‘ಸಾಮರ್ಥ್ಯ ತೋರಿಸಲು ವಿಫಲರಾದರು’; ತಮ್ಮ ಗ್ರೂಪ್​ನವರು ಹೊರಹೋಗಲು ಕಾರಣ ನೀಡಿದ ವಿನಯ್

ವಿನಯ್ ಗೌಡ ಗ್ರೂಪ್​ನ ಎಲ್ಲಾ ಸದಸ್ಯರು ಔಟ್ ಅಗಿದ್ದಾರೆ. ಇದು ಅವರಿಗೆ ಚಿಂತೆ ಉಂಟು ಮಾಡಿದೆ. ಎಲ್ಲರೂ ಹೊರ ಹೋಗಲು ಕಾರಣ ಏನಿರಬಹುದು ಎಂಬುದನ್ನು ವಿನಯ್ ಗೌಡ ಅವರು ವಿವರಿಸಿದ್ದಾರೆ. ಜನವರಿ 23ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

‘ಸಾಮರ್ಥ್ಯ ತೋರಿಸಲು ವಿಫಲರಾದರು’; ತಮ್ಮ ಗ್ರೂಪ್​ನವರು ಹೊರಹೋಗಲು ಕಾರಣ ನೀಡಿದ ವಿನಯ್
ಈಶಾನಿ, ವಿನಯ್, ನಮ್ರತಾ
Follow us
ರಾಜೇಶ್ ದುಗ್ಗುಮನೆ
|

Updated on: Jan 24, 2024 | 8:02 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಆರಂಭ ಆದ ಕೆಲವೇ ವಾರಗಳಲ್ಲಿ ವಿನಯ್ ಅವರು ತಮ್ಮದೇ ಗ್ರೂಪ್ ಮಾಡಿಕೊಂಡಿದ್ದರು. ಅವರು ಈ ಗ್ರೂಪ್​ನ ನೇತೃತ್ವ ವಹಿಸಿಕೊಂಡಿದ್ದರು. ಆ ಗುಂಪಿನ ಎಲ್ಲಾ ಸದಸ್ಯರು ವಿನಯ್​​ಗೆ ‘ಜೈ ಜೈ’ ಎನ್ನುತ್ತಾ ಬಂದರು. ಆದರೆ, ಈಗ ಅವರು ಯಾರೂ ಉಳಿದುಕೊಂಡಿಲ್ಲ. ಸದ್ಯ ಆ ಟೀಂನಲ್ಲಿರೋದು ವಿನಯ್ ಮಾತ್ರ. ಇದು ಅನೇಕರಿಗೆ ಅಚ್ಚರಿ ತರಿಸಿದೆ. ಸ್ವತಃ ವಿನಯ್ ಗೌಡ ಅವರಿಗೂ ತಾವು ಎಡವಿದ್ದು ಎಲ್ಲಿ ಅನ್ನೋದು ತಿಳಿದಿಲ್ಲ. ಉಳಿದ ಸದಸ್ಯರು ಹೊರ ಹೋಗಲು ಕಾರಣ ಏನಿರಬಹುದು ಎನ್ನುವುದಕ್ಕೆ ವಿನಯ್ ಉತ್ತರಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆ ವಾರ ನಡೆಯುತ್ತಿದೆ. ಕೀರ್ತಿ ಹಾಗೂ ಜಾಹ್ನವಿ ಅತಿಥಿಗಳಾಗಿ ದೊಡ್ಮನೆಗೆ ಬಂದಿದ್ದಾರೆ. ಆಗ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಎಲ್ಲಾ ಸ್ಪರ್ಧಿಗಳನ್ನು ಕೂರಿಸಿ ಪ್ರಶ್ನೆ ಮಾಡಲಾಗಿದೆ. ಕೀರ್ತಿ ಅವರು ವಿನಯ್​ಗೆ ಗ್ರೂಪಿಸಂ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿನಯ್ ಅವರು ಯೋಚಿಸಿ ಉತ್ತರಿಸಿದ್ದಾರೆ.

‘ಜೈ ಜೈ ಎಂದವರು ಹೊರಗಿದ್ದಾರೆ. ನಿಮ್ಮನ್ನು ವಿರೋಧಿಸಿದವರು ಇಲ್ಲೇ ಇದ್ದಾರೆ’ ಎಂದು ಕೇಳಿದರು ಕೀರ್ತಿ. ‘ಸಮರ್ಥರು, ಅಸಮರ್ಥರು ಎಂದು ನಮ್ಮ ಜರ್ನಿ ಆರಂಭ ಆಗಿದ್ದು. ಅದು ಗ್ರೂಪ್ ಆಗಿ, ನಂತರ ಫ್ರೆಂಡ್​ಶಿಪ್ ಬೆಳೆಯಿತು. ಈಗ ಗ್ರೂಪ್ ಹೋಗಿದೆ. ಫ್ರೆಂಡ್​ಶಿಪ್ ಉಳಿದುಕೊಂಡಿದೆ’ ಎಂದು ಮಾತು ಆರಂಭಿಸಿದರು ವಿನಯ್. ಜೊತೆಗೆ ಅವರು ಹೊರ ಹೋಗಲು ಕಾರಣ ಏನಿರಬಹುದು ಎಂಬುದನ್ನು ಕೂಡ ವಿವರಿಸಿದ್ದಾರೆ. ‘ಬಹುಶಃ ಅವರು ಆಟದಲ್ಲಿ ಡೈವರ್ಟ್​ ಆಗಿ, ತಮ್ಮ ನಿಜವಾದ ಸಾಮಾರ್ಥ್ಯ ತೋರಿಸಲು ವಿಫಲರಾದರು ಅನಿಸುತ್ತದೆ’ ಎಂದು ಸೂಕ್ತ ಕಾರಣ ನೀಡಿದ್ದಾರೆ.

ವಿನಯ್ ವಿಲನ್ ರೀತಿ ಕಾಣುತ್ತಾರೆ ಅನ್ನೋದು ಅನೇಕರ ಆರೋಪ. ವಿನಯ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ‘ನಾನು ವಿಲನ್ ತರ ಕಾಣ್ತೀನಿ. ನನಗೆ ಅದುವೇ ಇಷ್ಟ. ಇದು ಆ್ಯಂಟಿ ಹೀರೋ ಯುಗ. ನನಗೆ ಆ ರೀತಿ ಗುರುತಿಸಿಕೊಳ್ಳೋಕೆ ಹೆಚ್ಚು ಖುಷಿ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಕ್ಷಮಿಸಿ ವಿನಯ್, ನಿಮ್ಮ ಬಳಗ ಮತ್ತಷ್ಟು ಸಣ್ಣದಾಯಿತು’: ನೇರವಾಗಿ ಹೇಳಿದ ಸುದೀಪ್

ಸದ್ಯ ಆರು ಜನರು ದೊಡ್ಮನೆಯಲ್ಲಿದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಮಧ್ಯೆ ಆಟ ಮುಂದುವರಿದಿದೆ. ಈ ಪೈಕಿ ಒಬ್ಬರು ಎಲಿಮಿನೇಟ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ