ಕಿರುತೆರೆ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ; ಇಲ್ಲಿದೆ ಮೊದಲ ಫೋಟೋ
‘ಅಗ್ನಿಸಾಕ್ಷಿ’, ‘ಸೀತಾ ರಾಮ’ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಏರ್ ಫೋರ್ಸ್ ಆಫೀಸರ್ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಮದುವೆ ನೆರವೇರುತ್ತಿದೆ. ವಿವಾಹಪೂರ್ವ ಶಾಸ್ತ್ರಗಳು ಈಗಾಗಲೇ ಆರಂಭ ಆಗಿದ್ದು, ಫೋಟೋಗಳನ್ನು ವೈಷ್ಣವಿ ಗೌಡ ಅವರು ಹಂಚಿಕೊಂಡಿದ್ದಾರೆ.

ನಟಿ ವೈಷ್ಣವಿ ಗೌಡ (Vaishnavi Gowda) ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲವು ವಾರಗಳ ಹಿಂದೆ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆಗೆ (Vaishnavi Gowda Marriage) ಸಕಲ ಸಿದ್ಧತೆ ನಡೆದಿದೆ. ಈಗಾಗಲೇ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ (Anukool Mishra) ಅವರ ಮನೆಯಲ್ಲಿ ವಿವಾಹಪೂರ್ವ ಶಾಸ್ತ್ರಗಳು ಆರಂಭ ಆಗಿವೆ. ವೈಷ್ಣವಿ ಗೌಡ ಅವರು ಹಳದಿ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ವೈಷ್ಣವಿ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಹಲವು ವರ್ಷಗಳಿಂದ ವೈಷ್ಣವಿ ಗೌಡ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸೀರಿಯಲ್ ಮತ್ತು ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಕೂಡ ವೈಷ್ಣವಿ ಗೌಡ ಅವರು ಗಮನ ಸೆಳೆದರು. ‘ನಿಮ್ಮ ಮದುವೆ ಯಾವಾಗ’ ಎಂಬ ಪ್ರಶ್ನೆ ಅವರಿಗೆ ಆಗಾಗ ಕೇಳಿಬರುತ್ತಿತ್ತು. ಅದಕ್ಕೆ ಈಗ ಸಮಯ ಬಂದಿದೆ. ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಏರ್ ಫೋರ್ಸ್ನಲ್ಲಿ ಅನುಕೂಲ್ ಮಿಶ್ರಾ ಅವರು ಕೆಲಸ ಮಾಡುತ್ತಾರೆ. ಅವರು ಉತ್ತರ ಭಾರತದ ಛತ್ತಿಸ್ಗಡದವರು. ಅಂದಹಾಗೆ, ಇದು ಅರೇಂಜ್ ಮ್ಯಾರೇಜ್. ಕುಟುಂಬದವರೇ ಮಾತುಕಥೆ ಮಾಡಿ ನಿಶ್ಚಯಿಸಿದ ಮದುವೆ. ಈ ಮೊದಲು ವೈಷ್ಣವಿ ಅವರಿಗೆ ನೂರಾರು ಪ್ರಪೋಸಲ್ಗಳು ಬಂದಿದ್ದವು. ಅಂತಿಮವಾಗಿ ಅವರು ಅನುಕೂಲ್ ಮಿಶ್ರಾ ಜೊತೆ ಮದುವೆ ಆಗಲು ನಿರ್ಧರಿಸಿದರು.
View this post on Instagram
ಕಿರುತೆರೆಯಲ್ಲಿ ವೈಷ್ಣವಿ ಗೌಡ ಅವರಿಗೆ ತುಂಬ ಬೇಡಿಕೆ ಇದೆ. ಮದುವೆ ಬಳಿಕ ಕೂಡ ವೈಷ್ಣವಿ ಗೌಡ ಅವರು ನಟನೆ ಮುಂದುವರಿಸುವುದಾಗಿ ಹೇಳಿದ್ದಾರೆ. ಅವರ ಈ ಆಸೆಗೆ ಅನುಕೂಲ್ ಮಿಶ್ರಾ ಕೂಡ ಬೆಂಬಲ ಸೂಚಿಸಿದ್ದಾರೆ.
‘ಅಗ್ನಿಸಾಕ್ಷಿ’, ‘ಸೀತಾ ರಾಮ’ ಮುಂತಾದ ಧಾರಾವಾಹಿಗಳಲ್ಲಿ ವೈಷ್ಣವಿ ಗೌಡ ನಟಿಸಿದ್ದಾರೆ. ಆ ಮೂಲಕ ಅಭಿಮಾನಿಗಳನ್ನು ಅವರು ರಂಜಿಸಿದ್ದಾರೆ.
ಇದನ್ನೂ ಓದಿ: ಬರಲಿದೆ ‘ಸೀತಾ ರಾಮ 2’; ಕ್ಲೈಮ್ಯಾಕ್ಸ್ನಲ್ಲಿ ಸಿಕ್ತು ಅಪ್ಡೇಟ್
ವೈಷ್ಣವಿ ಗೌಡ ಅವರಿಗೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಮದುವೆಗೆ ಅವರೆಲ್ಲರೂ ಹಾಜರಿ ಹಾಕಲಿದ್ದಾರೆ. ಈಗ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:13 pm, Mon, 2 June 25