ ಕಮೆಂಟ್ ಮಾಡುವುದು, ಸುಖಾ-ಸುಮ್ಮನೆ ಮೈಮುಟ್ಟುವುದು ಮಾಡಿದ್ದಾರಂತೆ. ಸಿಂಗಪುರದಲ್ಲಿ ಚಿತ್ರೀಕರಣ ಮಾಡುವಾಗ ನಿರ್ಮಾಪಕ ಮೋದಿ, ನಟಿಯನ್ನು ತಮ್ಮ ರೂಂಗೆ ಆಹ್ವಾನಿಸಿದ್ದರಂತೆ. ಮತ್ತೊಮ್ಮೆ ಸೆಕ್ಸಿ ಎಂದು ಕರೆದು ಕೆನ್ನೆ ಗಿಂಡಿದ್ದಾಗಿಯೂ ನಟಿ ಹೇಳಿಕೊಂಡಿದ್ದಾರೆ. ತಮಗೆ ಮಾತ್ರವೇ ಅಲ್ಲದೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಇತರ ನಟಿಯರಿಗೂ ಆ ನಿರ್ಮಾಪಕ ಸಮಸ್ಯೆ ಕೊಟ್ಟಿದ್ದಾನೆ ಎಂದು ಹೇಳಿರುವ ನಟಿ, ಆ ಧಾರಾವಾಹಿಯಲ್ಲಿ ನಟಿಸುವ ಪುರುಷರಿಗೆ ಅತಿಯಾದ ಪ್ರಾಮುಖ್ಯತೆ ನೀಡುತ್ತಾರೆ. ಮಹಿಳೆಯರನ್ನು ಕೀಳಾಗಿ ಕಾಣುತ್ತಾರೆ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ