AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಪ್ರಸಾರವಾಗುತ್ತಾ ಬಿಗ್​​​ಬಾಸ್? ಎಷ್ಟು ಎಪಿಸೋಡ್​​ಗಳ ಚಿತ್ರೀಕರಣ ಆಗಿದೆ?

Bigg Boss Kannada 12: ಬಿಗ್​​​ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ವಾರಕ್ಕೂ ಹೆಚ್ಚು ಸಮಯವಾಗಿದೆ. ಇದೀಗ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಬಿಗ್​​ಬಾಸ್ ಮನೆಯಿದ್ದ ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಲಾಗಿದ್ದು, ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಗ್​​ಬಾಸ್ ಕಾರ್ಯಕ್ರಮ ಇಂದು ಪ್ರಸಾರ ಆಗುತ್ತದೆಯೇ? ಇನ್ನೂ ಎಷ್ಟು ದಿನಗಳ ಬ್ಯಾಕಪ್ ಇದೆ? ಇಲ್ಲಿದೆ ಮಾಹಿತಿ...

ಇಂದು ಪ್ರಸಾರವಾಗುತ್ತಾ ಬಿಗ್​​​ಬಾಸ್? ಎಷ್ಟು ಎಪಿಸೋಡ್​​ಗಳ ಚಿತ್ರೀಕರಣ ಆಗಿದೆ?
Bigg Boss Kannada 12
ಮಂಜುನಾಥ ಸಿ.
|

Updated on: Oct 08, 2025 | 8:14 AM

Share

ಬಿಗ್​​ಬಾಸ್​ ಕನ್ನಡ ಸೀಸನ್ 12 (Bigg Boss Kannada season 12) ಹಠಾತ್ತನೆ ಬಂದ್ ಆಗಿದೆ. ಕೆಲ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಬಿಗ್​​ಬಾಸ್ ಮನೆಗೆ ಅಧಿಕಾರಿಗಳು ಬೀಗ ಜಡಿದಿದ್ದು, ಸ್ಪರ್ಧಿಗಳನ್ನೆಲ್ಲ ಬಿಗ್​​ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಮನೆಯ ಸ್ಪರ್ಧಿಗಳೆಲ್ಲ ಈಗ ರಾಮನಗರದ ಬಳಿ ಇರುವ ಈಗಲ್​​ಟನ್ ರೆಸಾರ್ಟ್​​​ನಲ್ಲಿದ್ದಾರೆ. ಬಿಗ್​​ಬಾಸ್ ಆಯೋಜಕರು, ಸರ್ಕಾರದ ಕ್ರಮದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ. ನಿನ್ನೆ ಸಂಜೆ ವೇಳೆಗೆ ಬಿಗ್​​ಬಾಸ್ ಮನೆಗೆ ಬೀಗ ಜಡಿಯಲಾಗಿದ್ದು, ಇಂದು (ಅಕ್ಟೋಬರ್ 08) ಬಿಗ್​​ಬಾಸ್ ಎಪಿಸೋಡ್ ಪ್ರಸಾರವಾಗುತ್ತದೆಯಾ? ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.

ಬಿಗ್​​ಬಾಸ್ ಮನೆಗೆ ಬೀಗ ಹಾಕಿ ಮನೆ ಖಾಲಿ ಮಾಡಿದ್ದರೂ ಸಹ ಜಿಯೋ ಹಾಟ್​​ಸ್ಟಾರ್​​​ನಲ್ಲಿ ಬಿಗ್​​ಬಾಸ್ ಮನೆಯ ಲೈವ್ ಚಾಲ್ತಿಯಲ್ಲಿದೆ. ಬೆಳಿಗಿನ ವೇಳೆಗೆ ಬಿಗ್​​​ಬಾಸ್ ಮನೆಯ ಸ್ಪರ್ಧಿಗಳು ಮಲಗಿದ್ದಾರೆ ಎಂದು ಲೈವ್​​​ನಲ್ಲಿ ತೋರಿಸಲಾಗುತ್ತಿದೆ. ಅಸಲಿಗೆ ಬಿಗ್​​​ಬಾಸ್ ಶೋ ಪ್ರಸಾರಕ್ಕೆ 24 ಗಂಟೆ ಅಂತರ ಇರುವ ಕಾರಣ, ಇಂದು ರಾತ್ರಿ ಬಿಗ್​​​ಬಾಸ್ ಎಪಿಸೋಡ್ ಪ್ರಸಾರ ಆಗಲಿದೆ. ಭಾನುವಾರ-ಸೋಮವಾರ ನಡೆದ ಟಾಸ್ಕ್, ಮನೆಯ ಇನ್ನಿತರೆ ಡ್ರಾಮಾಗಳನ್ನು ಮಂಗಳವಾರ ಅಂದರೆ ನಿನ್ನೆಯ ಶೋನಲ್ಲಿ ಪ್ರಸಾರ ಮಾಡಲಾಗಿದೆ.

ಸೋಮವಾರ-ಮಂಗಳವಾರ ಚಿತ್ರೀಕರಣ ಮಾಡಿ ಎಡಿಟ್ ಮಾಡಲಾಗಿರುವ ಎಪಿಸೋಡ್​​ ಅನ್ನು ಇಂದು ಪ್ರಸಾರ ಮಾಡಲಾಗುತ್ತದೆ. ಅದು ಮಾತ್ರವೇ ಅಲ್ಲದೆ ಒಂದೊಮ್ಮೆ ಬಿಗ್​​ಬಾಸ್ ಆಯೋಜಕರು ಮನಸ್ಸು ಮಾಡಿದರೆ ಇನ್ನೂ ಒಂದೆರಡು ದಿನಗಳು ಪ್ರಸಾರ ಮಾಡಬಹುದಾದಷ್ಟು ಕಂಟೆಂಟ್ ಅವರುಗಳ ಬಳಿ ಇದೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಒಂದೆರಡು ದಿನಗಳ ಕಾಲ ಯಾವುದೇ ಅಡಚಣೆ ಇಲ್ಲದೆ ಬಿಗ್​​ಬಾಸ್ ಪ್ರಸಾರ ಆಗಲಿದೆ.

ಇದನ್ನೂ ಓದಿ:ರಣರಂಗವಾಯ್ತು ಬಿಗ್​​ಬಾಸ್ ಮನೆ: ಅಶ್ವಿನಿ ಗೌಡ vs ಅಶ್ವಿನಿ

ನಿನ್ನೆ ಸಹ ಜಿಯೋ ಹಾಟ್​​ಸ್ಟಾರ್​​​ನಲ್ಲಿ ಎಪಿಸೋಡ್​ ಪ್ರಸಾರದಲ್ಲಿ ತಡವಾಯ್ತು. ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಕಲರ್ಸ್ ಕನ್ನಡ, ‘ಅನಿರೀಕ್ಷಿತ ಕಾರಣಗಳಿಂದಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ‘ಬಿಗ್‌ಬಾಸ್‌’ನ ಇಂದಿನ ಸಂಚಿಕೆಯ ಪ್ರಕಟಣೆಯ ಸಮಯದಲ್ಲಿ ವ್ಯತ್ಯಯ ಸಂಭವಿಸಿದೆ. ಈ ಅಡಚಣೆಗಾಗಿ ಕ್ಷಮೆ ಕೋರುತ್ತೇವೆ. ಇಂದಿನ ಸಂಚಿಕೆ ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ’ ಎಂದು ಪ್ರಕಟಣೆ ಹೊರಡಿಸಿತು.

ಬಿಗ್​​ಬಾಸ್ ಮನೆಗೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಇದೀಗ ಜಾಲಿವುಡ್ ಸ್ಟುಡಿಯೋ, ಬಿಗ್​​ಬಾಸ್ ಆಯೋಜಕರು ನ್ಯಾಯಾಲಯದ ಮೆಟ್ಟಿಲೇರಲಿದ್ದು, ಘಟನೆಗೆ ಸಂಬಂಧಿಸಿದಂತೆ ಇಂದೇ ಆದೇಶ ಹೊರಬೀಳುವ ಸಾಧ್ಯತೆ ಇದೆ. ಒಂದೊಮ್ಮೆ ಇಂದೇ ಆದೇಶ ಹೊರಬಿದ್ದರೆ, ಬಿಗ್​​​ಬಾಸ್ ಕಾರ್ಯಕ್ರಮ ಯಾವುದೇ ಅಡಚಣೆ ಇಲ್ಲದೆ ಮುಂದುವರೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್