ತುಕಾಲಿ ಸಂತೋಷ್ (Tukali Santosh) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಸೇರಿದರಂತೂ ಕಾಂಬಿನೇಷನ್ ಭರ್ಜರಿಯಾಗಿ ಇರುತ್ತದೆ. ಈಗ ಕಾರ್ತಿಕ್ ಅವರ ತುಟಿಗೆ ಮುತ್ತಿಡುವ ಪ್ರಯತ್ನ ಮಾಡಿದ್ದಾರೆ ತುಕಾಲಿ ಸಂತೋಷ್. ಇದನ್ನು ನೋಡಿ ಕಾರ್ತಿಕ್ ಅವರು ವಾಕರಿಕೆ ಮಾಡಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಡಿಸೆಂಬರ್ 26ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ನೀಡಲಾಯಿತು. ಅದುವೇ ಪೌಸ್ ಹಾಗೂ ಪ್ಲೇ. ಪೌಸ್ ಎಂದಾಗ ಎಲ್ಲರೂ ಹೇಗಿದ್ದಾರೋ ಹಾಗೆಯೇ ನಿಲ್ಲಬೇಕು. ಪ್ಲೇ ಎಂದಾಗ ಮುಂದುವರಿಯಬೇಕು. ಕಾರ್ತಿಕ್ಗೆ ಪೌಸ್ ಎಂದರು ಬಿಗ್ ಬಾಸ್. ಕಾರ್ತಿಕ್ ಅವರು ಸ್ಟ್ಯಾಚ್ಯೂ ತರ ನಿಂತರು. ಅಲ್ಲಿಯೇ ಇದ್ದ ತುಕಾಲಿ ಸಂತೋಷ್ ಅವರು ಮಹಿಳಾ ಸ್ಪರ್ಧಿಯಿಂದ ಲಿಪ್ಸ್ಟಿಕ್ ತೆಗೆದುಕೊಂಡು ಬಂದಿದ್ದಾರೆ.
ತುಟಿಗೆ ಲಿಪ್ಸ್ಟಿಕ್ ಹಚ್ಚಿಕೊಂಡು ಕಾರ್ತಿಕ್ ತುಟಿಗೆ ಮುತ್ತಿಡಲು ಹೋಗಿದ್ದಾರೆ. ಆ ಮುತ್ತು ತುಟಿಯ ಬದಲು ಕೆನ್ನೆಗೆ ಬಿದ್ದಿದೆ. ಸ್ವಲ್ಪ ತುಟಿಗೂ ತಾಗಿದೆ. ‘ತುಟಿಗೆ ಮುತ್ತು ಕೊಟ್ಟಿಲ್ಲ ನೀವು’ ಎಂದು ನಮ್ರತಾ ಹೇಳಿದರು. ಆ ಬಳಿಕ ತುಕಾಲಿ ಸಂತೋಷ್ ಅವರಿಗೂ ಪೌಸ್ ಎಂದು ಹೇಳಲಾಯಿತು. ಆಗ ಕೆಲವರು ತುಕಾಲಿ ಸಂತೋಷ್ ಅವರ ಶರ್ಟ್ ಒಳಗೆ ಐಸ್ ಹಾಕಿದರು.
ಇದನ್ನೂ ಓದಿ:‘ಸಂಗೀತಾ ಕಳಪೆ, ವಿನಯ್ ಉತ್ತಮ’: ಮುಖಕ್ಕೆ ಹೊಡೆದಂತೆ ಹೇಳಿದ ಕಾರ್ತಿಕ್ ಮಹೇಶ್
ಕೊನೆಗೆ ಕಾರ್ತಿಕ್ಗೆ ಪ್ಲೇ ಎಂದರು. ತುಕಾಲಿ ಸಂತೋಷ್ ಕಿಸ್ ಕೊಟ್ಟಿದ್ದನ್ನು ನೆನಪಿಸಿಕೊಂಡು ಅವರಿಗೆ ವಾಕರಿಕೆ ಬಂತು. ಹೀಗಾಗಿ ಅವರು ಸಿಂಕ್ ಬಳಿ ಹೋಗಿ ಬಾಯಿ ತೊಳೆದುಕೊಂಡರು. ಅಲ್ಲದೆ, ‘ಥೂ.. ಥೂ..’ ಎಂದು ಉಗಿದುಕೊಂಡರು. ಬಿಗ್ ಬಾಸ್ ಮನೆಯಲ್ಲಿ ಈ ವಾರ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸಿಂಗ್ ಆಗಿತ್ತು. ಕುಟುಂಬದವರು ದೊಡ್ಮನೆಗೆ ಬಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ