ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಹೊರ ಜಗತ್ತಿನಲ್ಲಿ ಏನು ಆಗುತ್ತಿದೆ ಎಂಬುದು ತಿಳಿಯುವುದಿಲ್ಲ. ಎಪಿಸೋಡ್ನಲ್ಲಿ ತಮ್ಮನ್ನು ಯಾವ ರೀತಿ ಬಿಂಬಿಸಲಾಗುತ್ತಿದೆ? ಸೋಶಿಯಲ್ ಮೀಡಿಯಾದಲ್ಲಿ ಯಾವ ರೀತಿಯ ಇಮೇಜ್ ಸೃಷ್ಟಿ ಆಗುತ್ತಿದೆ ಎಂಬುದು ಕೂಡ ಗೊತ್ತಿರುವುದಿಲ್ಲ. ತಮ್ಮ ಆಟದ ವೈಖರಿ ಜನರಿಗೆ ಇಷ್ಟ ಆಗುತ್ತಿದೆಯಾ ಅಥವಾ ಇಲ್ಲವಾ ಎಂಬ ನಿಖರ ಮಾಹಿತಿಯೂ ಸಿಗುವುದಿಲ್ಲ. ಆದರೆ ಈ ಬಾರಿ ಬಿಗ್ ಬಾಸ್ನಲ್ಲಿ ಒಂದು ಟ್ವಿಸ್ಟ್ ನೀಡಲಾಗಿದೆ. ಹೊರಗಿನಿಂದ ವ್ಯಕ್ತಿಯೊಬ್ಬರು ಬಿಗ್ ಬಾಸ್ ಮನೆಗೆ ಕರೆ ಮಾಡಿ ಕೆಲವು ಮಾಹಿತಿ ನೀಡಿದ್ದಾರೆ.
ಹೌದು, ಮಾಜಿ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ಫೋನ್ ಮಾಡಿದ್ದಾರೆ. ಪತ್ನಿ ಮಾನಸಾ ಜೊತೆ ಮಾತನಾಡಿದ್ದಾರೆ. ದೊಡ್ಮನೆಯಲ್ಲಿ ಇರುವ ಕೆಲವು ಸ್ಪರ್ಧಿಗಳಿಗೆ ಅವರು ಒಂದಷ್ಟು ವಿಚಾರವನ್ನು ಮುಟ್ಟಿಸಿದ್ದಾರೆ. ಹೀಗೆ ಮಾತನಾಡುವಾಗ ಭವ್ಯಾ ಮತ್ತು ಐಶ್ವರ್ಯಾ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ.
ಪತ್ನಿ ಮಾನಸಾ ಜೊತೆ ಫೋನ್ನಲ್ಲಿ ಮಾತನಾಡುವಾಗ ತುಕಾಲಿ ಸಂತೋಷ್ ಈ ರೀತಿ ಹೇಳಿದರು. ‘ಭವ್ಯಾ ಮತ್ತು ಐಶ್ವರ್ಯಾ ಮನಸ್ಸು ಮಾಡಿದರೆ ಇಡೀ ಸೀಸನ್ ಗೆಲ್ಲಬಹುದು. ಅವರಿಬ್ಬರು ಅಷ್ಟು ಸ್ಟ್ರಾಂಗ್ ಇದ್ದಾರೆ. ಆದರೆ ಒಂದು ಸಲ ಆಡುತ್ತಾರೆ, ಇನ್ನೊಂದು ಸಲ ಆಫ್ ಆಗುತ್ತಾರೆ. ಅವರಿಬ್ಬರು ಮನಸ್ಸು ಮಾಡಿದರೆ ಫಿನಾಲೆಯ ಟಾಪ್ 2 ಸ್ಪರ್ಧಿಗಳು ಅವರೇ ಆಗಿರುತ್ತಾರೆ. ಬೇಕಾದರೆ ಇದನ್ನು ನಾನು ಬರೆದುಕೊಡಬಲ್ಲೆ. ಅವರಿಗೆ ಹೋಗಿ ಹೇಳು.. ಅವರೇ ತಮ್ಮ ಎನರ್ಜಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ತುಕಾಲಿ ಸಂತೋಷ್.
ಇದನ್ನೂ ಓದಿ: ‘ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ’: ಜಗದೀಶ್ಗೆ ಚೈತ್ರಾ ಕ್ಲಾಸ್
ಅದೇ ರೀತಿ, ಲಾಯರ್ ಜಗದೀಶ್ ಅವರಿಗೂ ತುಕಾಲಿ ಸಂತೋಷ್ ಮೆಸೇಜ್ ನೀಡಿದ್ದಾರೆ. ‘ಜಗದೀಶ್ ಅವರು ಸೂಪರ್ ಆಗಿ ಆಡ್ತಾ ಇದ್ದಾರೆ. ಯಾರನ್ನೂ ಅವರು ಮೇಲೆ ಬರೋಕೆ ಬಿಡುತ್ತಿಲ್ಲ. ಎಲ್ಲರ ಕಂಟೆಂಟ್ಗಳನ್ನು ಆಯಪ್ಪನೇ ತಿಂದುಕೊಂಡು ಹೀರೋ ಆಗಿದ್ದಾರೆ. ಅವರು ಎಲ್ಲರನ್ನೂ ಓವರ್ಟೇಕ್ ಮಾಡಿಕೊಂಡು ಕಿಂಗ್ ಆಗಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರೂ ಕಾಣಿಸುತ್ತಿಲ್ಲ. ಅವರೇ ಕಿಂಗ್ ಅಲ್ಲಿ’ ಎಂದು ಪತ್ನಿ ಮಾನಸಾ ಬಳಿ ತುಕಾಲಿ ಸಂತೋಷ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.