ಮೇಕಿಂಗ್ ಮೂಲಕ ಗಮನ ಸೆಳೆದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ; ಎಲ್ಲವೂ ಸಿನಿಮಾ ಗುಣಮಟ್ಟ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಗಮನ ಸೆಳೆದಿದೆ. ಉತ್ತಮ ಗ್ರಾಫಿಕ್ಸ್ ಮತ್ತು ಸಿನಿಮಾ ಗುಣಮಟ್ಟದ ಚಿತ್ರೀಕರಣದೊಂದಿಗೆ, ಈ ಧಾರಾವಾಹಿಯು ಹಾರರ್ ಮತ್ತು ಮಂತ್ರ-ಮಾಟದ ಕಥಾವಸ್ತುವನ್ನು ಹೊಂದಿದೆ. ಶರತ್ ಪದ್ಮನಾಭ್, ನೀತಾ ಅಶೋಕ್ ಮತ್ತು ಇತರ ಪ್ರತಿಭಾವಂತ ಕಲಾವಿದರ ತಂಡ ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಮೇಕಿಂಗ್ ಮೂಲಕ ಗಮನ ಸೆಳೆದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ; ಎಲ್ಲವೂ ಸಿನಿಮಾ ಗುಣಮಟ್ಟ
ನಾ ನಿನ್ನ ಬಿಡಲಾರೆ
Updated By: ರಾಜೇಶ್ ದುಗ್ಗುಮನೆ

Updated on: Jan 30, 2025 | 7:52 AM

ಸಿನಿಮಾ ಹೆಸರುಗಳನ್ನೇ ಇಟ್ಟುಕೊಂಡು ಧಾರಾವಾಹಿಗಳನ್ನು ಮಾಡೋದು ಹೊಸ ಟ್ರೆಂಡ್ ಏನೂ ಅಲ್ಲ. ಅನಂತ್ ನಾಗ್ ಹಾಗೂ ಲಕ್ಷ್ಮೀ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಚಿತ್ರ ‘ನಾ ನಿನ್ನ ಬಿಡಲಾರೆ. ಈ ಸಿನಿಮಾನ ಪ್ರೇಕ್ಷಕರು ಮೆಚ್ಚಿಕೊಂಡಿದ್ದು ಗೊತ್ತೇ ಇದೆ. ಈಗ ಇದೇ ಹೆಸರಲ್ಲಿ ಜೀ ಕನ್ನಡದಲ್ಲಿ ಧಾರಾವಾಹಿ ಮೂಡಿ ಬಂದಿದೆ. ‘ನಾ ನಿನ್ನ ಬಿಡಲಾರೆ’ ಹೆಸರಿನ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿದೆ. ಇದರ ಗುಣಮಟ್ಟ ಹಾಗೂ ಮೇಕಿಂಗ್ ಬಗ್ಗೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

ಧಾರಾವಾಹಿಗಳು ಈಗಿನ ಕಾಲದಲ್ಲಿ ಸಿನಿಮಾ ಗುಣಮಟ್ಟದಲ್ಲೇ ಶೂಟ್ ಆಗುತ್ತವೆ. ಗ್ರಾಫಿಕ್ಸ್ ಕೂಡ ಉತ್ತಮವಾಗಿ ಬಳಕೆ ಮಾಡಲಾಗುತ್ತದೆ. ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಕೂಡ ಸಿನಿಮಾ ಗುಣಮಟ್ಟದಲ್ಲೇ ಮೂಡಿ ಬಂದಿದೆ. ಧಾರಾವಾಹಿಯ ಗ್ರಾಫಿಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಧಾರಾವಾಹಿ ನೋಡಿ ಜನರು ಕೊಂಡಾಡುತ್ತಿದ್ದಾರೆ.

ಸಾಮಾನ್ಯವಾಗಿ ಹಾರರ್ ಧಾರಾವಾಹಿ ಎಂದಾಗ ದೆವ್ವ ಬಂದು ಹೆದರಿಸೋದು, ಹಳೆಯ ಜನ್ಮದ ಕಥೆಗಳು ಇರುತ್ತವೆ. ಆದರೆ, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಾಟ-ಮಂತ್ರದ ಕಥೆ ಹೇಳಲಾಗಿದೆ. ಮೇಕಿಂಗ್ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸೋಮವಾರ (ಜನವರಿ 27) ಧಾರಾವಾಹಿ ಪ್ರಸಾರ ಆರಂಭಿಸಿದೆ. ದುಷ್ಟ ಶಕ್ತಿ ಹಾಗೂ ಒಳ್ಳೆ ಶಕ್ತಿಗಳ ನಡುವೆ ಕಾದಾಟ ಉಂಟಾಗುವ ಸೂಚನೆ ಸಿಕ್ಕಿದೆ.

ಹಿರಿಯ ಕಲಾವಿದರ ದಂಡು ಧಾರಾವಾಹಿಯಲ್ಲಿ ಇದೆ ಅನ್ನೋದು ವಿಶೇಷ. ಶರತ್‌ ಪದ್ಮನಾಭ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಇನ್ನು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ನೀತಾ ಅಶೋಕ್ ಕಿರುತೆರೆಗೆ ಮರಳಿದ್ದಾರೆ. ಮತ್ತೋರ್ವ ನಾಯಕ ನಟಿಯಾಗಿ ರಿಷಿಕಾ ನಟಿಸಿದ್ದಾರೆ. ಮಹಿತಾ ಗಿಲ್ಲಿ ಅವರಿಗೂ ಪಾತ್ರ ಸಿಕ್ಕಿದೆ. ವೀಣಾ ಸುಂದರ್ ಅವರು ಮೊದಲಿನಿಂದಲೂ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡವರು. ಅವರಿಗೆ ಈ ಧಾರಾವಾಹಿಯಲ್ಲಿ ಸಿಕ್ಕಿರೋದು ವಿಲನ್ ಪಾತ್ರ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಬಳಿಕ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಎರಡು ಹೊಸ ಧಾರಾವಾಹಿ

ವಿಶೇಷ ಎಂದರೆ, ಧಾರಾವಾಹಿಯಲ್ಲಿ ಅವರು ತಂತ್ರ-ಮಂತ್ರಗಳ ಅರಿತವರಾಗಿದ್ದು, ನಡೆದಿರುವ ಎಲ್ಲಾ ತಪ್ಪಿಗೆ ಅವರ ಪಾತ್ರ ದೊಡ್ಡದಿದೆ. ಬಾಬು ಹಿರಣ್ಣಯ್ಯ ಅವರಿಗೆ ಪೂಜಾರಿಯ ಪಾತ್ರ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಇರೋದು ಪಕ್ಕಾ ಹಾರರ್ ಅಂಶ. ಇದರ ಮೇಕಿಂಗ್ ಗಮನ ಸೆಳೆದಿದೆ. ಸಿನಿಮಾ ಗುಣಮಟ್ಟದಲ್ಲಿ ಧಾರಾವಾಹಿ ಮೂಡಿ ಬಂದಿದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.