AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗೀತಾಗೆ ಯಶ್ ವಿಶ್ ಮಾಡಿದ ವಿಡಿಯೋ ಫೇಕ್; ವೈರಲ್ ವಿಡಿಯೋದ ಅಸಲಿಯತ್ತು ಇಲ್ಲಿದೆ..

ತಮ್ಮ ವಿಶ್​​ಗಳನ್ನು ಹೇಳಿಕೊಳ್ಳೋಕೆ ಬಿಗ್ ಬಾಸ್ ಅವಕಾಶ ಮಾಡಿಕೊಟ್ಟಿದ್ದರು. ಈ ವೇಳೆ ಯಶ್ ಅವರಿಂದ ವಿಶ್ ಬೇಕು ಎಂದು ಸಂಗೀತಾ ಹೇಳಿದ್ದರು. ಈಗ ಯುಶ್ ವಿಶ್ ಮಾಡಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.

ಸಂಗೀತಾಗೆ ಯಶ್ ವಿಶ್ ಮಾಡಿದ ವಿಡಿಯೋ ಫೇಕ್; ವೈರಲ್ ವಿಡಿಯೋದ ಅಸಲಿಯತ್ತು ಇಲ್ಲಿದೆ..
ಸಂಗೀತಾ-ಯಶ್
ರಾಜೇಶ್ ದುಗ್ಗುಮನೆ
|

Updated on:Jan 24, 2024 | 9:28 AM

Share

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡೋ ವಿಚಾರಗಳ ಪೈಕಿ ಯಾವುದು ನಿಜ, ಯಾವುದು ಸುಳ್ಳು ಎಂದು ನೋಡಿದಾಕ್ಷಣ ಹೇಳೋದು ಕಷ್ಟ. ಸ್ವಲ್ಪ ಅಧ್ಯಯನ ಮಾಡಿದಾಗ ಅಸಲಿ ವಿಚಾರ ಗೊತ್ತಾಗುತ್ತದೆ. ಈಗ ಸಂಗೀತಾ ಶೃಂಗೇರಿ (Sangeetha Sringeri) ವಿಚಾರದಲ್ಲೂ ಅದೇ ಆಗಿದೆ. ಅವರಿಗೆ ಯಶ್ ವಿಶ್ ಮಾಡಿದ್ದಾರೆ ಎಂದು ಹೇಳಲಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿ ಫ್ಯಾನ್ಸ್ ಸಂಭ್ರಮಿಸಿದ್ದರು. ಆದರೆ, ಇದು ಸಂಗೀತಾಗೆ ವಿಶ್ ಮಾಡಿದ ವಿಡಿಯೋ ಅಲ್ಲವೇ ಅಲ್ಲ. ಆ ವಿಡಿಯೋದ ಅಸಲಿಯತ್ತು ಇಲ್ಲಿದೆ.

ಇತ್ತೀಚೆಗೆ ತಮ್ಮ ವಿಶ್​​ಗಳನ್ನು ಹೇಳಿಕೊಳ್ಳೋಕೆ ಬಿಗ್ ಬಾಸ್ ಅವಕಾಶ ನೀಡಿದ್ದರು. ಆಗ ಸಂಗೀತಾ ಅವರು ತಮ್ಮ ವಿಶ್ ತಿಳಿಸಿದ್ದರು. ‘ಯಶ್ ಕಡೆಯಿಂದ ವಿಶ್ ಸಿಗಬೇಕು’ ಎಂದು ಅವರು ತಿಳಿಸಿದ್ದರು. ಇದರ ಜೊತೆ ಇನ್ನೂ ಕೆಲವರು ವಿಶ್ ತಿಳಿಸಿದ್ದಾರೆ. ಇದಾದ ಬೆನ್ನಲ್ಲೇ ಯಶ್ ವಿಶ್ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು.

ವಿಡಿಯೋದಲ್ಲಿರೋದೇನು?

‘ಹವಾ ಜೋರಾಗಿದೆ ಅಂತ ಗೊತ್ತಾಯ್ತು. ಎಲ್ಲರೂ ಬಹಳ ಕಷ್ಟ ಪಡುತ್ತಾ ಇದೀರ. ಮೂರು ತಿಂಗಳಿಂದ ಸಂಪರ್ಕ ಕಳೆದುಕೊಂಡು ಹಾರ್ಡ್ ವರ್ಕ್ ಮಾಡಿ ಈ ಹಂತಕ್ಕೆ ಬಂದಿದ್ದೀರಾ. ಫೈನಲ್ಸ್ ನಡೆಯುತ್ತಿದೆ. ನೀವು ನನ್ನ ಅಭಿಮಾನಿ ಅನ್ನೋದು ಗೊತ್ತಾಯ್ತು. ಎಲ್ಲರಿಗೂ ಶುಭವಾಗಲಿ’ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಆದರೆ, ಎಲ್ಲಿಯೂ ಅವರು ಹೆಸರನ್ನು ಉಲ್ಲೇಖಿಸಿರಲಿಲ್ಲ.

View this post on Instagram

A post shared by @sangeetha_official_fan_page

ಇದನ್ನೂ ಓದಿ: ‘ಸಂಗೀತಾ ಮಾಡೋದೆಲ್ಲ ನಾಟಕೀಯವಾಗಿ ಕಾಣುತ್ತದೆ’; ಕಾರಣ ನೀಡಿದ ತನಿಷಾ

ವಿಡಿಯೋ ಅಸಲಿಯತ್ತು..

ಈ ವಿಡಿಯೋ ಅಸಲಿಯತ್ತು ಬೇರೆ ಇದೆ. ಇದು ಸಂಗೀತಾಗೆ ವಿಶ್ ಮಾಡಿದ ವಿಡಿಯೋ ಅಲ್ಲವೇ ಅಲ್ಲ. ಇದು ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್’ನ ನಾಲ್ಕನೇ ಸೀಸನ್ ಸ್ಪರ್ಧಿ ಪ್ರತೀಕ್ಷಾಗೆ ಮಾಡಿದ ವಿಶ್. ಆ ಸೀಸನ್ ಪ್ರಸಾರ ಆಗಿದ್ದು 2018ರಲ್ಲಿ. ಅದನ್ನು ಈಗ ವೈರಲ್ ಮಾಡಲಾಗುತ್ತಿದೆ. ಇಲ್ಲಿ ಮತ್ತೊಂದು ವಿಚಾರ ಗಮನಿಸಬೇಕು. ವಿಶ್ ತಿಳಿಸುವ ವೇಳೆ ಯಶ್ ‘ಕೆಜಿಎಫ್’ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅವರ ಲುಕ್ ನೋಡಿದ ಅನೇಕರಿಗೆ ಇದು ‘ಕೆಜಿಎಫ್’ ಸಂದರ್ಭದ ಲುಕ್ ಅನ್ನೋದು ಗೊತ್ತಾಗಿದೆ. ಹೀಗಾಗಿ, ಇದು ಸಂಗೀತಾಗೆ ವಿಶ್ ಮಾಡಿದ ವಿಡಿಯೋ ಅನ್ನೋದರಲ್ಲಿ ಯಾವುದೇ ಹುರುಳಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:07 am, Wed, 24 January 24

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ