ರಿಯಾಲಿಟಿ ಶೋಗೆ ಬರಲ್ಲ, ಬರಲ್ಲ ಅಂತ ಬಂದೇ ಬಿಟ್ರು ನಟಿ ಸುಧಾರಾಣಿ

ಹಿರಿಯ ನಟಿ ಸುಧಾರಾಣಿ ಬಿಗ್ ಬಾಸ್ ಸ್ಪರ್ಧಿಯಾಗುವ ಬಗ್ಗೆ ಹರಿದಾಡುತ್ತಿದ್ದ ವದಂತಿಗಳನ್ನು ಅವರು ನಿರಾಕರಿಸಿದ್ದಾರೆ.ಈಗ ಅವರು ಹೊಸ ಶೋ ಒಂದರ ಭಾಗ ಆಗಿದ್ದಾರೆ. ಆ ಶೋನಲ್ಲಿದ್ದ ಡ್ಯಾನ್ಸ್ ಸ್ಪರ್ಧೆಯ ಭಾಗ ಆಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಹಳ್ಳಿ ಜನರೊಂದಿಗೆ ಸಮಯ ಕಳೆದಿದ್ದಾರೆ.

ರಿಯಾಲಿಟಿ ಶೋಗೆ ಬರಲ್ಲ, ಬರಲ್ಲ ಅಂತ ಬಂದೇ ಬಿಟ್ರು ನಟಿ ಸುಧಾರಾಣಿ
ಸುಧಾರಾಣಿ

Updated on: Sep 15, 2025 | 6:58 AM

ನಟಿ ಸುಧಾರಾಣಿ (Sudharani) ಅವರು ಕನ್ನಡ ಚಿತ್ರರಂಗದ ಹಿರಿಯ ನಟಿ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಅವರು ಸಿನಿಮಾಗಳ ಜೊತೆಗೆ ಕಿರುತೆರೆ ಜೊತೆಗೂ ನಂಟು ಬೆಳೆಸಿಕೊಂಡಿದ್ದಾರೆ. ಅವರು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿಸಿದದ್ದರು. ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈ ವಿಷಯವನ್ನು ಅವರೇ ಅಲ್ಲ ಗಳೆದಿದ್ದರು. ಈಗ ಅವರು ರಿಯಾಲಿಟಿ ಶೋ ಒಂದರ ಭಾಗ ಆಗಿದ್ದಾರೆ. ಹಾಗಂತ ಅದು ಬಿಗ್ ಬಾಸ್ ಅಲ್ಲ, ‘ಹಳ್ಳಿ ಪವರ್’ ಶೋ.

ಜೀ ಪವರ್​ನಲ್ಲಿ ‘ಹಳ್ಳಿ ಪವರ್’ ಶೋ ಪ್ರಸಾರ ಕಾಣುತ್ತಿದೆ. ಈ ಶೋ ಬೆಳಗಾವಿಯ ಸಂಗೊಳ್ಳಿ ಹಳ್ಳಿಯಲ್ಲಿ ನಡೆಯುತ್ತಿದೆ. ಸಿಟಿ ಹುಡುಗಿಯರ ಶೋನ ಭಾಗ ಆಗಿದ್ದಾರೆ. ಕಳೆದ ವಾರಾಂತ್ಯದಲ್ಲಿ ಡ್ಯಾನ್ಸ್ ಸ್ಪರ್ಧೆ ಇತ್ತು. ಹಳ್ಳಿಯವರಲ್ಲಿ ಒಬ್ಬರನ್ನು ತೆಗೆದುಕೊಂಡು ಡ್ಯಾನ್ಸ್ ಮಾಡಬೇಕಿತ್ತು. ಈ ಶೋಗೆ ಸುಧಾರಾಣಿ ಅವರು ಜಡ್ಜ್ ಆಗಿ ಬಂದಿದ್ದರು. ಅವರು ಬಂದು ಶೋನ ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ
ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಆಕ್ರೋಶ; ಕಪಿಲ್ ಶೋ ನಿಲ್ಲಿಸೋ ಎಚ್ಚರಿಕೆ
‘ನೀವು ಊಹಿಸಿದಂತೆ ಕಥೆ ನಡೆಯಲ್ಲ’; ‘ಕರ್ಣ’ ಬಗ್ಗೆ ಕಿರಣ್ ರಾಜ್ ಹಿಂಟ್
ಜೀ ಕನ್ನಡ ವೇದಿಕೆ ಮೇಲೆ ಅನುಶ್ರೀ ಮಡಿಲು ತುಂಬಿದ ತಾರಾ; ಮಗಳಂತೆ ಭಾವುಕ
‘ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ’; ಅನುಶ್ರೀ

ಸುಧಾರಾಣಿ ಬಗೆಗಿನ ಪೋಸ್ಟ್

ಸುಧಾರಾಣಿ ಅವರು ಹಲವು ದಶಕಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಬಾಲ ನಟಿಯಾಗಿ, ನಟಿಯಾಗಿ, ಈಗ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ನಟನೆ ಹಾಗೂ ನೃತ್ಯದಲ್ಲಿ ಅವರ ಅನುಭವ ಅಪಾರ. ಈ ಕಾರಣದಿಂದಲೇ ಅವರನ್ನು ಜಡ್ಜ್ ಸ್ಥಾನದಲ್ಲಿ ಕೂರಿಸಲಾಗಿತ್ತು. ಮಳೆಯ ಮಧ್ಯೆಯೂ ಅವರು ಕೂಡ ಡ್ಯಾನ್ಸ್ ಮಾಡಿದ್ದಾರೆ. ಜಡ್ಜ್ ಸ್ಥಾನದಲ್ಲಿ ಕುಳಿತು ಎಲ್ಲರಿಗೂ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಸುಧಾರಾಣಿ ಬಿಗ್ ಬಾಸ್​ಗೆ ಬರ್ತಾರೆ ಎಂದ ಟ್ರೋಲ್​ ಪೇಜ್​ಗಳಿಗೆ ಮೀಮ್​ ಸ್ಟೈಲ್​ನಲ್ಲಿ ಉತ್ತರಿಸಿದ ನಟಿ

ಬಿಗ್ ಬಾಸ್ ರೂಮರ್ಸ್

ಬಿಗ್ ಬಾಸ್​ಗೆ ಸುಧಾರಾಣಿ ತೆರಳುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ಅವರೇ ಅಲ್ಲ ಗಳೆದಿದ್ದರು. ಮೀಮ್ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ಅಲ್ಲ ಗಳೆದಿದ್ದರು. ಟ್ರೋಲ್ ಪೇಜ್​ಗಳಲ್ಲಿ ಹಾಕಲಾದ ಪೋಸ್ಟ್ ಹಾಕಿ ಆ ಬಳಿಕ ಅವರದ್ದೇ ಸಿನಿಮಾ ಒಂದರ ‘ಯಾರ್ ಹೇಳಿದ್ದು’ ಎಂಬ ಡೈಲಾಗ್​ನ ಸೇರಿಸಿ ವಿಡಿಯೋ ಮಾಡಿದ್ದರು. ಅವರು ದೊಡ್ಮನೆಗೆ ಬರಲಿ ಎಂದು ಅನೇಕರು ಕೋರಿಕೊಳ್ಳುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.