‘ಸರಿಗಮಪ’ ಹೊಸ ಸೀಸನ್​ಗೆ ವಿಶ್ವಾದ್ಯಂತ ಆಡಿಷನ್; ಜೀ ಕನ್ನಡ ವಾಹಿನಿಯಿಂದ ಹೊಸ ಪ್ರಯತ್ನ

SaReGaMaPa Season 20: ‘ಸರಿಗಮಪ’ ರಿಯಾಲಿಟಿ ಶೋಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಈ ಕಾರಣದಿಂದಲೇ ವಿಶ್ವಾದ್ಯಂತ ಆಡಿಷನ್ ನಡೆಸುವ ನಿರ್ಧಾರಕ್ಕೆ ಬಂದಿದೆ ಜೀ ಕನ್ನಡ ವಾಹಿನಿ.

‘ಸರಿಗಮಪ’ ಹೊಸ ಸೀಸನ್​ಗೆ ವಿಶ್ವಾದ್ಯಂತ ಆಡಿಷನ್; ಜೀ ಕನ್ನಡ ವಾಹಿನಿಯಿಂದ ಹೊಸ ಪ್ರಯತ್ನ
ಸರೆಗಮಪ
Follow us
ರಾಜೇಶ್ ದುಗ್ಗುಮನೆ
|

Updated on: Jul 10, 2023 | 7:41 AM

‘ಸರಿಗಮಪ’ (SaReGaMaPa) ರಿಯಾಲಿಟಿ ಶೋಗಳ ಆಡಿಷನ್ ಈ ಮೊದಲು ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿತ್ತು. ಬಳಿಕ ಅದನ್ನು ರಾಜ್ಯಾದ್ಯಂತ ವಿಸ್ತರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಆಡಿಷನ್ ಮಾಡಿ ಪ್ರತಿಭೆಗಳನ್ನು ಕರೆತರುವ ಕೆಲಸ ಆಯಿತು. ಈಗ ಜೀ ಕನ್ನಡ ವಾಹಿನಿ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ವಿಶ್ವಾದ್ಯಂತ ಇರುವ ಕನ್ನಡದವರಿಗಾಗಿ ಹೊಸ ರೀತಿಯಲ್ಲಿ ಆಡಿಷನ್ ಮಾಡಲು ಮುಂದಾಗಿದೆ. ವಿಶ್ವಾದ್ಯಂತ ಸಂಚಾರ ನಡೆಸಿ ಪ್ರತಿಭೆಗಳನ್ನು ಕರೆದು ತರಲು ಜೀ ಕನ್ನಡ (Zee Kannada) ವಾಹಿನಿ ಸಿದ್ಧವಾಗಿದೆ. ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ‘ಸರಿಗಮಪ’ ಈಗಾಗಲೇ 19 ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈಗ 20ನೇ ಸೀಸನ್​ಗೆ ತಯಾರಿ ನಡೆಯುತ್ತಿದೆ. ವಿವಿಧ ರಾಜ್ಯದ ಪ್ರತಿಭೆಗಳಿಗೂ ಈ ಶೋನಲ್ಲಿ ಅವಕಾಶ ಸಿಕ್ಕಿದೆ. ಈ ಶೋಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಈ ಕಾರಣದಿಂದಲೇ ವಿಶ್ವಾದ್ಯಂತ ಆಡಿಷನ್ ನಡೆಸುವ ನಿರ್ಧಾರಕ್ಕೆ ಬಂದಿದೆ ಜೀ ಕನ್ನಡ ವಾಹಿನಿ.

ಹೌದು, ವಿಶ್ವಾದ್ಯಂತ ಆಡಿಷನ್ ನಡೆಸುತ್ತಿರುವ ಕುರಿತು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ‘ಸಪ್ತ ಸಾಗರದಾಚೆ ಸ್ವರ ಸಂಚಾರ’ ಎನ್ನುವ ಕ್ಯಾಪ್ಶನ್​ನೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ‘ಪ್ರಥಮ ಬಾರಿಗೆ ವಿದೇಶದಲ್ಲಿ ಆಡಿಷನ್ಸ್ ಮಾಡುತ್ತಿದ್ದೇವೆ. ಸರಿಗಮಪ ಈಗ ವಿಶ್ವಕ್ಕೆ ವಿಸ್ತರಿಸಲಿದೆ. ಕನ್ನಡದ ಸ್ವರಸಂಭ್ರಮ ಈಗ ವಿಶ್ವ ಸಂಭ್ರಮ ಆಗಲಿದೆ. ವಿಶ್ವದ ಕನ್ನಡಿಗರಿಗಾಗಿ ಜೀ ಕನ್ನಡ ಶುರು ಮಾಡ್ತಿದೆ ವರ್ಲ್ಡ್​​ವೈಡ್ ಆಡಿಷನ್ಸ್​’ ಎಂದು ವಾಹಿನಿ ಪ್ರೋಮೋದಲ್ಲಿ ತಿಳಿಸಿದೆ.

ಇದನ್ನೂ ಓದಿ: ‘ಸರಿಗಮಪ ಲಿಟಲ್​​ ಚಾಂಪ್ಸ್’ ವಿನ್ನರ್​ ಪ್ರಗತಿ ಬಡಿಗೇರ್​ಗೆ 21 ಲಕ್ಷ ಮೌಲ್ಯದ ಸೈಟ್​; ಶಿವಾನಿಗೆ ಏನು?

ಅಂದಹಾಗೆ ವಿಶ್ವದ ಯಾವ ಯಾವ ರಾಷ್ಟ್ರಗಳಲ್ಲಿ ಈ ಆಡಿಷನ್ ನಡೆಯಲಿದೆ ಎನ್ನುವ ಕುರಿತು ಮಾಹಿತಿ ಹೊರಬಿದ್ದಿಲ್ಲ. ದುಬೈ, ಅಮೆರಿಕ ಮೊದಲಾದ ಕಡೆಗಳಲ್ಲಿ ಆಡಿಷನ್ಸ್ ನಡೆಯಬಹುದು ಎಂಬುದು ವೀಕ್ಷಕರ ಊಹೆ. ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

View this post on Instagram

A post shared by Zee Kannada (@zeekannada)

ಈಗಾಗಲೇ ‘ಸರಿಗಮಪ’ ಶೋ ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿದೆ. ಅನೇಕ ಗಾಯಕರನ್ನು ಇದು ಪರಿಚಯಿಸಿದೆ. ನಾದಬ್ರಹ್ಮ ಹಂಸಲೇಖ ಅವರ ಮಾರ್ಗದರ್ಶನದಿಂದ ಅನೇಕರ ಬದುಕು ಬದಲಾಗಿದೆ. ಇದರ ವೀಕ್ಷಕರ ವರ್ಗ ಕೂಡ ದೊಡ್ಡದಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ