BOSS ಶರ್ಟ್ ಹಾಕಿ ‘ಸರಿಗಮಪ’ ಶೋಗೆ ಬಂದ ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ನಿಂದ ಗುಣಮುಖರಾಗಿ ‘ಸರಿಗಮಪ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಬಂದ ಅವರು ಜೀ ಕನ್ನಡ ವಾಹಿನಿಯ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ಸಂತೋಷಗೊಳಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದ ಅನುಶ್ರೀ ಮತ್ತು ಇತರರು ಶಿವಣ್ಣನನ್ನು ಭಾವುಕವಾಗಿ ಸ್ವಾಗತಿಸಿದರು.

ಶಿವರಾಜ್ಕುಮಾರ್ ಅವರ ಚೈತನ್ಯ ಎಲ್ಲರಿಗೂ ಮಾದರಿ. ಇದು ಅನೇಕರಿಗೆ ಗೊತ್ತಿದೆ. ಅವರು ಇತ್ತೀಚೆಗೆ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ‘ಸರಿಗಮಪ’ ವೇದಿಕೆ ಏರಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ಜೀ ಕನ್ನಡದ ಜೊತೆ ಒಳ್ಳೆಯ ಒಡನಾಟ ಇದೆ. ಈ ಮೊದಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋಗೆ ಅವರು ಜಡ್ಜ್ ಆಗಿದ್ದರು. ಇದು ಪೂರ್ಣಗೊಳ್ಳುತ್ತಿದ್ದಂತೆ ಶಿವಣ್ಣ ಅಮೆರಿಕಕ್ಕೆ ಚಿಕಿತ್ಸೆಗೆ ತೆರಳಿದರು. ಕೆಲ ದಿನಗಳ ಹಿಂದೆ ಅವರು ಬೆಂಗಳೂರಿಗೆ ಮರಳಿದ್ದಾರೆ. ವಿಶೇಷ ಎಂದರೆ ಅವರು ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿ ಇದರ ಪ್ರೋಮೋ ರಿಲೀಸ್ ಮಾಡಿದೆ.
‘ಸರಿಗಮಪ’ ಶೋ ಇತ್ತೀಚೆಗೆ ಆರಂಭ ಆಗಿದೆ. ಈ ವೇದಿಕೆ ಮೇಲೆ ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್ ಆಗಮಿಸಿದ್ದಾರೆ. ‘ಜೀವನವನ್ನು ಗೆದ್ದು ಬಂದತಹ ನಿಜವಾದ ಗೆಲುವಿನ ಸರದಾರರು’ ಎಂದು ಅನುಶ್ರೀ ಅವರು ಶಿವಣ್ಣನ ಎಂಟ್ರಿಗೆ ಡೈಲಾಗ್ ಹೊಡೆದಿದ್ದಾರೆ. ಶಿವರಾಜ್ಕುಮಾರ್ ಅವರು ಆಗಮಿಸುತ್ತಿದ್ದಂತೆ ವೇದಿಕೆ ಮೇಲಿದ್ದ ತಾರಾ, ಶ್ರುತಿ ಆ್ಯಂಕರ್ ಅನುಶ್ರೀ ಕಣ್ಣೀರು ಹಾಕಿದ್ದಾರೆ. ಅವರನ್ನು ತಬ್ಬಿ ಸ್ವಾಗತಿಸಿದ್ದಾರೆ. ಅವರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.
View this post on Instagram
‘ಸರಿಗಮಪ ಮಹಾ ಮನರಂಜನೆ’ ಎಂದು ಜೀ ಕನ್ನಡ ವಾಹಿನಿ ಇದಕ್ಕೆ ಟೈಟಲ್ ನೀಡಿದೆ. ಈ ಎಪಿಸೋಡ್ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಕಾಣಲಿದೆ. ಈ ಎಪಿಸೋಡ್ ನೋಡಲು ವೀಕ್ಷಕರು ಕಾದಿದ್ದಾರೆ. ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಗೆದ್ದು ಬಂದ ರೀತಿಯನ್ನು ವಿವರಿಸುವ ಸಾಧ್ಯತೆ ಇದೆ. ಈ ಮೂಲಕ ಅನೇಕರಿಗೆ ಸ್ಫೂರ್ತಿ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಜಕೀಯ ಹಾಗೂ ಸಿನಿಮಾ ಗಣ್ಯರು
ಶಿವರಾಜ್ಕುಮಾರ್ ಅವರು ಮುಂದಿನ ಕೆಲ ತಿಂಗಳು ವಿಶ್ರಾಂತಿಯಲ್ಲಿ ಇರಲಿದ್ದಾರೆ. ಆ ಸಂದರ್ಭದಲ್ಲಿ ಅವರು ಸಿನಿಮಾ ಕೆಲಸಗಳನ್ನು ಮಾಡುತ್ತಿಲ್ಲ. ಸಂಪೂರ್ಣವಾಗಿ ವಿಶ್ರಾಂತಿ ಪಡೆದ ನಂತರ ಅವರು ಮರಳಿ ಕೆಲಸಕ್ಕೆ ಬರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:57 am, Thu, 30 January 25