AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಳಿಯಲು ಯತ್ನಿಸಿದವರ ಎದುರೇ ಗೆದ್ದು ತೋರಿಸಿದ ಸಂಜನಾ, ಮನೆ ಮಂದಿಗೆ ಶಾಕ್

Sanjana Galrani: ಬಿಗ್​​ಬಾಸ್ ತೆಲುಗು ಸೀಸನ್ 09ರಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಒಳ್ಳೆಯ ಆಟವಾಡುತ್ತಿದ್ದಾರೆ. ಮೊದಲ ವಾರ ಸಾಕಷ್ಟು ಅಬ್ಬರಿಸಿದ ಸಂಜನಾಗೆ ಇಡೀ ಮನೆಯ ಸ್ಪರ್ಧಿಗಳು ವಿರೋಧಿಗಳಾಗಿದ್ದಾರೆ. ಇಡೀ ಮನೆ, ಸಂಜನಾರನ್ನು ಒಬ್ಬಂಟಿ ಮಾಡಿದೆ. ಅಷ್ಟೆಲ್ಲಾ ವಿರೋಧದ ನಡುವೆಯೂ ಸಂಜನಾ ಸಾಧನೆ ಮಾಡಿದ್ದಾರೆ. ಮನೆಯ ಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸಿದ್ದಾರೆ.

ತುಳಿಯಲು ಯತ್ನಿಸಿದವರ ಎದುರೇ ಗೆದ್ದು ತೋರಿಸಿದ ಸಂಜನಾ, ಮನೆ ಮಂದಿಗೆ ಶಾಕ್
Sanjana Galrani
ಮಂಜುನಾಥ ಸಿ.
|

Updated on: Sep 14, 2025 | 3:57 PM

Share

ತೆಲುಗು ಬಿಗ್​​ಬಾಸ್ (Telugu Bigg Boss)​​ ಮನೆಯಲ್ಲಿ ಸಂಜನಾ ಗಲ್ರಾನಿ ಸಖತ್ ಹವಾ ಎಬ್ಬಿಸಿದ್ದಾರೆ. ಮೊದಲ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸಂಜನಾ ಸದ್ದು, ಸುದ್ದಿ ಮಾಡುತ್ತಲೇ ಇದ್ದಾರೆ. ಮೊದಲ ದಿನ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದ ಸಂಜನಾ, ಎರಡನೇ ದಿನಕ್ಕೆ ತಮ್ಮ ಆಟ ಶುರು ಮಾಡಿದರು. ಮನೆಯ ಸದಸ್ಯರೆಲ್ಲರೂ ವೀಕ್ಷಕರ ಮೆಚ್ಚಿಸಲು ಮುಖವಾಡ ಧರಿಸಿ ವರ್ತಿಸುತ್ತಿದ್ದರೆ ಸಂಜನಾ ಮಾತ್ರ, ಯಾವುದರ ಪರಿವೆ ಇಲ್ಲದೆ ತಮಗೆ ಅನಿಸಿದ್ದನ್ನು ಯಾವ ಮುಲಾಜಿಗೂ ಸಿಗದೆ ಮಾತನಾಡಿದರು. ಇದರಿಂದಾಗಿ ಇಡೀ ಮನೆಯ ವಿರೋಧ ಕಟ್ಟಿಕೊಂಡರು.

ಸಾಮೂಹಿಕ ನಾಮಿನೇಷನ್ ಮಾಡಬೇಕು ಎಂದು ಬಿಗ್​​ಬಾಸ್ ಹೇಳಿದಾಗ ಇಡೀ ಮನೆಯೇ ಒಂದಾಗಿ ಸಂಜನಾ ಅವರನ್ನು ನಾಮಿನೇಟ್ ಮಾಡಿತು. ಆದರೂ ಛಲ ಬಿಡದ ಸಂಜನಾ, ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ತಪ್ಪನ್ನು ತಪ್ಪೆಂದು, ಸರಿಯನ್ನು ಸರಿ ಎಂದರು. ಮಾತ್ರವಲ್ಲದೆ ತಮ್ಮದು ತಪ್ಪು ಎನಿಸಿದಾಗ ತಮಗಿಂತಲೂ ಕಿರಿಯ ಕ್ಷಮೆ ಸಹ ಕೇಳಿದರು. ಮನೆಯ ಸದಸ್ಯರೆಲ್ಲರೂ ಸಂಜನಾ ವಿರುದ್ಧ ದೂರು, ಪಿತೂರಿ ಮಾಡುತ್ತಿರುವ ಹೊತ್ತಿನಲ್ಲಿ ಬಿಗ್​​ಬಾಸ್ ಸ್ವತಃ ಸಂಜನಾರ ಆಟವನ್ನು ಮೆಚ್ಚಿ ಕೊಂಡಾಡಿದರು. ಮಾತ್ರವಲ್ಲದೆ ಹೀಗೆಯೇ ಆಟವಾಡುತ್ತಿರಿ ಎಂದು ಸಲಹೆ ಸಹ ಕೊಟ್ಟು, ವಿಶೇಷ ಪವರ್ ಅನ್ನು ಸಹ ನೀಡಿದರು.

ಇಡೀ ಮನೆಯೇ ತಮ್ಮ ಎದುರು ನಿಂತಿರುವಾಗ ಒಬ್ಬಂಟಿಯಾದ ಸಂಜನಾ ಕುಗ್ಗುವ ಬದಲಿಗೆ ಅದನ್ನೇ ಸವಾಲಾಗಿ ಸ್ವೀಕರಿಸಿ ಇಡೀ ಮನೆಯನ್ನೇ ಮಣಿಸಿದ್ದಾರೆ. ಬಿಗ್​ಬಾಸ್ ತೆಲುಗು ಸೀಸನ್ 9ರ ಮೊಟ್ಟ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಸಂಜನಾ ಈ ವಾರ ಆಡಿದ ರೀತಿಗೆ ತೆಲುಗು ಪ್ರೇಕ್ಷಕರು ಉಘೆ ಎಂದಿದ್ದಾರೆ. ಈಗಿನ ಸನ್ನಿವೇಶದಲ್ಲಿ ಸಂಜನಾ, ತೆಲುಗು ಬಿಗ್​​ಬಾಸ್​​ನ ಫೇವರೇಟ್ ಸ್ಪರ್ಧಿ ಆಗಿಬಿಟ್ಟಿದ್ದಾರೆ. ಸಂಜನಾ ಪರವಾಗಿ ವೀಕ್ಷಕರು ನಿಂತಿದ್ದಾರೆ.

ಇದನ್ನೂ ಓದಿ:ತೆಲುಗು ಬಿಗ್​​ಬಾಸ್​​ನಲ್ಲಿ ಸಂಜನಾ ಗಲ್ರಾನಿಗೆ ಸಿಗುತ್ತಿರುವ ಸಂಭಾವನೆ ಎಷ್ಟು?

ಸಂಜನಾ, ಇಮಾನ್ಯುಯೆಲ್, ಶಾಸ್ತ್ರಿ, ಹರೀಶ್, ಡೀಮನ್ ಪವನ್ ಅವರುಗಳ ಪರವಾಗಿ ದಮ್ಮು ಶ್ರೀಜಾ, ಭರಣಿ, ರಾಮು ರಾಥೋಡ್, ಕಲ್ಯಾಣಿ, ಪ್ರಿಯ ಅವರುಗಳು ಟಾಸ್ಕ್​​​ನಲ್ಲಿ ಭಾಗಿ ಆದರು. ಸಂಜನಾ ಪರವಾಗಿ ಸ್ಪರ್ಧೆಗೆ ಇಳಿದಿದ್ದ ಶ್ರೀಜಾ ಕ್ಲಿಷ್ಟಕರವಾದ ಟಾಸ್ಕ್​​​ನಲ್ಲಿ ಗೆದ್ದು ಸಂಜನಾ ಮನೆಯ ಕ್ಯಾಪ್ಟನ್ ಆದರು. ಇದು ಹಲವರಿಗೆ ಬೇಸರ ತರಿಸಿದೆ. ಸಂಜನಾರ ವಿರುದ್ಧ ಪಿತೂರಿ ಮಾಡಿದ್ದ ಕೆಲ ಸ್ಪರ್ಧಿಗಳಿಗೆ ನಡುಕ ಶುರುವಾಗಿದೆ.

ಶನಿವಾರದ ಎಪಿಸೋಡ್​​ಗೆ ಬಂದ ನಾಗಾರ್ಜುನ ಸಹ ಸಂಜನಾರ ಆಟವನ್ನು ಅವರ ವರ್ತನೆಯನ್ನು ಹೊಗಳಿದ್ದಾರೆ. ಅದೇ ಆಟವನ್ನು ಮುಂದುವರೆಸುವಂತೆ ಹೇಳಿದ್ದಾರೆ. ಜೊತೆಗೆ ಸೀಸನ್​​ನ ಮೊದಲ ಕ್ಯಾಪ್ಟನ್ ಆಗಿದ್ದಕ್ಕೆ ಭೇಷ್ ಎಂದಿದ್ದಾರೆ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ