ವರ್ತೂರು ಸಂತೋಷ್ (Varthur Santosh) ಅವರು ಈಗ ಫಿನಾಲೆ ತಲುಪಿದ್ದಾರೆ. ಆರು ಸ್ಪರ್ಧಿಗಳ ಪೈಕಿ ಅವರು ಕೂಡ ಇದ್ದಾರೆ. ಆರಂಭದಲ್ಲಿ ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದರು. ಅವರು ಹೊರಗೆ ಹೋಗಿದ್ದು ಏಕೆ ಎಂಬ ವಿಚಾರ ದೊಡ್ಮನೆಯವರಿಗೆ ಗೊತ್ತಿರಲಿಲ್ಲ. ಈಗ ಫಿನಾಲೆ ದಿನ ಈ ವಿಚಾರವನ್ನು ಸುದೀಪ್ ಅವರು ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ. ಇದರ ಜೊತೆ ಮದುವೆ ವಿಚಾರವೂ ಚರ್ಚೆಗೆ ಬಂದಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಫಿನಾಲೆ ಎಪಿಸೋಡ್ ಪ್ರಸಾರ ಕಾಣುತ್ತಿದೆ.
‘ಇಡೀ ಮನೆಯಲ್ಲಿ ಒಂದು ಗುಟ್ಟು ಇದೆ. ಹೊರ ಜಗತ್ತಿಗೆ ಆ ಗುಟ್ಟು ಗೊತ್ತಿದೆ. ಮನೆಯ ಒಂದು ಸ್ಪರ್ಧಿಗೆ ಮಾತ್ರ ಅದು ಗೊತ್ತಿದೆ. ಉಳಿದ ಯಾರಿಗೂ ಆ ಗುಟ್ಟು ತಿಳಿದಿಲ್ಲ, ಏನದು?’ ಎಂದು ಸುದೀಪ್ ಕೇಳಿದರು. ಮನೆಯವರಿಗೆ ಇದನ್ನು ಕೇಳಿ ಗೊಂದಲ ಆಯಿತು. ಸುದೀಪ್ ಅವರು ‘ವರ್ತೂರು ಅವರೇ’ ಎಂದು ಹೇಳಿದರು. ಆಗ ವರ್ತೂರು ಸಂತೋಷ್ ಅವರಿಗೆ ಇದು ತಮ್ಮದೇ ವಿಚಾರ ಎಂಬುದು ಗೊತ್ತಾಯಿತು.
‘ವರ್ತೂರು ಸಂತೋಷ್ ಅವರು ಒಂದು ವಾರ ಹೊರಗೆ ಹೋಗಿ ಬಂದರು. ಮನೆಯಲ್ಲಿರುವ ಯಾರಿಗೂ ಇದಕ್ಕೆ ಕಾರಣ ಗೊತ್ತಿಲ್ಲ. ಹೊರ ಬಂದು ಎಲ್ಲವನ್ನೂ ತಿಳಿದುಕೊಂಡು ಹೋದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದಲ್ಲ. ಏನಾಗಿತ್ತು ಹೇಳಿ’ ಎಂದು ಸುದೀಪ್ ಹೇಳಿದರು. ಈ ಮಾತು ಕೇಳುತ್ತಿದ್ದಂತೆ ವರ್ತೂರು ಸಂತೋಷ್ ಅವರು ಕಣ್ಣೀರು ಹಾಕಿದರು.
‘ವರ್ತೂರು ಅವರ ಕತ್ತಿನಲ್ಲಿ ಒಂದು ಪೆಂಡೆಂಟ್ ಇತ್ತು. ಅದು ಧರಿಸುವಂತಿರಲಿಲ್ಲ. ಈ ಕಾರಣಕ್ಕೆ ಅವರನ್ನು ಹೊರಗೆ ಕರೆತರಲಾಯಿತು. ಅವರು ಜೈಲು ಸೇರಿದರು. ಬಿಗ್ ಬಾಸ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರು ಒಂದು ವಾರ ಜೈಲಿನಲ್ಲಿ ಇದ್ದರು. ಸಾಕಷ್ಟು ಅನುಭವಿಸಿಕೊಂಡು ಬಂದ್ರು. ಅವರು ನಿಜಕ್ಕೂ ಸ್ಟ್ರಾಂಗ್’ ಎಂದರು ಸುದೀಪ್. ಕಿಚ್ಚ ಹೇಳಿದ ವಿಚಾರ ಕೇಳಿ ಅನೇಕರಿಗೆ ಶಾಕ್ ಆಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ಆರಂಭದಲ್ಲೇ ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಮನೆಯವರ ಕಣ್ಣೀರು
ವರ್ತೂರು ಸಂತೋಷ್ ಅವರ ಸಂಸಾರ ಈಗಾಗಲೇ ಮುರಿದು ಬಿದ್ದಿದೆ. ಆ ವಿಚಾರ ಬಿಗ್ ಬಾಸ್ನಲ್ಲೂ ಚರ್ಚೆ ಆಗಿದೆ. ಸುದೀಪ್ ಅವರು ವರ್ತೂರು ಸಂತೋಷ್ ಮದುವೆ ಬಗ್ಗೆ ಫಿನಾಲೆಯಲ್ಲಿ ಮಾತನಾಡಿದ್ದಾರೆ. ‘ಈಗೀರೋ ಜನಪ್ರಿಯತೆಗೆ ವರ್ತೂರಿಗೆ ಮೂರು ಮದುವೆ ಆಗುತ್ತದೆ’ ಎಂದರು ಸುದೀಪ್. ಇದಕ್ಕೆ ಉತ್ತರಿಸಿದರು ವರ್ತೂರು ಸಂತೋಷ್ ತಾಯಿ, ‘ಆದ್ರೆ ಆಗಲಿ ಸರ್. ಸಾಮರ್ಥ್ಯ ಇದ್ರೆ ಆಗ್ಲಿ’ ಎಂದರು . ಆಗ ಎಲ್ಲರೂ ತನಿಷಾ ಅತ್ತ ನೋಡಿದರು. ತನಿಷಾ ಅವರು ನಾಚಿ ನೀರಾದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ