ಸುದೀಪ್ ಬಿಗ್ ಬಾಸ್ ತೊರೆದರೆ ಯಾರಿಗೆ ನಷ್ಟ? ಆಗುವ ಪರಿಣಾಮಗಳೇನು?
‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ಯ 3’ ರಿಯಾಲಿಟಿ ಶೋನ ಸಲ್ಮಾನ್ ಖಾನ್ ನಡೆಸಿಡಿಕೊಡಬೇಕಿತ್ತು. ಆದರೆ, ಅನಿಲ್ ಕಪೂರ್ ಅವರನ್ನು ಕರೆತರಲಾಗಿದೆ. ತಮಿಳಿನ ಬಿಗ್ ಬಾಸ್ಗೆ ನಟ ಕಮಲ್ ಹಾಸನ್ ಅವರು ಗುಡ್ಬೈ ಹೇಳಿದ್ದಾರೆ. ಅದೇ ರೀತಿ ಕನ್ನಡದಲ್ಲೂ ನಿರೂಪಕರನ್ನು ಬದಲಿಸುವ ಆಲೋಚನೆ ವಾಹಿನಿಯವರಿಗೆ ಬಂದಿದೆ ಎಂದು ವರದಿ ಆಗಿದೆ.
ನಟ ಕಿಚ್ಚ ಸುದೀಪ್ ಅವರು ಯಶಸ್ವಿ ನಿರೂಪಕರಲ್ಲಿ ಒಬ್ಬರು. ಅವರು ‘ಬಿಗ್ ಬಾಸ್’ನ ನಡೆಸಿಕೊಡೋ ರೀತಿ ಅನೇಕರಿಗೆ ಇಷ್ಟ. ಸುದೀಪ್ ಇದ್ದಾರೆ ಎನ್ನುವ ಕಾರಣಕ್ಕೆ ಬಿಗ್ ಬಾಸ್ ವೀಕ್ಷಣೆ ಮಾಡುವ ಅನೇಕರು ಇದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್’ ತೊರೆಯಲಿದ್ದಾರೆ ಎಂದು ವರದಿ ಆಗಿದೆ. ಒಂದೊಮ್ಮೆ ಇದು ನಿಜವೇ ಆದಲ್ಲಿ ಬಿಗ್ ಬಾಸ್ಗೆ ಈ ಮೊದಲು ಇದ್ದ ಬೇಡಿಕೆ ಕುಸಿಯೋ ಸಾಧ್ಯತೆ ಇದೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದೆ.
ಹಿಂದಿ ಬಿಗ್ ಬಾಸ್ ಒಟಿಟಿಯನ್ನು ಸಲ್ಮಾನ್ ಖಾನ್ ಬದಲು ಅನಿಲ್ ಕಪೂರ್ ನಡೆಸಿಕೊಟ್ಟಿದ್ದಾರೆ. ತಮಿಳಿನ ಬಿಗ್ ಬಾಸ್ಗೆ ನಟ ಕಮಲ್ ಹಾಸನ್ ಅವರು ಗುಡ್ಬೈ ಹೇಳಿದ್ದಾರೆ. ಅದೇ ರೀತಿ ಕನ್ನಡದಲ್ಲೂ ನಿರೂಪಕರನ್ನು ಬದಲಿಸುವ ಆಲೋಚನೆ ವಾಹಿನಿಯವರಿಗೆ ಬಂದಿದೆ ಎಂದು ವರದಿ ಆಗಿದೆ. ಇದರ ಜೊತೆಗೆ, ಬೇರೆ ನಿರೂಪಕರ ಹುಡುಕಾಟದಲ್ಲಿ ವಾಹಿನಿ ಬ್ಯುಸಿ ಆಗಿದೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆದಲ್ಲಿ ಟಿಆರ್ಪಿ ವಿಚಾರದಲ್ಲಿ ವಾಹಿನಿಗೆ ನಷ್ಟ ಉಂಟಾಗಬಹುದು ಎಂಬ ಮಾತುಗಳು ಕೇಳಿ ಬಂದಿವೆ.
ಸುದೀಪ್ ಇಷ್ಟಪಡೋ ಶೋ
‘ಬಿಗ್ ಬಾಸ್’ ಶೋನ ಸುದೀಪ್ ಕೇವಲ ಹಣಕ್ಕಾಗಿ ಮಾಡುತ್ತಿಲ್ಲ. ಅವರಿಗೆ ಈ ರಿಯಾಲಿಟಿ ಶೋ ಮೇಲೆ ವಿಶೇಷ ಪ್ರೀತಿ ಇದೆ. ಅವರು ಸ್ಪರ್ಧಿಗಳನ್ನು ಕುಟುಂಬದವರಂತೆ ನೋಡುತ್ತಾರೆ. ಸ್ಪರ್ಧಿಗಳ ಹೆಸರು ಹಾಳು ಮಾಡುವ ಪ್ರಯತ್ನ ನಡೆದರೆ ಅದನ್ನು ತಡೆಯುತ್ತಾರೆ. ಸ್ಪರ್ಧಿಗಳು ಹಾದಿ ತಪ್ಪಿದಾಗ ಅಣ್ಣನ ರೀತಿಯಲ್ಲಿ ಅವರ ಪರವಾಗಿ ನಿಲ್ಲುತ್ತಾರೆ, ಬುದ್ಧಿ ಹೇಳುತ್ತಾರೆ. ಸುದೀಪ್ ಅವರಿಗೆ ಈ ಶೋ ಬಗ್ಗೆ ವಿಶೇಷ ಪ್ರೀತಿ ಇದೆ.
ರಿಯಾಲಿಟಿ ಶೋನ ಮುಖವಾಗಿದ್ದಾರೆ ಸುದೀಪ್
ಸುದೀಪ್ ಅವರು ‘ಕನ್ನಡ ಬಿಗ್ ಬಾಸ್’ ಶೋನ 10 ಸೀಸನ್, ಒಂದು ಒಟಿಟಿ ಸೀಸನ್ ಹಾಗೂ ಒಂದು ಮಿನಿ ಸೀಸನ್ ನಡೆಸಿಕೊಟ್ಟಿದ್ದಾರೆ. ಈ ಕಾರಣಕ್ಕೆ ಬಿಗ್ ಬಾಸ್ ಎಂದರೆ ಅದು ಸುದೀಪ್ ಎನ್ನುವ ಭಾವನೆ ಅನೇಕರಲ್ಲಿ ಮೂಡಿದೆ. ‘ಬಿಗ್ ಬಾಸ್’ ಫೇಮಸ್ ಆಗಲು ಸುದೀಪ್ ಅವರ ನಿರೂಪಣೆಯ ಕೊಡುಗೆ ಕೂಡ ಸಾಕಷ್ಟಿದೆ.
ಖಡಕ್ ಮಾತು
ಕನ್ನಡದ ಬಿಗ್ ಬಾಸ್ನಲ್ಲಿ ಸುದೀಪ್ ಅವರ ಚಾಕಚಕ್ಯತೆಯೇ ಹೈಲೈಟ್. ಅವರು ಪರಿಸ್ಥಿತಿಗಳನ್ನು ನಿರ್ವಹಣೆ ಮಾಡೋದು ಅನೇಕರಿಗೆ ಇಷ್ಟ ಆಗುತ್ತದೆ. ತಪ್ಪು ಮಾಡಿದವರಿಗೆ ಅವರು ಕ್ಲಾಸ್ ತೆಗೆದುಕೊಳ್ಳೋದನ್ನು ನೋಡೋದೇ ಖುಷಿ. ಈಗ ಅವರ ಜಾಗದಲ್ಲಿ ಬೇರೆಯವರನ್ನು ಕಲ್ಪಿಸಿಕೊಳ್ಳಬೇಕು ಎಂದರೆ ವೀಕ್ಷಕರಿಗೆ ಸ್ವಲ್ಪ ಕಷ್ಟವೇ ಆಗಲಿದೆ.
ಇದನ್ನೂ ಓದಿ:
ಏನಾಗಬಹುದು?
ಒಂದೊಮ್ಮೆ ಸುದೀಪ್ ಅವರು ನಿರೂಪಣೆಯಿಂದ ಹಿಂದೆ ಸರಿದರೆ ಅಥವಾ ವಾಹಿನಿಯವರೇ ಸುದೀಪ್ ಅವರನ್ನು ಕೈಬಿಟ್ಟರೆ ಟಿಆರ್ಪಿ ವಿಚಾರದಲ್ಲಿ ಹಿನ್ನಡೆ ಆಗಬಹುದು. ಬಿಗ್ ಬಾಸ್ಗೆ ವಾರ ದಿನಗಳಲ್ಲಿ ಇರುವ ಟಿಆರ್ಪಿಗೂ ವೀಕೆಂಡ್ನಲ್ಲಿ ಇರುವ ಟಿಆರ್ಪಿಗೂ ಸಾಕಷ್ಟು ವ್ಯತ್ಯಾಸ ಇದೆ. ಸುದೀಪ್ ಕಾರಣದಿಂದ ವೀಕೆಂಡ್ನಲ್ಲಿ ಒಳ್ಳೆಯ ಟಿಆರ್ಪಿ ಬರುತ್ತದೆ. ಸುದೀಪ್ ಇಲ್ಲ ಎಂದಾದಾಗ ಸಹಜವಾಗಿ ಅವರ ಒಂದಷ್ಟು ಅಭಿಮಾನಿಗಳು ಬಿಗ್ ಬಾಸ್ ವೀಕ್ಷಣೆ ತೊರೆಯಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.